![Social–media-Stars](https://www.udayavani.com/wp-content/uploads/2025/02/Social-media-Stars-415x249.jpg)
![Social–media-Stars](https://www.udayavani.com/wp-content/uploads/2025/02/Social-media-Stars-415x249.jpg)
Team Udayavani, Jan 30, 2025, 12:59 AM IST
ದರ್ಪಣವು ಇದ್ದ ಪ್ರತಿಬಿಂಬವನ್ನು ವ್ಯಕ್ತಗೊಳಿಸುವುದೇ ಹೊರತು ಸೃಷ್ಟಿ ಮಾಡುವುದಲ್ಲ. ಉಪಾಧಿ ಎಂದರೆ ಇಲ್ಲಿ ದರ್ಪಣ. ವಸ್ತು ಇರುವಾಗ ನೆರಳು ಇರುತ್ತದೆ, ವಸ್ತು ಇಲ್ಲದಾಗ ನೆರಳು ಕಾಣದು ಅಂದರೆ ಇಲ್ಲವೆಂದಾಗುತ್ತದೋ? ಉಪಾಧಿ ನಾಶವಾದಾಗ ಪ್ರತಿಬಿಂಬ ನಾಶವಾಗುವುದಿಲ್ಲ. ಪ್ರತಿಬಿಂಬ ಮೊದಲಿನಿಂದಲೂ ಇತ್ತು. ಬಿಂಬ (ದರ್ಪಣ) ಬಂದಾಗ ಮತ್ತೆ ಪ್ರತಿಬಿಂಬ ಬಂತು. ಬಿಂಬ (ಭಗವಂತ) ಸರ್ವತ್ರ ವ್ಯಾಪ್ತ. ನಾವು ಸರ್ವತ್ರ ವ್ಯಾಪ್ತರಲ್ಲ. ಉಪಾಧಿ ಯಾವುದು? ದೇಹವೇ ಉಪಾಧಿ. ಕನ್ನಡಿ ನಾಶವಾದಾಗ ಪ್ರತಿಬಿಂಬವೂ ನಾಶವಾಗುತ್ತದೆ ಎಂದು ಹೇಳುವುದಾದರೂ ದೇಹವೆಂದರೆ ಈ ಭೌತಿಕ ದೇಹವಲ್ಲ, ಅದು ಸ್ವರೂಪದೇಹ. ಸ್ವರೂಪದೇಹಕ್ಕೆ ನಾಶವಿಲ್ಲ. ಬಿಂಬನಾದ ಭಗವಂತನಿಗೂ ನಾಶವಿಲ್ಲ. ಜೀವಿಗಳ ಸ್ವರೂಪದೇಹಕ್ಕೂ ನಾಶವಿಲ್ಲ. ಕನ್ನಡಿಯೂ ಇದೆ, ಪ್ರತಿಬಿಂಬವೂ ಇದೆ.
ಬಿಂಬಭೂತನಾದ ಭಗವಂತ ಎಲ್ಲ ಕಡೆ ವ್ಯಾಪ್ತಿಸಿರುವುದರಿಂದ ಪ್ರತಿಬಿಂಬಕ್ಕೆ ವಿಯೋಗವೇ ಇಲ್ಲ. ಬಿಂಬದ ಸಾನ್ನಿಧ್ಯ ನಾಶವೂ ಇಲ್ಲ. ಜೀವನಿಗೆ ಯಾವ ವಿಧದಿಂದಲೂ ನಾಶವಿಲ್ಲದಿರುವುದರಿಂದ ಚಿಂತಿಸುವ ಅಗತ್ಯವಿಲ್ಲ. ಭೌತಿಕ ದೇಹ ನಾಶವಾಗುತ್ತದೆ. ಇದನ್ನೇ ಕನ್ನಡಿಗೆ ಹೋಲಿಸಿದ್ದು, ಅದು ನಾಶವಾಗುತ್ತದೆ ಎಂದಾದರೆ ಅದು ಭೌತಿಕ ದೇಹ. ಸ್ವರೂಪವಾದ ದೇಹ ಚಿನ್ಮಯ ರೂಪದಲ್ಲಿರುತ್ತದೆ. ಬಿಂಬ, ಕನ್ನಡಿ, ಪ್ರತಿಬಿಂಬ ಬೇರೆ ಬೇರೆ. ಜೀವನ ವಿಷಯದಲ್ಲಿ ತನಗೆ ತಾನೇ ಉಪಾಧಿಯಾಗುವುದಿಲ್ಲ, ಆತನೇ ಪ್ರತಿಬಿಂಬ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811
Udupi: ಗ್ರಾಮೀಣ ಭಾಗದ ಕಾಲುಸಂಕ 3 ವರ್ಷಗಳಲ್ಲಿ ಪೂರ್ಣ: ಸಚಿವ ಸತೀಶ್ ಜಾರಕಿಹೊಳಿ
Udupi: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿ: ಯಶ್‌ಪಾಲ್
ಸಿಎಸ್‌ಟಿ – ಮಂಗಳೂರು ಎಕ್ಸ್‌ಪ್ರೆಸ್ ರೈಲಲ್ಲಿ ಕಳವು ಪ್ರಕರಣ ಮತ್ತೆ ಕಾಪುವಿಗೆ ವರ್ಗಾವಣೆ
Udupi: ಗೀತಾರ್ಥ ಚಿಂತನೆ-190: ಎಲ್ಲ ತಿಳಿದಿದೆ ಎಂಬ ಪ್ರಜ್ಞೆ ಅಪಾಯಕಾರಿ
Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’
Social Media Virals: ಸೋಶಿಯಲ್ ಮೀಡಿಯಾ ತಂದುಕೊಟ್ಟ “ಸ್ಟಾರ್ ಪಟ್ಟ’
Congress Talk Fight: ಡಿಸಿಎಂ ಡಿ.ಕೆ.ಶಿವಕುಮಾರ್‌ಗೇ ಸಚಿವ ಕೆ.ಎನ್.ರಾಜಣ್ಣ ಸಡ್ಡು!
ನಾವು ಕಾನ್ವೆಂಟ್‌ನಲ್ಲಿ ಓದಿದವರು ಕನ್ನಡದ ಬಗ್ಗೆ ತಿಳಿವಳಿಕೆ ಇಲ್ಲ: ಶಿಕ್ಷಣ ಸಚಿವ ಮಧು
Tragedy: ಡೆ *ತ್‌ನೋಟ್ ಬರೆದಿಟ್ಟು ಪುತ್ರಿಯ ಕೊ*ದು ಗ್ರಾ.ಪಂ.ಅಧ್ಯಕ್ಷೆಯೂ ಆತ್ಮಹ*ತ್ಯೆ!
Govt School: ಶಾಲಾ ಮಕ್ಕಳಿಗೆ ಚಿಕ್ಕಿ ವಿತರಣೆ ಸ್ಥಗಿತಗೊಳಿಸಿದ ಶಿಕ್ಷಣ ಇಲಾಖೆ!
You seem to have an Ad Blocker on.
To continue reading, please turn it off or whitelist Udayavani.