Udupi: ಗೀತಾರ್ಥ ಚಿಂತನೆ-73 ಸ್ವಾರ್ಥಕ್ಕಾಗಿ ಕುಲನಾಶಕ್ಕೂ ಸಿದ್ಧರಾದವರು
Team Udayavani, Oct 24, 2024, 12:47 AM IST
ದುಷ್ಟರು, ಶಿಷ್ಟರು ಎನ್ನುವಾಗ ನಮ್ಮವರು ದುಷ್ಟರಾದರೂ ಪರವಾಗಿಲ್ಲ, ಶತ್ರುಗಳು ಒಳ್ಳೆಯವರಾದರೂ ಸಹಿಸಲು ಆಗುತ್ತಿಲ್ಲ ಎನ್ನುತ್ತಾನೆ ಅರ್ಜುನ. ಇಂತಹ ವಿಚಿತ್ರ ವ್ಯಾಮೋಹ ಅರ್ಜುನನನ್ನು ಕಾಡುತ್ತಿದೆ. ದ್ರೋಹಿಗಳನ್ನು ಕೊಂದರೆ ಪುಣ್ಯ ಬರುತ್ತದೆ ಎಂದು ಹೇಳಬೇಕಾದವನು ಪಾಪ ಬರುತ್ತದೆ ಎನ್ನುತ್ತಾನಲ್ಲ? ದುರ್ಯೋಧನಾದಿಗಳು ವನವಾಸ, ಅಜ್ಞಾತವಾಸದ ಬಳಿಕ ರಾಜ್ಯವನ್ನು ಕೊಡುತ್ತೇನೆಂದವರು ಆ ಮಾತಿಗೆ ತಪ್ಪಿದ್ದಾರೆ. ಆ ಕಾಲದಲ್ಲಿ ರಿಜಿಸ್ಟ್ರೇಶನ್ ಇರಲಿಲ್ಲ. ಬಾಯಿಮಾತಿನ
ಕಾಲ. ಈಗ ಎರಡು ಅವಧಿಗೆ ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಲು ಒಪ್ಪಿ ಬಳಿಕ ಬಿಟ್ಟುಕೊಡುವುದಿಲ್ಲ ಎಂದ ಹಾಗಾಯಿತು. ವಿಶ್ವಾಸದ್ರೋಹವೇ ಮಹಾಪಾತಕ. ಇಂತಹ ಮಿತ್ರದ್ರೋಹ ಎಸಗಿದವ ಸತ್ತರೆ ಪಾಪ ಬರುವುದು ಹೇಗೆ? ಇನ್ನೊಂದು ಕಡೆ ಯುದ್ಧ ನಡೆದರೆ ಅಪಾರ ಪ್ರಮಾಣದ ನಷ್ಟವಾಗುತ್ತದೆ. ಜಗತ್ತೇ ನಾಶವಾದರೂ ನನ್ನ ಸ್ವಾರ್ಥವನ್ನು ಬಿಡುವುದಿಲ್ಲವೆಂಬ ಹಾಗಾಯಿತು. ಕೈಕೇಯಿ ಕೂಡ ಹೀಗೆ ಮಾಡಿದ್ದಳು. ಅವಳು ಎಂತಹ ಚಾಣಾಕ್ಷ ಮಾತನ್ನಾಡಿದ್ದಾಳೆಂದರೆ ಕೊಟ್ಟ ಮಾತನ್ನು ಉಳಿಸಿ ದಶರಥ ಸತ್ತರೂ ಒಳ್ಳೆಯದಲ್ಲವೆ ಎಂದೂ, ಕುಲಕ್ಷಯ ಎಂದಾದರೂ ಆಗುವಂಥದ್ದು ಎಂದಿದ್ದಳು ಆಕೆ. ಇಲ್ಲಿ ದುರ್ಯೋಧನಾದಿಗಳೂ ಹೀಗೆಯೇ ನಡೆದುಕೊಳ್ಳುತ್ತಾರೆ. ತಮ್ಮ ಸ್ವಾರ್ಥಕ್ಕಾಗಿ ಕುಲನಾಶವಾದರೂ ಆದೀತು ಎಂದವರು ದುರ್ಯೋಧನಾದಿಗಳು.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.