Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
Team Udayavani, Nov 5, 2024, 12:15 AM IST
ತಂತಥಾ ಕೃಪಯಾವಿಷ್ಟಮಶ್ರುಪೂರ್ಣಾಕುಲೇಕ್ಷಣಮ್| ವಿಷೀದಂತಮಿದಂ ವಾಕ್ಯಮುವಾಚ ಮಧುಸೂದನಃ||
ಎರಡನೆಯ ಅಧ್ಯಾಯದಲ್ಲಿ ಸಂಜಯ ಹೇಳುವ ಮೊದಲ ಶ್ಲೋಕ. ಮಧುಸೂದನ ಎಂದು ಕೃಷ್ಣನನ್ನು ಕರೆದಿದ್ದಾನೆ. ಮಧು ಎಂಬ ರಾಕ್ಷಸನನ್ನು ಕೊಂದದ್ದಕ್ಕಾಗಿ ಈ ಹೆಸರು ಇದೆಯಾರೂ, ಇಲ್ಲಿ ಬೇರೆ ಅರ್ಥವಿದೆ.
ಮಧುವಾದದ್ದನ್ನು ನಾಶಮಾಡುವವನೀತ. ಸಿಹಿ ಮಾತಿಗೆ ಒಳಗಾಗದವ ಎಂದರ್ಥ. ಅರ್ಜುನನ ಮಾತನ್ನು ಇನ್ನಾರೋ ಹೇಳಿದ್ದರೆ “ಹೌದು ಮಾರಾಯಾ’ ಎಂದು ಒಪ್ಪಿಕೊಳ್ಳುವ ಸ್ಥಿತಿ ಬರುತ್ತಿತ್ತು. ಕೃಷ್ಣ ಅಂತಹವನಲ್ಲ. ಅರ್ಜುನನಿಗೆ ದುಃಖವೂ ಆಗಿದೆ, ಚಂಚಲವೂ ಆಗಿದೆ.
ಆತ ಗೊಂದಲದಲ್ಲಿದ್ದಾನೆ. ಇಲ್ಲಿ ಕೃಪಾ ಎಂಬ ಶಬ್ದವಿದೆ. ಒಂದೆಡೆ ಮೋಹ, ಇನ್ನೊಂದೆಡೆ ಕೃಪಾ. ದೊಡ್ಡವರಿಗೆ ಚಿಕ್ಕವರನ್ನು ಕಂಡಾಗ, ಬಲಿಷ್ಠರಿಗೆ ದುರ್ಬಲರನ್ನು ಕಂಡಾಗ ಕೃಪೆ ಬರುತ್ತದೆ. ಕೃಪೆ ಬರುವುದು ಇನ್ನೊಬ್ಬ ಕಷ್ಟದಲ್ಲಿರುವಾಗ. ಅವರು ಅಜ್ಞಾನದಲ್ಲಿದ್ದಾರೆ. ನನಗೆ ಈಗಲಾದರೂ ಜ್ಞಾನವಾಗಿದೆ ಎಂಬ ಭಾವ ಅರ್ಜುನನಿಗೆ ಇದೆ. ಎರಡೂ ಅಹಂಕಾರದ ಉತ್ಪನ್ನಗಳು.
ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್| ಅನಾರ್ಯಜುಷ್ಟಮಸ್ವಗ್ಯಮ್ ಅಕೀರ್ತಿಕರಮರ್ಜುನ|| ಗೀತೆಯಲ್ಲಿ ಕೃಷ್ಣನ ಮೊದಲ ಪ್ರತಿಕ್ರಿಯೆ ಇದು. ಕೃಷ್ಣನ ಮೊದಲ ಮಾತು ಇಡೀ ಚಿತ್ರಣವನ್ನು ಸೂಚಿಸುತ್ತದೆ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ
– ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ ಗೀತಾ ಮಂದಿರ,
ಉಡುಪಿ ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.