Udupi; ಗೀತಾರ್ಥ ಚಿಂತನೆ-117: ಅರ್ಜುನ ನಿಮಿತ್ತ, ನಮಗೆಲ್ಲರಿಗೂ ಗೀತೋಪದೇಶ
Team Udayavani, Dec 7, 2024, 11:49 PM IST
ಭಾವನೆಗೆ ಬುದ್ಧಿಗಿಂತ ಪ್ರಾಶಸ್ತ್ಯ ಸಿಗಬೇಕು. “ನಾನುಶೋಚಂತಿ ಪಂಡಿತಾಃ’. ಎನ್ನುವಾಗ ದುಃಖವನ್ನು ಭೂತಕಾಲದಲ್ಲಿಯೂ, ವಾದ ಮಾಡುತ್ತಿದ್ದೀ ಎಂದು ವರ್ತಮಾನದಲ್ಲಿಯೂ ಹೇಳುತ್ತಾನೆ. ಉಳಿದವರ ದುಃಖವನ್ನು ಅನುಸರಿಸಿ ದುಃಖಪಟ್ಟದ್ದೇ ವಿನಾ ನಿನ್ನದೇ ಅಲ್ಲ ಎನ್ನುತ್ತಾನೆ. ದ್ರೋಣಾದಿಗಳ ಸಾವಿನ ಬಗ್ಗೆ ಹೇಳಿದನೆ ವಿನಾ ಈಶ್ವರನ ಬಗ್ಗೆ ಅರ್ಜುನ ಏನನ್ನೂ ಹೇಳದ ಕಾರಣ ಈಶ್ವರನಾದ ತಾನೂ, ನೀವೆಲ್ಲರೂ ನಿತ್ಯ ಎಂದು ಕೃಷ್ಣ ಹೇಳಿದ.
ಸಮಸ್ಯೆಗಳು ಬಂದಾಗ ವಿಕಲ್ಪ ಮಾಡಿದರೆ ಅದರ ಪ್ರಮಾಣವನ್ನು ಕಡಿಮೆಯಾಗುತ್ತದೆ. ಆದ್ದರಿಂದ ಕೃಷ್ಣ “ನಿನ್ನ ದುಃಖ ದೇಹ ನಾಶವಾಗುತ್ತದೆಂದೋ? ಆತ್ಮ ನಾಶವಾಗುತ್ತದೆಂದೋ? ‘ ಎಂದು ಕೇಳಿ ವಿಕಲ್ಪಗೊಳಿಸುತ್ತಾನೆ. ದೇಹವೂ, ಆತ್ಮವೂ ನಾಶವಿಲ್ಲದಿರುವಾಗ ಸಮಸ್ಯೆ ಏನು ಎಂದುತ್ತರಿಸುತ್ತಾನೆ. ಒಂದು ಸಮಸ್ಯೆಯನ್ನು ಹೇಗೆ ಬಗೆ ಹರಿಸಬೇಕು ಎನ್ನುವುದಕ್ಕೆ ಕೃಷ್ಣ ಉತ್ತಮ ಉದಾಹರಣೆ. ಜನನ ಮರಣ ಜೀವಿಗಳಿಗೆ ಮಾತ್ರ ಭಗವಂತನಿಗೆ ಇಲ್ಲ ಎಂದು ಸ್ಕಾಂದ ಪುರಾಣದಲ್ಲಿ ಸ್ಪಷ್ಟಪಡಿಸಲಾಗಿದೆ. ಭಗವಂತನಿಗೆ ದೇಹವಿಲ್ಲ, ಆತ ನಿತ್ಯ. ಆತನಿಗೆ ದೇಹನಾಶವಾಗುವ ಪ್ರಶ್ನೆಯೇ ಬರುವುದಿಲ್ಲ. ಅಲ್ಲಿ ಅರ್ಜುನ ಮಾತ್ರ ಇದ್ದದ್ದು. ಆತನಿಗಾದರೋ ವೇದಾಂತ ಗೊತ್ತಿತ್ತು. ಆತನನ್ನು ನಿಮಿತ್ತ ಮಾಡಿಕೊಂಡು ಉಳಿದವರಿಗೂ ಕೃಷ್ಣ ಉತ್ತರಿಸಿದ್ದ. “ದೇಹ ಹೋಗುತ್ತದೆ ಹೌದು, ಆದರೆ ಇದುವರೆಗಿನ ಒಡನಾಟದಿಂದ ಸ್ಮರಣೆಗೆ ಬರುತ್ತದಲ್ಲ’ ಎಂಬ ಸಂಶಯಕ್ಕೂ ಉತ್ತರಿಸುತ್ತಾನೆ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.