Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ
Team Udayavani, Oct 5, 2024, 12:30 AM IST
“ಧೀಮಾನ್’ ಆದ ದೃಷ್ಟದ್ಯುಮ್ನ ವ್ಯವಸ್ಥಿತವಾಗಿ ಸೇನಾ ವ್ಯೂಹವನ್ನು ರಚಿಸಿದ್ದಾನೆಂದು ದುರ್ಯೋಧನ ದ್ರೋಣಾಚಾರ್ಯರಲ್ಲಿ ಬಣ್ಣಿಸುತ್ತಾನೆ. ಧೀಶಕ್ತಿ, ಧೀಮಾನ್‌ಗೂ ಬುದ್ಧಿವಂತಿಕೆಗೂ ವ್ಯತ್ಯಾಸವಿದೆ. ಧೀ= ಪ್ರತಿಭೆ= ತತ್‌ಕ್ಷಣ ಸ್ಫುರಣೆ. ಗಾಯತ್ರೀ ಮಂತ್ರದಲ್ಲಿ “ಧಿಯೋ ಯೋನಃ ಪ್ರಚೋದಯಾತ್’ ಎನ್ನುವುದೂ ಇದನ್ನೇ. ಆ ಕ್ಷಣದಲ್ಲಿ ಹೊಳೆಯಬೇಕು.
ಬುದ್ಧಿಮಾನ್, ಬುದ್ಧಿವಂತ ಅಂದರೆ ವಿಚಾರ ಮಾಡಿ ತಳೆಯುವ ನಿರ್ಣಯ. ಧೀಶಕ್ತಿ ಎನ್ನುವುದು ಯಾರ ಕೈಯಲ್ಲೂ ಇಲ್ಲ. ಆಂಜನೇಯನಿಗೆ ಆ ಶಕ್ತಿ ಇತ್ತು. ಈತ ಧೀಶಕ್ತಿಗೆ ಉತ್ತಮ ಉದಾಹರಣೆ. ಸುರಸೆ ಎಂಬ ರಾಕ್ಷಸಿ ಬಂದಾಗ ಆತ ಕ್ರಿಮಿ ರೂಪದಲ್ಲಿ ಒಳಗೆ ಹೋಗಿ ಹೊರಗೆ ಬಂದದ್ದು, ಬಾಲಕ್ಕೆ ಬೆಂಕಿ ಹಚ್ಚಿಕೊಂಡು ಲಂಕೆಯನ್ನೇ ದಹಿಸಿದ್ದು, ಸಿಂಹಿಕೆ ಘಟನೆ ಇವು ಉದಾಹರಣೆಗಳು. ಆತ ಕೈಗೊಂಡ ಸೀತಾ ಪತ್ತೆ ಕಾರ್ಯವೇ ಅಮೋಘ. ಆತ ಸೀತೆಯನ್ನು ಕಂಡಿರಲೇ ಇಲ್ಲ. ಕಾಣದೆ ಇದ್ದ ಒಬ್ಬ ಸ್ತ್ರೀಯನ್ನು ಬ್ರಹ್ಮಚಾರಿಯಾದ ಈತ ಪತ್ತೆ ಹಚ್ಚಿದ್ದು ಸಾಮಾನ್ಯವೇ? ಸುಂದರಕಾಂಡದಲ್ಲಿ ಹೆಜ್ಜೆ ಹೆಜ್ಜೆಗೆ ಧೀಶಕ್ತಿ ತೋರುತ್ತದೆ. ಇಲ್ಲಿ ದ್ರೋಣಾಚಾರ್ಯರನ್ನು ಕೊಲ್ಲಲು ಹುಟ್ಟಿದ ದೃಷ್ಟದ್ಯುಮ್ನ ದ್ರೋಣರಲ್ಲಿಯೇ ಬಂದು ಶಿಷ್ಯತ್ವವನ್ನು ತೆಗೆದುಕೊಂಡದ್ದು ಧೀಮಂತಿಕೆಯಲ್ಲವೆ? ಆತ ತನ್ನನ್ನೇ ಕೊಲ್ಲಲು ಹುಟ್ಟಿದ್ದು ಎನ್ನುವುದು ದ್ರೋಣರಿಗೂ ಗೊತ್ತು. ಅವರಿಂದಲೇ ವಿದ್ಯೆಯ ಗುಟ್ಟು ತಿಳಿದದ್ದು ಧೀಶಕ್ತಿಯ ಪ್ರತೀಕ ಎಂದು ದುರ್ಯೋಧನ ಕೆಣಕಿದಂತೆ ಹೇಳುತ್ತಾನೆ.
-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Udupi: ಗೀತೆಯ ಸಂದೇಶ ಪ್ರತೀ ಮನೆಯನ್ನೂ ಪ್ರವೇಶಿಸಲಿ: ಕಾಂಚಿ ಶ್ರೀ
Udupi: ಎಂಜಿಎಂ ಕಾಲೇಜಿನಲ್ಲಿ ನ.29 ರಿಂದ ಡಿ.1ವರೆಗೆ ಅಮೃತ ಮಹೋತ್ಸವ ಸಂಭ್ರಮ
Udupi: ಗೀತಾರ್ಥ ಚಿಂತನೆ-100: ಸತ್ತಾಗ ದುಃಖ, ಸಾಯುತ್ತಿರುವಾಗಲ್ಲ!
Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.