Udupi ಜಿಎಸ್‌ಬಿ ಹಿತರಕ್ಷಣ ವೇದಿಕೆ: ಶೈಕ್ಷಣಿಕ ಕಾರ್ಯಾಗಾರ
ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ದತ್ತು ಸ್ವೀಕಾರ, ವಿದ್ಯಾರ್ಥಿವೇತನ ವಿತರಣೆ
Team Udayavani, Aug 25, 2024, 11:55 PM IST
ಉಡುಪಿ: “ಸಂಘಟನೆಯಿಂದ ಸೇವೆ’ ಇದು ಜಿಎಸ್‌ಬಿ ಸಮಾಜ ಹಿತರಕ್ಷಣ ವೇದಿಕೆಯ ವಿಶೇಷವಾಗಿದ್ದು, ಸಂಘಟನೆ ಜತೆಗೆ ಸಮಾಜಮುಖಿ ಕಾರ್ಯಗಳಿಗೂ ಒತ್ತು ನೀಡಿ ಕಟ್ಟ ಕಡೆಯ ವ್ಯಕ್ತಿಗೂ ಸ್ಪಂದಿಸುವ ಮೌಲ್ಯದ ಮೂಲಕ ಇಡೀ ಸಮಾಜಕ್ಕೆ ಮಾದರಿ ಸಂಘಟನೆಯಾಗಿದೆ ಎಂದು ಪುತ್ತೂರಿನ ಆನಂದಾಶ್ರಮ ಸೇವಾ ಟ್ರಸ್ಟ್‌ನ ಸಂಸ್ಥಾಪಕಿ ಡಾ| ಪಿ.ಗೌರಿ ಪೈ ಹೇಳಿದರು.
ಜಿಲ್ಲಾ ಜಿಎಸ್‌ಬಿ ಸಮಾಜ ಹಿತರಕ್ಷಣ ವೇದಿಕೆ ನೇತೃತ್ವದಲ್ಲಿ, ಮುದರಂಗಡಿ ಸಮರ್ಪಣ ಚಾರಿಟೆಬಲ್ ಟ್ರಸ್ಟ್ ಸಹಯೋಗದೊಂದಿಗೆ ಅಂಬಾಗಿಲಿನ ಅಮೃತ್ ಗಾರ್ಡನ್ ಸಭಾಭವನದಲ್ಲಿ ಜರಗಿದ ಜಿಎಸ್‌ಬಿ ವಿದ್ಯಾರ್ಥಿವೇತನ ವಿತರಣೆ, ಶೈಕ್ಷಣಿಕ ದತ್ತು ಸ್ವೀಕಾರ, ಶೈಕ್ಷಣಿಕ ಪ್ರೇರಣ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ದಿಕ್ಸೂಚಿ ಭಾಷಣಗೈದ ಬೆಂಗಳೂರು ಆರ್‌ಎನ್‌ಎಸ್ ಸಮೂಹ ಸಂಸ್ಥೆ ಸಿಎಒ ಡಾ| ಸುಧೀರ್ ಕೆ. ಎಲ್. ಮಾತನಾಡಿ, ತಂದೆ-ತಾಯಿ, ಗುರುಗಳು ಮತ್ತು ಲೋಕದ ಋಣವನ್ನು ಎಂದಿಗೂ ಮರೆಯದೇ ತೀರಿಸಬೇಕು ಎಂದರು. ನಿವೃತ್ತ ಲೆಕ್ಕಪರಿಶೋಧಕ ಕೆ. ಕಮಲಾಕ್ಷ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಟ್ಟು ಮರೆಯಬೇಕು, ಮೆರೆಯಬಾರದು. ಸಮಾಜದ ಋಣವನ್ನು ಅಗತ್ಯವಿರುವರಿಗೆ ಕೊಡುವ ಮೂಲಕ ಹಿಂದಿರುಗಿಸಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನ ಆಭರಣ ಟೈಮ್‌ಲೆಸ್ ಜುವೆಲರಿ ಪ್ರೈ.ಲಿ. ಆಡಳಿತ ನಿರ್ದೇಶಕ ಡಾ| ಪ್ರತಾಪ್ ಮಧುಕರ್ ಕಾಮತ್, ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನ ಆಡಳಿತ ಟ್ರಸ್ಟಿ ಎಂ.ಕಿರಣ್ ಪೈ, ದುಬಾೖಯಲ್ಲಿರುವ ಎನ್‌ಆರ್‌ಐ ಮನಿ ಕ್ಲಿನಿಕ್ ಸಂಸ್ಥಾಪಕ ಡಾ| ಚಂದ್ರಕಾಂತ ಭಟ್, ಮಂಗಳೂರಿನ ಎಲ್ಕೊಡ್ ಟೆಕ್ನಾಲಜಿಸ್ ಸಂಸ್ಥೆ ಸಹ ಸಂಸ್ಥಾಪಕ ರಾಜೇಂದ್ರ ಶೆಣೈ, ಮುಂಬಯಿ ಕಾಮತ್ ಅವರ್ ಟೈಮ್ಸ್ ಐಸ್ ಕ್ರೀಮ್ ಪ್ರೈ.ಲಿ.ಯ ನಿರ್ದೇಶಕ ಗಿರೀಶ್ ರಮಾನಾಥ ಪೈ, ಗ್ಲೋಬಲ್ ಚೇಂಬರ್ ಆಫ್ ಸಾರಸ್ವತ್ ಎಂಟ್ರಪ್ರನರ್ ನಿರ್ದೇಶಕಿ ಪ್ರತೀಕ್ಷಾ ಪೈ, ಸತ್ಯಗ್ರೂಪ್ಸ್‌ನ ಸತ್ಯಭಾಮಾ ಕಾಮತ್, ವಿದ್ಯಾಪೋಷಕ ನಿಧಿ ವಿದ್ಯಾರ್ಥಿ ವೇತನ ಯೋಜನೆ ಸಂಯೋಜಕ ವಿಜಯ್ ಕುಮಾರ್ ಶೆಣೈ, ಸಹ ಸಂಯೋಜಕ ಸುಬ್ರಹ್ಮಣ್ಯ ಪ್ರಭು ಉಪಸ್ಥಿತರಿದ್ದರು.
ಮುಂಬಯಿ ನ್ಯಾಚುರಲ್ ಐಸ್ ಕ್ರೀಮ್ ಸಂಸ್ಥಾಪಕ ದಿ| ರಘುನಂದನ್ ಶ್ರೀನಿವಾಸ್ ಕಾಮತ್ ಅವರಿಗೆ ಶ್ರದ್ಧಾಂಜಲಿ ನೆರವೇರಿಸಲಾಯಿತು. ಆಂಧ್ರಪ್ರದೇಶ ಜಿಎಸ್‌ಬಿ ಸಮಾಜದ ಸಂಚಾಲಕ ನಂದ್ಯಾಲ ರಘುವೀರ್ ಶೆಣೈ, ಕಾರ್ಕಳದ ನಿವೃತ್ತ ಲೆಕ್ಕಪರಿಶೋಧಕ ಕೆ. ಕಮಲಾಕ್ಷ ಕಾಮತ್ ಅವರಿಗೆ ವಿಶೇಷ ಗೌರವ ಪುರಸ್ಕಾರ ನೀಡಿ ಸಮ್ಮಾನಿಸಲಾಯಿತು.
ಬೈಲೂರಿನ ಹೊಸಬೆಳಕು ಸೇವಾ ಟ್ರಸ್ಟ್ ಸಂಸ್ಥಾಪಕಿ ತನುಲಾ ತರುಣ್ ಅವರಿಗೆ 2 ಲಕ್ಷ ರೂ. ದೇಣಿಗೆ ನೀಡಿ ಗೌರವಿಸಲಾಯಿತು. ವಿದ್ಯಾಪೋಷಕ ನಿಧಿ ವಿದ್ಯಾರ್ಥಿ ವೇತನ ಯೋಜನೆ ಅಧ್ಯಕ್ಷ ಎಸ್. ಎಸ್. ನಾಯಕ್ ಸ್ವಾಗತಿಸಿ, ವೇದಿಕೆ ಸಂಚಾಲಕ ಆರ್. ವಿವೇಕಾನಂದ ಶೆಣೈ ಪ್ರಸ್ತಾವನೆಗೈದರು. ಪ್ರ. ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ನಿರೂಪಿಸಿದರು. ಅಧ್ಯಕ್ಷ ಜಿ. ಸತೀಶ್ ಹೆಗಡೆ ಕೋಟ ವಂದಿಸಿದರು.
160 ಕುಟುಂಬಗಳಿಗೆ ನೆರವು
ಜಿಎಸ್‌ಬಿ ಸಮಾಜದ ಆರ್ಥಿಕ ಹಿಂದುಳಿದ 160 ಕುಟುಂಬಗಳ ಕನಿಷ್ಠ ಜೀವನೋಪಾಯಕ್ಕಾಗಿ ಆರ್ಥಿಕ ನೆರವು ನೀಡುವ ಕುಟುಂಬ ಚೈತನ್ಯ ನಿಧಿ ಯೋಜನೆಗೆ 10 ವರ್ಷ ತುಂಬಿರುವ ನೆಲೆಯಲ್ಲಿ ಪ್ರತೀ ಕುಟುಂಬಕ್ಕೆ ತಲಾ 12 ಸಾ. ರೂ. ಒಟ್ಟು 19.50 ಲಕ್ಷ ರೂ. ಆರ್ಥಿಕ ನೆರವು ಆಪದ್ಧನವಾಗಿ ನೀಡಲಾಯಿತು.
ಸಾಧಕರಿಗೆ ದತ್ತಿನಿಧಿ ಪುರಸ್ಕಾರ
ವೇದಮೂರ್ತಿ ದಿ| ಪಡುಬಿದ್ರಿ ದೇವಿದಾಸ ಶರ್ಮರ ಮಕ್ಕಳು ಸ್ಥಾಪಿಸಿರುವ ದತ್ತಿ ನಿಧಿಯಿಂದ ಸಂಸ್ಕೃತ, ವೇದ, ತರ್ಕ, ಸುಧಾಪಾಠ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಸ್ಕೃತ ಸಾಹಿತ್ಯದಲ್ಲಿ ಡಾಕ್ಟರೆಟ್ ಪದವಿ ಪಡೆದ ಡಾ| ಪಂಡಿತ್ ಎಂ. ನರಸಿಂಹ ಆಚಾರ್ಯ, ಸಂಸ್ಕೃತ ವಿ. ವಿ.ಯಿಂದ ದ್ವೆ çತ ವೇದಾಂತ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಅರವಿಂದ ಭಟ್, ನ್ಯಾಯಸುಧಾ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ರಾಘವೇಂದ್ರ ಆಚಾರ್ಯ, ಬಿ. ರಾಮಕೃಷ್ಣ ಭಟ್ ಅವರನ್ನು ಗೌರವಿಸಲಾಯಿತು.
1.1 ಕೋ. ರೂ. ಆರ್ಥಿಕ ನೆರವು
ಶೈಕ್ಷಣಿಕ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆಗೈದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹೆತ್ತವರನ್ನು ಕಳೆದುಕೊಂಡ 121 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶುಲ್ಕ ಖರ್ಚನ್ನು ವಿದ್ಯಾರ್ಥಿವೇತನದ ಮೂಲಕ ವಿತರಿಸಲಾಯಿತು.
ಜಿಎಸ್‌ಬಿ ಸಮುದಾಯದ 444 ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಒಟ್ಟು ಈ ವರ್ಷ ಸಮಾಜಮುಖೀ ಸೇವಾ ಕಾರ್ಯ ಚಟುವಟಿಕೆಗೆ 1,01,81,000 ರೂ. ಮೊತ್ತ ವಿನಿಯೋಗಿಸಲಾಗಿದೆ. 2016ರಲ್ಲಿ ಹೆಜಮಾಡಿಯಲ್ಲಿ ಜರಗಿದ ವಿಶ್ವ ಜಿಎಸ್‌ಬಿ ಸಮ್ಮೇಳನದಲ್ಲಿ ಅಂದಿನ ರಕ್ಷಣ ಸಚಿವ ಮನೋಹರ್ ಪ್ರಭು ಪರಿಕ್ಕರ್ ಮೂಲಕ ಗಾಯಾಳು ಸೈನಿಕರ ಕಲ್ಯಾಣ ನಿಧಿಗೆ ಇಷ್ಟೇ ಮೊತ್ತದ ನಿಧಿಯನ್ನು ಸಮಾಜ ಬಾಂಧವರಿಂದ ಸಂಗ್ರಹಿಸಿ ಸಮರ್ಪಿಸಲಾಗಿತ್ತು. ಈಗ ಇಷ್ಟೇ ಮೊತ್ತವನ್ನು ಸಮಾಜ ಕಲ್ಯಾಣಕ್ಕೂ ವಿನಿಯೋಗಿಸಲಾಗಿದೆ ಎಂದು ಸಾಣೂರು ನರಸಿಂಹ ಕಾಮತ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.