![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 7, 2020, 5:35 AM IST
ಉಡುಪಿ: ವಿದೇಶದಿಂದ ಬಂದ ಎಲ್ಲರ ಹೋಂ ಕ್ವಾರಂಟೈನ್ ಅವಧಿ ಮುಕ್ತಾಯವಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಜಿಲ್ಲೆ ಯಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿ ವಿದೇಶಗಳಿಂದ ಬಂದಿದ್ದರು. ಅವರೆಲ್ಲರ ಕ್ವಾರಂಟೈನ್ ಅವಧಿ ಮುಗಿದ ಕಾರಣ ವಿದೇಶಗಳಿಂದ ಬಂದವರಿಂದ ನಮ್ಮ ಜಿಲ್ಲೆ ಗೆ ಕೋವಿಡ್ 19 ಭಯ ಸದ್ಯಕ್ಕಿಲ್ಲ. ಪಾಸಿಟಿವ್ ಬಂದ ಮೂವರ ನಿಕಟವರ್ತಿಗಳು ಐಸೊಲೇಶನ್ ವಾರ್ಡ್‌ನಲ್ಲಿದ್ದಾ ರೆ. ಸದ್ಯ ಯಾರಲ್ಲೂ ರೋಗ ಲಕ್ಷಣಗಳು ಕಂಡುಬಂದಿಲ್ಲ. ಪ್ರಾಥಮಿಕ ಸಂಪರ್ಕ ಇದ್ದ ವ್ಯಕ್ತಿಗಳ ವರದಿ ನೆಗೆಟಿವ್ ಬಂದಿದೆ. ಸಾರ್ವಜನಿಕರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದರು.
ಪಾಸಿಟಿವ್ ಬಂದ ಕಾರ್ಕಳದ ಮಹಿಳೆಯ ಜತೆ ಜಿಲ್ಲೆ ಯ 33 ಮಂದಿ ಪ್ರಯಾಣ ಮಾಡಿದ್ದರು. ಅವರೆಲ್ಲರ ಆರೋಗ್ಯ ತಪಾಸಣೆ ಮಾಡಿದ್ದೇವೆ. ಯಾರಿಗೂ ತೊಂದರೆ ಇಲ್ಲ. ದಿಲ್ಲಿ ಸಂಪರ್ಕದಲ್ಲಿದ್ದ ಎಲ್ಲಾ 16 ಮಂದಿ ಆರೋಗ್ಯ ತಪಾಸಣೆ ಮಾಡಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ. ಅವರು ಹೋಂ ಕ್ವಾರಂಟೈನ್‌ನಲ್ಲಿದ್ದಾ ರೆ ಎಂದರು.
ಅನಗತ್ಯ ತಿರುಗಿದರೆ ವಾಹನ ಜಪ್ತಿ
ಲಾಕ್‌ಡೌನ್ ಅವಧಿ ಮುಗಿಯುವವರೆಗೆ ಶಿಸ್ತು, ಸಂಯಮ ಪಾಲಿಸಬೇಕು. ಬೆಳಗ್ಗೆ 7ರಿಂದ 11.30ರ ವರೆಗೆ ಅಗತ್ಯ ವಸ್ತು ಖರೀದಿಗೆ ಮಾತ್ರ ಅವಕಾಶವಿದೆ. ಕೆಲಸವಿಲ್ಲದೆ ತಿರುಗುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾರೂ ಅವಕಾಶದ ದುರುಪ ಯೋಗ ಮಾಡಬಾರದು. ಕೆಲಸವಿಲ್ಲದೆ ಓಡಾಡುತ್ತಿದ್ದರೆ ವಾಹನ ಜಪ್ತಿ ಮಾಡುತ್ತೇವೆ ಎಂದರು.
ದಾನಿಗಳ ನೆರವು
ಲಾಕ್‌ಡೌನ್ ಅವಧಿಯಲ್ಲಿ ಸಾಕಷ್ಟು ದಾನಿಗಳು ನೆರವಿಗೆ ಧಾವಿಸಿದ್ದಾ ರೆ. ಊಟೋಪಚಾರ ಮತ್ತು ದಿನಸಿಯನ್ನು ದಾನಿಗಳಿಂದ ನಿರ್ವಹಿಸಲಾಗಿದೆ. ಈವರೆಗೆ ಸರಕಾರದ ಯಾವುದೇ ಅನುದಾನ ಬಳಸಿಲ್ಲ ಎಂದು ಹೇಳಿದರು.
You seem to have an Ad Blocker on.
To continue reading, please turn it off or whitelist Udayavani.