![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 9, 2023, 11:56 PM IST
ಉಡುಪಿ: ಸಂಪಾದಿಸಿದ ಹಣವನ್ನು ದೇವರ ಕಾರ್ಯ, ದಾನದ ಮೂಲಕ ಪುಣ್ಯವಾಗಿ ಪರಿ ವರ್ತಿಸಿಕೊಳ್ಳುವುದು ಬುದ್ಧಿವಂ ತಿಕೆ. ಅದನ್ನು ಭುವನೇಂದ್ರ ಕಿದಿ ಯೂರು ಮಾಡುತ್ತಿದ್ದಾರೆ. ಕಿದಿ ಯೂರು ಹೊಟೇಲ್ ಅಷ್ಟ ಪವಿತ್ರ ನಾಗಮಂಡಲೋತ್ಸವವು “ನಾಡಿನ ಮಂಗಲೋತ್ಸವ’ವಾಗಲಿ ಎಂದು ಭಾವೀ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಕಿದಿಯೂರು ಹೊಟೇಲ್ ಪ್ರೈ.ಲಿ. ನಲ್ಲಿರುವ ಶ್ರೀ ನಾಗಸನ್ನಿಧಿಯಲ್ಲಿ ಜ. 26ರಿಂದ 31ರ ವರೆಗೆ ನಡೆಯುವ ಅಷ್ಟಪವಿತ್ರ ನಾಗಮಂಡಲೋತ್ಸವದ ಆಮಂತ್ರಣ ಪತ್ರಿಕೆಯನ್ನು ಶನಿವಾರಹೊಟೇಲ್ ಸಭಾಂಗಣದಲ್ಲಿ ಶ್ರೀಪಾದರು ಬಿಡುಗಡೆ ಮಾಡಿದರು.
ಪರ್ಯಾಯೋತ್ಸವದ ಅಂಗವಾಗಿ ನಾಗಮಂಡಲೋತ್ಸವ ನಾಡಿಗೆ ಸಲ್ಲಿಕೆಯಾ ಗಲಿದೆ. ಪರ್ಯಾಯ ಪ್ರಯುಕ್ತ ನಾಗ ದೇವರ ಆರಾಧನೆ ಬಹಳ ದಿನದಿಂದಲೂ ನಡೆಯುತ್ತಿದೆ ಎಂದರು.
ನಾಗಮಂಡಲೋತ್ಸವ ಆಯೋಜನ ಸಮಿತಿ ಗೌರವಾಧ್ಯಕ್ಷ ಡಾ| ಜಿ. ಶಂಕರ್, ನಾಗ ದೇವರ ದಿವ್ಯದೃಷ್ಟಿ ಭುವನೇಂದ್ರರ ಮೇಲಿದೆ. ಎಲ್ಲರೂ ಒಟ್ಟಾಗಿ ಉತ್ಸವದಲ್ಲಿ ಪಾಲ್ಗೊಳ್ಳೋಣ ಎಂದರು.
ಜೋತಿಷ್ಯ ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯ ಮಾತನಾಡಿ, 3ನೇ ಬಾರಿಗೆ ನಾಗ ಮಂಡಲೋತ್ಸವ ನಡೆಸುತ್ತಿರುವುದು ಭುವನೇಂದ್ರರ ಸಾಧನೆ. ಈ ಬಾರಿ ಕಾಶಿಯ ಗಂಗಾರತಿ ಮತ್ತು ಕಾಶಿಯ ಗಂಗಾತೀರ್ಥದ ಪ್ರೋಕ್ಷಣೆಯ ನಾಗ ರಕ್ಷೆ ಧಾರಣೆಯೂ ಇರಲಿದೆ ಎಂದರು.
ಹೊಟೇಲಿನ ಎಂಡಿ ಭುವನೇಂದ್ರ ಕಿದಿಯೂರು ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಯುವರಾಜ ಮಸ್ಕತ್, ಉದ್ಯಮಿಗಳಾದ ಪುರುಷೋತ್ತಮ ಪಿ. ಶೆಟ್ಟಿ, ಮನೋಹರ ಶೆಟ್ಟಿ, ಹರಿಯಪ್ಪ ಕೋಟ್ಯಾನ್, ಗಣೇಶ್ ರಾವ್, ಹಿರಿಯಣ್ಣ ಪಿ. ಕಿದಿಯೂರು, ಶ್ರೀಧರ ಶೆಟ್ಟಿ, ಉಡುಪಿ ಡೆಂಟ್ ಕೇರ್‌ನ ಡಾ| ವಿಜಯೇಂದ್ರ ರಾವ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್, ಸದಸ್ಯ ವಿಜಯ ಕೊಡವೂರು ಉಪಸ್ಥಿತರಿದ್ದರು.
ನಿರ್ದೇಶಕ ಜಿತೇಶ್ ಬಿ. ಕಿದಿಯೂರು ಸ್ವಾಗತಿಸಿದರು. ಸಮಿತಿ ಜತೆ ಕಾರ್ಯದರ್ಶಿ ರಮೇಶ್ ಕಿದಿಯೂರು ವಂದಿಸಿ, ಶಿಕ್ಷಕ ಪ್ರಶಾಂತ್ ಶೆಟ್ಟಿ ಹಾವಂಜೆ ಅವರು ನಿರೂಪಿಸಿದರು.
ಶ್ರೀ ನಾಗದೇವರಿಗೆ ನೂತನವಾಗಿ ನಿರ್ಮಿಸಲಾದ ಭವ್ಯ ರಜತ ಮಂಟಪ, ರಜತ ಕವಚ ಮತ್ತು ಸ್ವರ್ಣ ಲೇಪಿತ ರಜತ ಪ್ರಭಾವಳಿಯಲ್ಲಿ ರಜತ ಬಲಿಮೂರ್ತಿಯ ಸಮರ್ಪಣೆಯೊಂದಿಗೆ ಅಷ್ಟ ಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ಬ್ರಹ್ಮಕುಂಭಾಭಿಷೇಕ ಸಹಿತ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಈ ವಧಿಯಲ್ಲಿ ನಡೆಯಲಿವೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.