Udupi; ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘ ಉದ್ಘಾಟನೆ
Team Udayavani, Feb 28, 2024, 12:28 AM IST
ಉಡುಪಿ: ಉಡುಪಿ ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ಉದ್ಘಾಟನೆ ಕಾರ್ಯಕ್ರಮ ಮಂಗಳ ವಾರ ಸಂತೆಕಟ್ಟೆ ಲಕ್ಷ್ಮೀನಗರದ ಗ್ರೀನ್ ಎಕರ್ಷ್‌ನಲ್ಲಿ ಜರಗಿತು.
ಕೇಮಾರು ಸಾಂದೀಪನೀ ಸಾಧನಾ ಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ, ಉಡುಪಿ ಡಯಾಸಿಸ್‌ನ ವಿಕಾರ್ ಜನರಲ್ ವಂ| ಫರ್ಡಿನಾಂಡ್ ಗೊನ್ಸಾಲ್ವಿಸ್ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.
ಈಶವಿಠಲದಾಸ ಶ್ರೀಗಳು ಮಾತನಾಡಿ, ಸಂಘಟನೆಗಳಿಂದ ಪರಿಹಾರ ಸಾಧ್ಯವಿದೆ. ಕಾರ್ಯ ಕ್ರಮಗಳಲ್ಲಿ ಗುಣಮಟ್ಟದ ಆಹಾರ ಒದಗಿಸುವ ಮೂಲಕ ಎಲ್ಲ ಕ್ಯಾಟರಿಂಗ್ ಸಂಸ್ಥೆಗಳು ಉತ್ತಮ ಹೆಸರುಗಳಿಸಿ ಅಭಿವೃದ್ಧಿ ಹೊಂದ ಬೇಕು ಎಂದರು. ಮಾಲಕರು, ನೌಕರರ ಮಕ್ಕಳು ಶಿಕ್ಷಣ, ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸುವಂತೆ ಸಲಹೆ ನೀಡಿದರು.
ವಂ| ಫರ್ಡಿನಾಂಡ್ ಗೊನ್‌ಸಾಲ್ವಿಸ್ ಮಾತನಾಡಿ, ಜನರ ಹಸಿವು ನೀಗಿಸುವ, ಊಟ ಕೊಡುವ ಪುಣ್ಯದ ಕಾರ್ಯವನ್ನು ಕ್ಯಾಟರಿಂಗ್ ಸಂಸ್ಥೆಗಳು ನಿರ್ವಹಿಸುತ್ತಿವೆ. ಎಲ್ಲರೂ ಸಂಘಟಿತರಾಗಿದ್ದರೆ ಸಾಧನೆ ಮಾಡಲು ಸಾಧ್ಯ. ಉತ್ತಮ ಊಟೋಪಚಾರದ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ಎಲ್ಲ ಕ್ಯಾಟರಿಂಗ್ ಸಂಸ್ಥೆಗಳು ಜನರ ಪ್ರೀತಿಗೆ ಪಾತ್ರರಾಗಬೇಕು ಎಂದು ಹಾರೈಸಿದರು.
ಸಂಘದ ಪ್ರಮುಖರಾದ, ವಿವಿಧ ಕ್ಯಾಟರಿಂಗ್ ಸಂಸ್ಥೆಯ ಮಾಲಕರಾದ ಭರತ್ ಶೆಟ್ಟಿ, ಇಗ್ನೇಷಿಯಸ್ ಡಿ’ಸೋಜಾ, ರೊನಾಲ್ಡ… ರಾಡ್ರಿಗಸ್, ರವೀಂದ್ರ ಶೆಟ್ಟಿ ಶಿರ್ವ, ಅನಿಲ್ ಡಿಮೆಲ್ಲೊ, ಅನಿಲ್ ಡೆಸಾ, ದಯಾನಂದ್, ರಮೇಶ್, ಭಾಸ್ಕರ್, ಸುಶಾಂತ್, ಪ್ರಸಾದ್ ಅಂಚನ್ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಜೂಲಿ ಯಸ್ ಲಿವೀಸ್ ದಾನಿಗಳ ಪಟ್ಟಿ ವಾಚಿಸಿ ದರು. ಕಾರ್ಯದರ್ಶಿ ಗಣೇಶ್ ಸಾಲ್ಯಾನ್ ವಂದಿಸಿದರು. ಗೌರವ ಸಲಹೆಗಾರ ಡೇನಿಷ್ ರಾಡ್ರಿಗಸ್ ಪ್ರಸ್ತಾವನೆಗೈದು, ಕೋಶಾಧಿಕಾರಿ ದೀಕ್ಷಿತ್ ಶೆಟ್ಟಿ ಸ್ವಾಗತಿಸಿ, ಆಲ್ವಿನ್ ಅಂದ್ರಾದೆ ನಿರೂಪಿಸಿದರು.
ಸಮಸ್ಯೆಗೆ ಸ್ಪಂದಿಸಲು ಸಿಎಂ ಬಳಿ ನಿಯೋಗ
ದ.ಕ. ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ಅಧ್ಯಕ್ಷ ದೀಪಕ್ ಕೋಟ್ಯಾನ್ ಮಾತನಾಡಿ, ಈಗಾಗಲೇ ಕ್ಯಾಟರಿಂಗ್ ಉದ್ಯಮ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರಲ್ಲಿ ಟ್ರಾನ್ಸ್‌ಪೊàರ್ಟ್, ಟ್ಯಾಕ್ಸ್ ಪ್ರಮುಖವಾಗಿದೆ. ಕ್ಯಾಟರಿಂಗ್ ಉದ್ಯಮಕ್ಕೆ ವರ್ಷಪೂರ್ತಿ ಆದಾಯ ಇರುವುದಿಲ್ಲ. ಈ ನಿಟ್ಟಿನಲ್ಲಿ ಸರಕಾರ ತೆರಿಗೆ ವಿಷಯದಲ್ಲಿ ಕ್ಯಾಟರಿಂಗ್ ಉದ್ಯಮಕ್ಕೆ ರಿಯಾಯಿತಿ ನೀಡಬೇಕು. ಈ ನಿಟ್ಟಿನಲ್ಲಿ ಉಡುಪಿ, ದ.ಕ. ಜಿಲ್ಲೆ ಕ್ಯಾಟರಿಂಗ್ ಮಾಲಕರ ಸಂಘದ ನಿಯೋಗವು ಮುಖ್ಯಮಂತ್ರಿ ಬಳಿನಿಯೋಗ ತೆರಳಿ ಶೀಘ್ರವಾಗಿ ಮನವಿ ಸಲ್ಲಿಸಬೇಕಿದೆ ಎಂದರು.
ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ ಮಾತನಾಡಿ, ಉತ್ತಮ ಸಂಘಟನೆಯಾಗಿ ಒಗ್ಗಟ್ಟಿನಿಂದ ಇರಬೇಕು. ಮುಂದಿನ ದಿನಗಳಲ್ಲಿ ದರ ಪಟ್ಟಿ ಅನುಷ್ಠಾನಕ್ಕೆ ವ್ಯವಸ್ಥೆ ಆಗಬೇಕಿದೆ. ಕಾನೂನಿನ ತೊಂದರೆಗಳು ಮತ್ತು ಮಾಲಕರು, ನೌಕರರಿಗೆ ಸಂಕಷ್ಟ ಎದುರಾದಾಗ ಎಲ್ಲರೂ ಒಗ್ಗೂಡಿ ಸ್ಪಂದಿಸಲು ಸಂಘದ ಪಾತ್ರ ಮಹತ್ವದ್ದಾಗಿರುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.