ಉಡುಪಿ: ಕಳ್ಳರಿಗೆ ‘ಸುಗ್ಗಿ’ಯಾದ ಮಳೆಗಾಲ
Team Udayavani, Jul 23, 2019, 5:08 AM IST
ಉಡುಪಿ: ನಗರದಲ್ಲಿ ಮತ್ತು ನಗರದ ಆಸುಪಾಸಿನಲ್ಲಿ ಮಳೆಗಾಲ ಕಳ್ಳರಿಗೆ ‘ಸುಗ್ಗಿ’. ಮಳೆ ಬಿರುಸಾಗುತ್ತಿರುವಂತೆ ಕಳ್ಳರ ಹಾವಳಿಯೂ ಹೆಚ್ಚಾಗಿದೆ. ಕಳೆದ 20 ದಿನಗಳ ಅವಧಿಯಲ್ಲಿ ಉಡುಪಿ ಮತ್ತು ಮಣಿಪಾಲ ಠಾಣಾ ವ್ಯಾಪ್ತಿಯ ಆರು ಕಡೆಗಳಲ್ಲಿ ಕಳ್ಳತನ ನಡೆದಿದೆ. ಇದರಲ್ಲಿ ಒಂದು ಕೊಲೆಯೂ ಸೇರಿದೆ.
ಒಂಟಿ ಮಹಿಳೆಯನ್ನು ಕೊಲೆಗೈದು ಚಿನ್ನಾಭರಣ ದೋಚಿದ ಘಟನೆ ಜು.5ರಂದು ಬೆಳಕಿಗೆ ಬಂದಿತ್ತು. ಈ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. ಜು.7ರಂದು ಮಣಿಪಾಲ ಕೈಗಾರಿಕಾ ವಲಯದಲ್ಲಿ ಬೈಕ್ ಕಳವಾಗಿದೆ. ಇದೇ ದಿನ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿಯೇ ಹೋಂಡಾ ಆ್ಯಕ್ಟಿವಾ ಕಳವಾಗಿತ್ತು. ಜು.12ರಂದು ಇಂದ್ರಾಳಿಯಲ್ಲಿ ಕೊಟ್ಟಿಗೆಗೆ ನುಗ್ಗಿ ದನಗಳನ್ನು ಕಳವು ಮಾಡಲಾಯಿತು. ಜು.16ರಂದು ಇಂದಿರಾನಗರದಲ್ಲಿ ಮನೆ ಮಂದಿ ಇಲ್ಲದ ದಿನ ಚಿನ್ನಾಭರಣ, ನಗದು ಕಳವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಮತ್ತೆ ಮುಂದುವರೆದಿದ್ದು ಜು.17ರಂದು ರಾತ್ರಿ ಕರಾವಳಿ ಬೈಪಾಸ್‌ನ ಮನೆಯೊಂದರಿಂದ ಚಿನ್ನಾಭರಣ, ನಗದು ಕಳವು ಮಾಡಲಾಗಿದೆ. ಮನೆಯವರು ರಾತ್ರಿ 11.30ಕ್ಕೆ ಮಲಗಿ ಬೆಳಗ್ಗೆ 5.30ಕ್ಕೆ ಎದ್ದಿದ್ದರು. ಆದರೆ ಇಷ್ಟರೊಳಗೆ ಕಳವು ನಡೆದಿತ್ತು!
ಮಳೆಯ ಲಾಭ
ಮಳೆ ಬಂದರೆ ಕಳ್ಳರಿಗೆ ವಿವಿಧ ರೀತಿಯಲ್ಲಿ ಅನುಕೂಲ. ಮಳೆ ಸಂದರ್ಭ ಸಾಮಾನ್ಯವಾಗಿ ಜನಸಂಚಾರ ಕಡಿಮೆಯಾಗುವುದು ಕಳ್ಳರಿಗೆ ವರದಾನ. ಸಂಶಯಿತ ವ್ಯಕ್ತಿಗಳನ್ನು ಯಾರೂ ಗುರುತಿಸುವ ಗೋಜಿಗೆ ಹೋಗುವುದಿಲ್ಲ. ಮಳೆ ಬರುತ್ತಿದ್ದರೆ ಅದರ ಸದ್ದಿಗೆ ಕಳ್ಳರು ಮಾಡುವ ಯಾವ ಸದ್ದು ಕೂಡ ಕೇಳಿಸದು. ಪಕ್ಕದಲ್ಲಿ ಮನೆಗಳಿದ್ದರೂ ಅವರು ಮಳೆಯ ಹಿನ್ನೆಲೆಯಲ್ಲಿ ಬಾಗಿಲು ಸರಿದು ನೋಡುವ ಸಾಧ್ಯತೆಗಳು ಕಡಿಮೆ. ಮಳೆಗಾಲಕ್ಕೆ ಹುಲ್ಲು, ಕುರುಚಲು ಗಿಡಗಳು ಬೆಳೆಯುವುದರಿಂದ ಕೆಲವು ದಾರಿಗಳು ಕಳ್ಳರ ಹೆಜ್ಜೆಗೆ ಪೂರಕವಾಗಿರುತ್ತವೆ. ಆಗಾಗ್ಗೆ ವಿದ್ಯುತ್ ಕೂಡ ಕೈಕೊಡುವುದರಿಂದ ಕಳ್ಳರ ಕೆಲಸ ಸಲೀಸಾಗುತ್ತದೆ.
ಕಾರ್ಯಾಚರಣೆಯೂ ಸವಾಲು
ಮಳೆ ಬರುತ್ತಿರುವಾಗ ಪೊಲೀಸ್ ಕಾರ್ಯಾಚರಣೆಯೂ ಸುಲಭವಲ್ಲ. ಸಾಮಾನ್ಯವಾಗಿ ಬೈಕ್‌ನಲ್ಲೇ ತೆರಳಿ ರಾತ್ರಿ ರೌಂಡ್ಸ್ ಮಾಡುವ ಪೊಲೀಸರು ಶಂಕಿತ ವ್ಯಕ್ತಿಗಳನ್ನು ಬೆನ್ನಟ್ಟಿ ಹೋಗುವುದು ಕಷ್ಟಸಾಧ್ಯ. ಜೀಪ್ ಮತ್ತಿತರ ವಾಹನಗಳಲ್ಲಿ ಹೋಗಿ ಕಾರ್ಯಾಚರಣೆ ಮಾಡಿದರೂ ರೈನ್ ಕೋಟ್ ಧರಿಸಿಕೊಂಡು ಓಡುವುದು ಪೊಲೀಸರಿಗೆ ಇನ್ನೊಂದು ಸವಾಲು.
ಉರಿಯದ ಬೀದಿ ದೀಪಗಳು
ನಗರದ ಹೆಚ್ಚಿನ ಕಡೆಗಳಲ್ಲಿ ಬೀದಿ ದೀಪಗಳು ಸಮರ್ಪಕವಾಗಿಲ್ಲ. ಪೊಲೀಸರು ಟಾರ್ಚ್‌ಲೈಟ್‌ನಲ್ಲೇ ಎಲ್ಲವನ್ನೂ ಮಾಡಬೇಕಾಗಿದೆ. ಬೀದಿ ದೀಪ ಸರಿಯಾಗಿದ್ದರೆ ಸಂಶಯಿತ ವಾಹನ, ಸಂಶಯಿತ ವ್ಯಕ್ತಿಗಳನ್ನು ಗುರುತಿಸಬಹುದು. ಆದರೂ ಪೊಲೀಸ್ ತಂಡ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ ಎನ್ನುತ್ತಾರೆ ನಗರದ ಪೊಲೀಸ್ ಅಧಿಕಾರಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದ ಬಗ್ಗೆ ಸತೀಶ ಜಾರಕಿಹೊಳಿ ಹೇಳಿದ್ದೇನು?
International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?
Thrissur: ಹೊಸ ವರ್ಷಕ್ಕೆ ವಿಶ್ ಮಾಡದ್ದಕ್ಕೆ ಯುವಕನಿಗೆ 24 ಬಾರಿ ಚೂರಿ ಇರಿತ
Contractor Case: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪ್ರಶ್ನೆಯೇ ಉದ್ಭವಿಸಲ್ಲ: ಸಿಎಂ
Murdeshwar:ಅಶುಭ- ಪ್ರವಾಸಿಗರಿಲ್ಲದೆ ಮುರ್ಡೇಶ್ವರ ಕಿನಾರೆ ಭಣ ಭಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.