ಅಶಕ್ತರಿಗೆ ನೆರವಾಗಲಿರುವ ಕಟಪಾಡಿ ರವಿ ಫ್ರೆಂಡ್ಸ್
Team Udayavani, Sep 1, 2018, 2:50 AM IST
ಕಟಪಾಡಿ: ಬಡವರ ಮತ್ತು ಅಂಗವೈಕಲ್ಯದಿಂದ ಬಳಲುತ್ತಿರುವ ಬಡ ಮಕ್ಕಳ ಬಾಳಿಗೆ ಆಶಾ ಕಿರಣ ಮೂಡಿಸುವ ಸಲುವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿ ಮತ್ತು ಫ್ರೆಂಡ್ಸ್ ಕಟಪಾಡಿ ಈ ಬಾರಿ ಅಷ್ಟಮಿಯ ಸೆ. 2 ಮತ್ತು ಸೆ.3ರಂದು ಅಮೇಜಿಂಗ್ ಮಾನ್‌ಸ್ಟರ್ ವೇಷ ಧರಿಸಿ ದೇಣಿಗೆ ಸಂಗ್ರಹ ಮಾಡಲಿದ್ದಾರೆ.
ವಾರಂಬಳ್ಳಿಯ ಉಪ್ಪಿನಕೋಟೆ ರಿಕ್ಷಾ ಚಾಲಕ ಉಮೇಶ್ ಕುಂದರ್ ಮಗಳಾದ ನಾಲ್ಕು ವರ್ಷ ಪ್ರಾಯದ ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ದೀಕ್ಷಾ ಕುಂದರ್, ಕುಂದಾಪುರ ಕೋಡಿಯ ಹಂಝ ಅವರ ಪುತ್ರ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ 13 ವರ್ಷದ ಝುಲ್ಫಿನ್, ಉಡುಪಿಯ ಜಗದೀಶ್ ಎಂಬವರ ತಲಸೀಮಿಯದಿಂದ ಬಳಲುತ್ತಿರುವ ಪನ್ವಿಕಾ ಎಂಬ 2 ವರ್ಷ 8 ತಿಂಗಳ ಬಾಲೆ, ಕುಂದಾಪುರ ತಾಲೂಕಿನ ಆನಗಳ್ಳಿಯ ರವಿರಾಜ್ ಮಗ ಎರಡೂ ಕಾಲಿನ ಬಲ ಸ್ವಾಧೀನ ಕಳಕೊಂಡಿರುವ 10 ವರ್ಷದ ರಜತ್ ಇಂತಹ 4 ಬಡಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶವನ್ನು ತಂಡ ಹೊಂದಿದೆ. ಸಂಗ್ರಹಿತ ಮೊತ್ತವನ್ನು ಸೆ.9ರಂದು ಮಲ್ಪೆ ಕೊಳದ ಹನುಮಾನ್ ವಿಠೊಭ ಭಜನ ಮಂದಿರದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಎಸ್.ಪಿ. ಲಕ್ಷ್ಮಣ ನಿಂಬರಗಿ, ಕೇಮಾರು ಸಾಂದೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಸಮಕ್ಷಮದಲ್ಲಿ ಬಡಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ರವಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.