ಬಿಸಿಯೂಟ ಸಾಮಗ್ರಿ ಕಳಪೆ: ಸಮಗ್ರ ವರದಿಗೆ ಸಿಇಒ ಆದೇಶ
Team Udayavani, Sep 12, 2018, 11:15 AM IST
ಉಡುಪಿ: ಶಾಲೆಗಳ ಬಿಸಿಯೂಟಕ್ಕೆ ಒದಗಿಸುವ ಬೇಳೆಕಾಳು ಹಾಗೂ ಕ್ಷೀರಭಾಗ್ಯಕ್ಕೆ ನೀಡುವ ಹಾಲಿನ ಪುಡಿ ಹಾಳಾಗಿರುವುದು ವ್ಯಾಪಕವಾಗಿ ಕಂಡುಬಂದಿದೆ ಎಂದು ಉಡುಪಿ ಜಿ.ಪಂ. ಅಧ್ಯಕ್ಷರು ಹಾಗೂ ಹಲವು ಮಂದಿ ಸದಸ್ಯರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಗಳವಾರ ಜರಗಿದ ಜಿ.ಪಂ.ನ ಮುಂದುವರಿದ ಸಾಮಾನ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯೆ ಜ್ಯೋತಿ ಎಂ. ಅವರು “ಕೆಲವು ಶಾಲೆಗಳಲ್ಲಿ ಹಳೆಯ ದಾಸ್ತಾನಿನ ಬೇಳೆಗಳನ್ನು ಬಳಸಲಾಗುತ್ತಿದೆ. ಒಡೆದ ಪ್ಯಾಕೆಟ್ ಹಾಲುಪುಡಿ ಸರಬರಾಜಾಗುತ್ತಿದೆ. ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿಲ್ಲ’ ಎಂದು ದೂರಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರು “ನಾನು ಕೂಡ ಹಲವು ಶಾಲೆಗಳಿಗೆ ತೆರಳಿ ಪರಿಶೀಲಿಸಿದ್ದೇನೆ. ಹೆಚ್ಚಿನ ಕಡೆಗಳಲ್ಲಿ ಬೇಳೆ ಮತ್ತು ಹಾಲಿನ ಪುಡಿ ಹಾಳಾಗಿರುವುದು ಗಮನಕ್ಕೆ
ಬಂದಿದೆ’ ಎಂದರು. ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಹಾಗೂ ಇತರ ಹಲವು ಸದಸ್ಯರು ಇದಕ್ಕೆ ದನಿಗೂಡಿಸಿದರು.
ಡಿಡಿಪಿಐ ಅವರು ಪ್ರತಿಕ್ರಿಯಿಸಿ, “ಅಕ್ಷರ ದಾಸೋಹದ ಸಾಮಗ್ರಿ ಪೂರೈಕೆ ಸಂದರ್ಭ ಪರಿಶೀಲಿಸಿಯೇ ಪಡೆದುಕೊಳ್ಳುವುದು ಶಾಲೆಯವರ ಜವಾಬ್ದಾರಿ. ಪ್ಯಾಕೆಟ್ ಒಡೆದಿದ್ದರೆ ಆಗಲೇ ವಾಪಸು ನೀಡಬೇಕು. ಇಲಾಖೆಯ ಅಧಿಕಾರಿಗಳು ಆಗಾಗ್ಗೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಶಾಲೆಯ ಖರ್ಚಿಗೆ ಎಷ್ಟು ಬೇಕೋ ಅಷ್ಟನ್ನೇ ಪಡೆದುಕೊಳ್ಳಬೇಕು ಎಂದು ಶಾಲೆಗಳಿಗೆ ಆದೇಶ ನೀಡಲಾಗಿದೆ’ ಎಂದರು. ಇದರಿಂದ ತೃಪ್ತರಾಗದ ಸದಸ್ಯರು “ಅಧಿಕಾರಿಗಳು ಸಮಪರ್ಕವಾಗಿ ಪರಿಶೀಲಿಸುತ್ತಿಲ್ಲ. ಹಾಗಾಗಿ ಸಮಸ್ಯೆ ಹೆಚ್ಚಾಗುತ್ತಿದೆ’ ಎಂದರು. “ಈ ಕುರಿತು ಸಮಗ್ರವಾದ ವರದಿ ನೀಡಬೇಕು’ ಎಂದು ಸಿಇಒ ಶಿವಾನಂದ ಕಾಪಶಿ ಅಧಿಕಾರಿಗಳಿಗೆ ಆದೇಶಿಸಿದರು.
ಮೂಲ್ಕಿಯವರಿಗೂ ಟೋಲ್ ವಿನಾಯಿತಿ
“ಹೆಜಮಾಡಿಯಲ್ಲಿ ಟೋಲ್‌ಗೇಟ್ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿಯೇ ಇರಬಹುದು. ಆದರೆ ಟೋಲ್ ವಸೂಲಿ ಮಾಡುತ್ತಿರುವುದು ಗ್ರಾ.ಪಂ. ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ. ಟೋಲ್ ಸೋರಿಕೆಯಾಗುತ್ತದೆ ಎಂಬ ಕಾರಣ ನೀಡಿ ಇನ್ನೊಂದು ಟೋಲ್‌ಗೇಟ್ ಅಳವಡಿಸಿ ಸ್ಥಳೀಯರಿಂದಲೂ ಹಣ ವಸೂಲಿ ಸರಿಯಲ್ಲ. ಹೆಜಮಾಡಿಗೆ ಹತ್ತಿರದ ಮೂಲ್ಕಿಯವರು ಹೆಜಮಾಡಿ ಭಾಗಕ್ಕೆ ದೇವಸ್ಥಾನ, ಶಾಲೆಗೆಂದು ವಾಹನದಲ್ಲಿ (ಕೆಎ 19) ಬರುತ್ತಾರೆ. ಅವರಿಂದಲೂ ಸುಂಕ ವಸೂಲಿ ಮಾಡಲಾಗುತ್ತಿದೆ. ಸ್ಥಳೀಯ (ಕೆಎ 20) ವಾಹನಕ್ಕೆ ಟೋಲ್
ವಿನಾಯಿತಿ ಇರುವಂತೆ ಕೆಎ19 ವಾಹನಗಳಿಗೂ ರಿಯಾಯಿತಿ ನೀಡಬೇಕು. ಅವೈಜ್ಞಾನಿಕವಾಗಿ ಟೋಲ್‌ಗೇಟ್ ನಿರ್ಮಿಸಿರುವುದರಿಂದ ಸ್ಥಳೀಯರಿಗೆ ಸಮಸ್ಯೆಯಾಗಿದೆ’ ಎಂದು ರೇಷ್ಮಾ ಉದಯ ಶೆಟ್ಟಿ ಹೇಳಿದರು. ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ ದನಿಗೂಡಿಸಿದರು. ಕೆಎ 19 ವಾಹನಗಳಿಗೂ ಒಳರಸ್ತೆಯ ಟೋಲ್‌ಗೇಟ್‌ನಲ್ಲಿ ವಿನಾಯಿತಿ ನೀಡಬೇಕೆಂದು ಜಿ.ಪಂ.ನಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ವಿಧಾನಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್. ಕೋಟ್ಯಾನ್, ಜಿ.ಪಂ. ಸದಸ್ಯರಾದ ಪ್ರತಾಪ ಹೆಗ್ಡೆ ಮಾರಾಳಿ, ಶಿಲ್ಪಾ ಸುವರ್ಣ, ಜ್ಯೋತಿ ಹರೀಶ್, ಬಟವಾಡಿ ಸುರೇಶ್, ದಿವ್ಯಶ್ರೀ ಅಮೀನ್, ಗೀತಾಂಜಲಿ ಸುವರ್ಣ, ಸುಧಾಕರ ಶೆಟ್ಟಿ ಮೈರ್ಮಾಡಿ ಮೊದಲಾದವರು ವಿವಿಧ ವಿಷಯಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡರು.
ಜಿಂಕೆಗೆ ಫ್ಲೈ ಓವರ್ ನಿರ್ಮಿಸಿ !
ಹಾವಂಜೆ ಗ್ರಾ.ಪಂ. ವ್ಯಾಪ್ತಿಯ ಮುಖ್ಯ ರಸ್ತೆಗೆ ತಾಗಿಕೊಂಡಿರುವ ಮೀಸಲು ಅರಣ್ಯ ಪ್ರದೇಶದಲ್ಲಿ ಜಿಂಕೆಗಳ ಓಡಾಟದಿಂದ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ. ಇಲ್ಲಿ ಬೇಲಿ ನಿರ್ಮಿಸಬೇಕೆಂದು ಒತ್ತಾಯಿಸಿದ್ದೇನೆ. ಆದರೆ ಅರಣ್ಯ ಇಲಾಖೆಯವರು ಬೇಲಿ ನಿರ್ಮಿಸಿದರೆ ವನ್ಯಜೀವಿಗಳ ಓಡಾಟಕ್ಕೆ ತೊಂದರೆಯಾಗುತ್ತದೆ ಎಂದು ಉತ್ತರಿಸಿದ್ದಾರೆ. ಹಾಗಾದರೆ ಜಿಂಕೆಗಳ ಓಡಾಟಕ್ಕೆ ಪ್ರತ್ಯೇಕವಾಗಿ ಫ್ಲೈಓವರ್ ನಿರ್ಮಿಸಲಿ ಎಂದು ಜನಾರ್ದನ ತೋನ್ಸೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.