Udupi: ಮನೆಗೆ ಹೊಸತನ ತರುವ ಕದಿರು; ನವರಾತ್ರಿಯ ವೇಳೆ ನಡೆಯುವ ವಿಶಿಷ್ಟ ಆಚರಣೆ

ಕದಿರು ಕಟ್ಟಿ ಹೊಸ ಅಕ್ಕಿ ಊಟ ಸಂಭ್ರಮ

Team Udayavani, Oct 4, 2024, 2:44 PM IST

ಉಡುಪಿ: ಮನೆಗೆ ಹೊಸತನ ತರುವ ಕದಿರು; ನವರಾತ್ರಿಯ ವೇಳೆ ನಡೆಯುವ ವಿಶಿಷ್ಟ ಆಚರಣೆ

ಉಡುಪಿ: ನವರಾತ್ರಿಯ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡುವ ಕದಿರು ಕಟ್ಟುವ ಹಬ್ಬ ಈಗ ಎಲ್ಲೆಡೆ ನಡೆಯುತ್ತಿದೆ. ಕದಿರು ಕಟ್ಟುವ ಹಬ್ಬವನ್ನು ಅನಂತ ಚತುದರ್ಶಿಯಿಂದ ದೀಪಾವಳಿ ಯವರೆಗೆ ಮಾಡಬಹುದು ಎಂದಿದೆ. ಆದರೆ, ಚತುದರ್ಶಿ ಸಂದರ್ಭದಲ್ಲಿ ಪೈರು ಬಲಿತಿರುವುದಿಲ್ಲ, ದೀಪಾವಳಿ ಹೊತ್ತಿಗೆ ಕಟಾವಾಗಿ ರುತ್ತದೆ. ಹೀಗಾಗಿ ಹೆಚ್ಚಿನವರು ನವರಾತ್ರಿಯ ಒಂದು ದಿನ ಕದಿರು ಹಬ್ಬ ಆಚರಿಸುತ್ತಾರೆ.

ಭತ್ತದ ತೆನೆಯನ್ನು ಮಾವಿನ ಎಲೆ, ಬಿದಿರು ಎಲೆಗಳಿಂದ ಸುತ್ತಿ ದಡ್ಡಲದ ತೊಗಟೆ ನಾರಿನಿಂದ ಕಟ್ಟಿದಾಗ ಅದು ಕೊರಳು ಆಗುತ್ತದೆ. ಅದನ್ನು ದೇವರ ಪೀಠ, ತೊಟ್ಟಿಲು, ಹಣದ ಪೆಟ್ಟಿಗೆ, ಅಟ್ಟ, ಬಾಗಿಲು, ಧಾನ್ಯ ಕಣಜ, ಮೊಸರು ಕಡೆಯುವ ಕಂಬ, ಬಾವಿಯ ಕಂಬ ಸೇರಿ ಎಲ್ಲ ಕಡೆ ಕಟ್ಟಲಾಗುತ್ತದೆ.

ವಾಹನಗಳು, ಕಂಪ್ಯೂಟರ್‌ ಕೂಡಾ ಆ ವ್ಯಾಪ್ತಿಗೆ ಬರುತ್ತದೆ. ಮನೆಗೆ ಮತ್ತು ಇರುವ ಎಲ್ಲ ವಸ್ತುಗಳಿಗೆ ಹೊಸ ಚೈತನ್ಯ ತುಂಬುವ ಆಶಯ ಇದರಲ್ಲಿದೆ. ಕೊರಳಿನಲ್ಲಿ ಧಾನ್ಯ ಲಕ್ಷ್ಮಿಯ ಅನುಸಂಧಾನವಿದ್ದು, ಕಟ್ಟಿದಾಗ ಮನೆಯಲ್ಲಿ ಧನಾತ್ಮಕತೆ ಪ್ರಾಪ್ತಿಯಾಗುತ್ತದೆ ಎಂಬುವುದು ನಂಬಿಕೆ.

ಸಂಪ್ರದಾಯಬದ್ಧವಾಗಿರಲಿ
ಉತ್ತರ ಕನ್ನಡ ಭಾಗದಲ್ಲಿ ಸಂಕ್ರಮಣಕ್ಕೆ ಕದಿರು ಕಟ್ಟುತ್ತಾರೆ. ಕರಾವಳಿ ಭಾಗದಲ್ಲಿ ಈಗ ಬೆಳೆ ಬರುತ್ತಿರುವ ಕಾರಣ ಹೆಚ್ಚಾಗಿ ನವರಾತ್ರಿ ವೇಳೆ ಆಚರಣೆ ನಡೆಯುತ್ತದೆ. ಹೊಸ ಬೆಳೆಯನ್ನು ಮನೆಗೆ ತಂದು ಹೊಸಕ್ಕಿ ಊಟ ಮಾಡುವ ಸಂಪ್ರದಾಯ ಅದೇ ಭಕ್ತಿಯಿಂದ ಮುಂದುವರಿದರೆ ಉತ್ತಮ.
-ಡಾ| ಬಿ.ಗೋಪಾಲ ಆಚಾರ್ಯ, ನಿರ್ದೇಶಕರು, ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ

ಕದಿರು ತರುವ ಕ್ರಮ ಹೇಗೆ?
ಕೊರಳಿಗೆ ಬೇಕಾದ ತೆನೆ, ಮಾವಿನಎಲೆಗಳನ್ನು ಹಿಂದಿನ ದಿನವೇ ತಂದಿರಿಸುವುದು ಕ್ರಮ. ಗದ್ದೆಯಿಂದ ಪೈರನ್ನು ಕೊಯ್ದು ಬಾಳೆ ಎಲೆ ಹಾಸಿದ ಹರಿವಾಣದಲ್ಲಿ ಇಡಬೇಕು. ಯಜಮಾನ ಮುಂಡಾಸು ಕಟ್ಟಿದ ತಲೆಯಲ್ಲಿ ಅದನ್ನು ಹೊತ್ತು ಮನೆಗೆ ತರಬೇಕು. ಮನೆಯಲ್ಲಿ ತುಳಸಿ ಕಟ್ಟೆಯ ಬಳಿ ಅದಕ್ಕೆ ಪೂಜೆ ನಡೆಸಿ ಒಳಗೆ ತಂದು ಮರದ ಕುರ್ಚಿಯಲ್ಲಿ ಇರಿಸಬೇಕು. ಕುರ್ಚಿಯಲ್ಲಿ ಹರಿವೆ ಸೊಪ್ಪು, ಸೌತೆಕಾಯಿ, ಮುಳ್ಳುಸೌತೆ, ತೆಂಗಿನಕಾಯಿ ಸಹಿತ ಮನೆಯಲ್ಲಿ ಬೆಳೆದ ಪ್ರಮುಖ ಬೆಳೆಗಳನ್ನು ಅದರಲ್ಲಿಡಬೇಕು. ಮನೆಯ ಯಜಮಾನ ಕದಿರಿಗೆ ಪೂಜೆ ಮಾಡಿ ಬಳಿಕ ಕಟ್ಟುವ ಕೆಲಸ ನಡೆಯುತ್ತದೆ.

ಹೊಸತೆನೆ ಊಟ ಹೇಗಿರುತ್ತದೆ?

  • ಸಂಪ್ರದಾಯದ ಪ್ರಕಾರ ಕದಿರು ಕಟ್ಟುವ ದಿನವೇ ಹೊಸಕ್ಕಿ ಊಟ ಮಾಡಬೇಕು ಎಂದಿದೆ. ಕೆಲವರು ಕದಿರು ಕಟ್ಟಿದ ಮರುದಿನ ಊಟ ಮಾಡುತ್ತಾರೆ..
  • ಊಟ ಮಾಡುವ ಮುನ್ನ ಹಿರಿಯರ ಪಾದಕ್ಕೆ ನಮಸ್ಕರಿಸುವುದು ರೈತ ಕುಟುಂಬಗಳ ಸಂಪ್ರದಾಯ.
  • ಊಟಕ್ಕೆ ಎಷ್ಟು ಖಾದ್ಯವೂ ಮಾಡಬಹುದು. ಆದರೆ, 3, 5, 7 ಹೀಗೆ ಬೆಸ ಸಂಖ್ಯೆಯಲ್ಲಿರಬೇಕು ಎಂಬ ನಿಯಮ ಇದೆ.
    ಮನೆಗೆ ಹೊಸ ಜೀಕಳೆ
  • ಕದಿರು ತರುವ ದಿನ ಮನೆಯನ್ನು ಸ್ವತ್ಛಗೊಳಿಸಲಾಗುತ್ತದೆ. ಹಳೆಯ ಕದಿರುಗಳನ್ನು ತೆಗೆಯಲಾಗುತ್ತದೆ.
  • ಮನೆಯ ಎದುರಿನ ಕಂಬಕ್ಕೆ ಪೂಜೆ ಸಲ್ಲಿಸುತ್ತಾರೆ. ಸೇಡಿ ಮಣ್ಣಿನ ಹುಡಿಯಿಂದ ಹೊಸ ಊಟ ತಯಾರಿಸುವ ಪಾತ್ರೆಗಳಿಗೆ ಹಾಗೂ ಮನೆಯ ವಿವಿಧ ಭಾಗಕ್ಕೆ ಬಣ್ಣ ಬಳಿಯಲಾಗುತ್ತದೆ.
  • ಮನೆಯ ಪ್ರತಿ ವಸ್ತುವಿಗೂ ಕದಿರು ಕಟ್ಟುವುದರಿಂದ ಅಲ್ಲಿ ಹೊಸ ಜೀವಕಳೆ ಮೂಡುತ್ತದೆ.

-ಪುನೀತ್‌ ಸಾಲ್ಯಾನ್‌

ಟಾಪ್ ನ್ಯೂಸ್

11-kukke

Navaratri: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹುಲಿ ವೇಷ ಕುಣಿತ ವೀಕ್ಷಿಸಿದ ನಟಿ ರಕ್ಷಿತಾ ಪ್ರೇಮ್

9-uv-fusion

UV Fusion: ಸ್ವಕಲಿಕೆ ಮತ್ತು ಆತ್ಮಸ್ತೈರ್ಯ

Vijayapura: ಬೈಕ್ – ಲಾರಿ ನಡುವೆ ಭೀಕರ ಅಪಘಾತ… ಇಬ್ಬರು ಮೃತ್ಯು; ಸ್ಥಳೀಯರಿಂದ ಪ್ರತಿಭಟನೆ

Vijayapura: ಬೈಕ್ – ಲಾರಿ ನಡುವೆ ಭೀಕರ ಅಪಘಾತ… ಇಬ್ಬರು ಮೃತ್ಯು; ಸ್ಥಳೀಯರಿಂದ ಪ್ರತಿಭಟನೆ

10-sagara

Sagara: ಬಾಣಂತಿಗೆ ಕಪಾಳಮೋಕ್ಷ; ಪ್ರಸೂತಿ ವೈದ್ಯರ ವಿರುದ್ಧ ಪ್ರಕರಣ ದಾಖಲು

Retro style trends in social media

Retro Style; ಸೋಶಿಯಲ್‌ ಮೀಡಿಯಾದಲ್ಲೊಂದು ರೆಟ್ರೋ ಸ್ಟೈಲ್‌

Mangaluru: ತ್ರಿಶಾ ಪದವಿ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ

Mangaluru: ತ್ರಿಶಾ ಪದವಿ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ

8-uv-fusion-1

UV Fusion: ಭೂತ ಭವಿಷ್ಯ ಬಿಟ್ಟು ಈ ಕ್ಷಣ ಜೀವಿಸಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Kaup ಹೊಸ ಮಾರಿಗುಡಿ: ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಮುಹೂರ್ತ

Udupi: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ನವರಾತ್ರಿ ಮಹೋತ್ಸವಕ್ಕೆ ಚಾಲನೆ

Udupi: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ನವರಾತ್ರಿ ಮಹೋತ್ಸವಕ್ಕೆ ಚಾಲನೆ

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

Udupi: ಗೀತಾರ್ಥ ಚಿಂತನೆ-54: ಕೆಲಸದ ಶೈಲಿ: ಕೃಷ್ಣ ಮಾರ್ಗ, ದುರ್ಯೋಧನ ಮಾರ್ಗ

Navaratri 2024: ಕರಾವಳಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಅದ್ದೂರಿ ಚಾಲನೆ

Navaratri 2024: ಕರಾವಳಿಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಅದ್ದೂರಿ ಚಾಲನೆ

Dr. G. Shankar: ಅ.5ರಂದು ನಾಡೋಜ ಡಾ| ಜಿ. ಶಂಕರ್‌ 69ನೇ ಹುಟ್ಟುಹಬ್ಬ

Dr. G. Shankar: ಅ.5ರಂದು ನಾಡೋಜ ಡಾ| ಜಿ. ಶಂಕರ್‌ 69ನೇ ಹುಟ್ಟುಹಬ್ಬ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ಹೊಸ ಮಾರುಕಟ್ಟೆಗೆ ಪ್ರವೇಶ: ಕೊಲ್ಹಾಪುರ ಮಾರುಕಟ್ಟೆಗೆ ಕಲಬುರಗಿ ಹಾಲು!

ಹೊಸ ಮಾರುಕಟ್ಟೆಗೆ ಪ್ರವೇಶ: ಕೊಲ್ಹಾಪುರ ಮಾರುಕಟ್ಟೆಗೆ ಕಲಬುರಗಿ ಹಾಲು!

11-kukke

Navaratri: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹುಲಿ ವೇಷ ಕುಣಿತ ವೀಕ್ಷಿಸಿದ ನಟಿ ರಕ್ಷಿತಾ ಪ್ರೇಮ್

9-uv-fusion

UV Fusion: ಸ್ವಕಲಿಕೆ ಮತ್ತು ಆತ್ಮಸ್ತೈರ್ಯ

Vijayapura: ಬೈಕ್ – ಲಾರಿ ನಡುವೆ ಭೀಕರ ಅಪಘಾತ… ಇಬ್ಬರು ಮೃತ್ಯು; ಸ್ಥಳೀಯರಿಂದ ಪ್ರತಿಭಟನೆ

Vijayapura: ಬೈಕ್ – ಲಾರಿ ನಡುವೆ ಭೀಕರ ಅಪಘಾತ… ಇಬ್ಬರು ಮೃತ್ಯು; ಸ್ಥಳೀಯರಿಂದ ಪ್ರತಿಭಟನೆ

ಒಣ ಕೊಬ್ಬರಿಗೆ ಈಗ ಬಂಗಾರದ ಬೆಲೆ; ಬೆಲೆ ಹೆಚ್ಚಳಕ್ಕೇನು ಕಾರಣ?

ಒಣ ಕೊಬ್ಬರಿಗೆ ಈಗ ಬಂಗಾರದ ಬೆಲೆ; ಬೆಲೆ ಹೆಚ್ಚಳಕ್ಕೇನು ಕಾರಣ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.