![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 6, 2019, 6:00 AM IST
ಕಾಪು: ಬಿರು ಬಿಸಿಲಿನ ಪ್ರತಾಪದಿಂದಾಗಿ ಆಕಸ್ಮಿಕ ಮತ್ತು ಮಾನವ ಸಹಜ ಅಸಡ್ಡೆಯಿಂದಾಗಿ ಶುಕ್ರವಾರ ಒಂದೇ ದಿನ ಉಡುಪಿ ಮತ್ತು ಕಾಪು ಪರಿಸರದ ವಿವಿಧೆಡೆಗಳಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸೂಕ್ತ ಕಾಲದಲ್ಲಿ ತಲುಪಿ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ದಳದ ಸಿಬಂದಿಗಳು ಹೈರಾಣಾಗಿ ಬಿಟ್ಟಿದ್ದಾರೆ.
ಬೆಂಕಿ ಕಾಣಿಸಿಕೊಂಡ ಪ್ರದೇಶಗಳು : ಆದಿ ಉಡುಪಿ ಮೂಡುಬೆಟ್ಟು, ಉಡುಪಿ ಬೀಡಿನಗುಡ್ಡೆ, ಕಡೆಕಾರು, ಅಲೆವೂರು, ಕಲ್ಯಾಣಪುರ ಸಂತೆಕಟ್ಟೆ, ಪಡುಬಿದ್ರಿ ಅಬ್ಬೇಡಿ, ಮೂಡುಬೆಳ್ಳೆ ನಾಲ್ಕು ಬೀದಿ, ಕಡೆಕಾರು ಪರಿಸರದಲ್ಲಿ ಆಕಸ್ಮಿಕ ಬೆಂಕಿ ಅವಘಢ ಕಾಣಿಸಿಕೊಂಡಿದೆ.
ಬೆಂಕಿ ನಂದಿಸಿದ
ಉಡುಪಿ – ಮಲ್ಪೆಯ ವಾಹನಗಳು
ವಿವಿಧಡೆಗಳಲ್ಲಿ ಬೆಂಕಿ ಕಾಣಿಸಿಕೊಂಡ ತತ್‌ಕ್ಷಣಕ್ಕೆ ಸ್ಥಳೀಯರು ಉಡುಪಿ ಅಗ್ನಿಶಾಮಕ ಠಾಣೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ಐದು ಕಡೆಗಳಿಗೆ ಉಡುಪಿ ಅಗ್ನಿಶಾಮಕ ಠಾಣೆಯ ಸಿಬಂದಿಗಳು ವಾಹನಗಳ ಸಹಿತವಾಗಿ ತೆರಳಿ ಬೆಂಕಿ ನಂದಿಸಿದ್ದಾರೆ. ಅಲೆವೂರು ಮತ್ತು ಕಡೆಕಾರಿನಲ್ಲಿ ಸಂಭವಿಸಿದ ಅಗ್ನಿ ಅವಘಡದ ಪ್ರದೇಶಕ್ಕೆ ಮಲ್ಪೆ ಅಗ್ನಿಶಾಮಕ ಠಾಣೆಯ ಸಿಬಂದಿಗಳು ತೆರಳಿ ಬೆಂಕಿ ನಂದಿಸಿದ್ದಾರೆ.
ಉಳಿದಂತೆ ಕೆಲವು ಕಡೆಗಳಿಗೆ ಅಗ್ನಿಶಾಮಕ ಠಾಣೆಯ ವಾಹನಗಳು ಸ್ಥಳಕ್ಕೆ ತಲುಪುವ ಮೊದಲೇ ಸ್ಥಳೀಯರು ಬೆಂಕಿಯ ಕೆನ್ನಾಲಗೆಯನ್ನು ಶಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಆ ಮೂಲಕ ಅಗ್ನಿಶಾಮಕ ದಳದ ಕೆಲಸವನ್ನು ಸ್ಥಳೀಯರೇ ಸುಲಭಗೊಳಿಸಿದ್ದಾರೆ.
ಬೇಸಗೆ ಕಾಲ ಬಂತೆಂದರೆ ಎಲ್ಲೆಡೆ ಬೆಂಕಿಯ ಕೆನ್ನಾಲಗೆ ಚಾಚಿಕೊಳ್ಳುತ್ತಿದ್ದು, ರಸ್ತೆ ಬದಿ ಮತ್ತು ಗದ್ದೆಗಳಲ್ಲಿ ಸಂಗ್ರಹಿತವಾಗುವ ತ್ಯಾಜ್ಯದ ರಾಶಿಗಳ ಬಗ್ಗೆ ಜನರು ಎಚ್ಚರ ವಹಿಸುವುದು ಅಗತ್ಯವಾಗಿದೆ. ತ್ಯಾಜ್ಯ ಮತ್ತು ಹುಲ್ಲು ಕಡ್ಡಿಗಳಿಗೆ ಹತ್ತಿಕೊಳ್ಳುವ ಬೆಂಕಿ ಬಿಸಿಲಿನ ಪ್ರತಾಪಕ್ಕೆ ಬೇಗನೆ ವಿಸ್ತಾರಗೊಳ್ಳುತ್ತದೆ. ಮತ್ತು ಸುತ್ತಲಿನ ವ್ಯಾಪ್ತಿಗೂ ಹಬ್ಬಿಕೊಳ್ಳುತ್ತದೆ. ಬಿರು ಬಿಸಿಲಿನೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ನೀರಿಗೂ ತತ್ವಾರ ಉಂಟಾಗಿರುವುದರಿಂದ ಗ್ರಾಮೀಣ ಜನರೇ ಎಚ್ಚೆತ್ತುಕೊಂಡು ಬೆಂಕಿಯ ಬಗ್ಗೆ ಜಾಗರೂಕರಾಗಿರುವಂತೆ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.