Udupi: ಭಕ್ತರನ್ನು ಆಕರ್ಷಿಸಿದ ಸಾಮೂಹಿಕ ಗಂಗಾರತಿ

ಕಿದಿಯೂರು ಹೊಟೇಲ್‌ ಅಷ್ಟಪವಿತ್ರ ನಾಗಮಂಡಲೋತ್ಸವ ಧಾರ್ಮಿಕ ಸಭೆ

Team Udayavani, Jan 31, 2024, 12:04 AM IST

asUdupi: ಭಕ್ತರನ್ನು ಆಕರ್ಷಿಸಿದ ಸಾಮೂಹಿಕ ಗಂಗಾರತಿ

ಉಡುಪಿ: ಅಷ್ಟಪವಿತ್ರ ನಾಗ ಮಂಡಲೋತ್ಸವದ ಪ್ರಯುಕ್ತ ಸೋಮವಾರ ರಾತ್ರಿ ಕಿದಿಯೂರು ಹೊಟೇಲಿನ ಎದುರು ವಿಶೇಷ ವೇದಿಕೆಗಳಲ್ಲಿ ವಾರಾಣಸಿಯಿಂದ ಬಂದ ಪರಿಣತಅರ್ಚಕ ವೃಂದದವರಿಂದ ವೈಶಿಷ್ಟ್ಯ ಪೂರ್ಣ ಅಕರ್ಷಕ ಸಾಮೂಹಿಕ ಗಂಗಾರತಿ ನಡೆಯಿತು.

ನಾಗದೇವರಿಗೆ ವಿಶೇಷ ಧೂಪ ಸೇವೆ ನಡೆಸಿ ಗಂಗೆಯ ತಟದಲ್ಲಿನ ಮಾದರಿಯಲ್ಲಿ 9 ವೇದಿಕೆಗಳ ಮೇಲೆ 9 ಮಂದಿ ಅರ್ಚಕರು ಆರತಿ ಬೆಳಗಿದರು. ಚೆಂಡೆವಾದ್ಯ, ಪಂಚವಾದ್ಯ, ಕೊಂಬು ಕಹಳೆಯ ಹಿನ್ನೆಲೆಯಿತ್ತು.

ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಆಯೋಜನಾ ಸಮಿತಿಯ ಗೌರವಾಧ್ಯಕ್ಷ ಡಾ| ಜಿ. ಶಂಕರ್‌, ಸೇವಾಕರ್ತ ಭುವನೇಂದ್ರ ಕಿದಿಯೂರು, ಕಬಿಯಾಡಿ ಜಯ ರಾಮ ಆಚಾರ್ಯ, ಪ್ರಧಾನ ಕಾರ್ಯ ದರ್ಶಿ ಯುವರಾಜ್‌ ಮಸ್ಕತ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ನಾಗರಾಜ್‌ ಶೆಟ್ಟಿ, ಪ್ರಮುಖರಾದ ಜಯ ಸಿ. ಕೋಟ್ಯಾನ್‌, ದಯಾನಂದ್‌ ಕೆ. ಸುವರ್ಣ, ಉಚ್ಚಿಲ ದೇವಸ್ಥಾನದ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಜಯಕರ ಶೆಟ್ಟಿ ಇಂದ್ರಾಳಿ, ರಮೇಶ್‌ ಕಾಂಚನ್‌, ದಿವಾಕರ ಶೆಟ್ಟಿ, ವಿಜಯ ಕುಮಾರ್‌ ಶೆಟ್ಟಿ, ಸುಬ್ರಹ್ಮಣ್ಯ ಭಟ್‌, ಭವ್ಯಶ್ರೀ ಕಿದಿಯೂರು, ಡಾ| ವಿಜಯೇಂದ್ರ ರಾವ್‌, ಗಣೇಶ್‌ ರಾವ್‌, ಹರಿಯಪ್ಪ ಕೋಟ್ಯಾನ್‌, ಹಿರಿ ಯಣ್ಣ ಕಿದಿಯೂರು, ಬೃಜೇಶ್‌ ಬಿ. ಕಿದಿಯೂರು, ಹೀರಾ ಬಿ. ಕಿದಿಯೂರು, ಜಿತೇಶ್‌ ಬಿ. ಕಿದಿಯೂರು, ಪ್ರಿಯಾಂಕ ಬಿ. ಕಿದಿಯೂರು, ಹರಿಯಪ್ಪ ಕೋಟ್ಯಾನ್‌, ವನಜಾ ಹಿರಿಯಣ್ಣ, ಮಲ್ಲಿಕಾ ಯುವರಾಜ್‌, ಗಿರೀಶ್‌ ಕಾಂಚನ್‌, ಯೋಗಿಶ್‌ಚಂದ್ರಧರ್‌, ಸತೀಶ್‌ ಕುಂದರ್‌, ಸುಧಾಕರ ಮೆಂಡನ್‌, ಅಶೀಶ್‌ ಕುಮಾರ್‌, ಪಾಂಡುರಂಗ ಕರ್ಕೇರ, ಭೋಜರಾಜ್‌ ಕಿದಿಯೂರು, ಧನಂಜಯ ಕಾಂಚನ್‌, ಮಧುಸೂದನ್‌ ಕೆಮ್ಮಣ್ಣು, ದಿನೇಶ್‌ ಎರ್ಮಾಳು, ವಿಲಾಸ್‌ ಜೈನ್‌, ದಿನಕರ, ಪ್ರಕಾಶ್‌ ಜತ್ತನ್‌, ರಮೇಶ್‌ ಕಿದಿಯೂರು, ಪ್ರಕಾಶ್‌ ಸುವರ್ಣ, ಚಂದ್ರೇಶ್‌ ಪಿತ್ರೋಡಿ, ಯತೀಶ್‌ ಕಿದಿಯೂರು, ವಿಜಯ ಕೊಡವೂರು ಪಾಲ್ಗೊಂಡಿದ್ದರು.

ಎಲ್ಲ ಭಕ್ತರಿಗೆ ಕಾಶೀ ವಾರಾಣಸಿ ಯಿಂದ ತರಿಸಲಾದ ಪವಿತ್ರ ಗಂಗಾ ಜಲವನ್ನು ಸಂಪ್ರೋಕ್ಷಣೆ ಮತ್ತು ದಾರಗಳನ್ನು ವಿತರಿಸುವುದಾಗಿ ಸೇವಾಕರ್ತ ಭುವನೇಂದ್ರ ಕಿದಿ ಯೂರು ತಿಳಿಸಿದ್ದಾರೆ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗಸ್ವರ ವಾದಕ ಶ್ರೀ ಉದಯ ಬೊಗ್ರ ಸೇರಿಗಾರ ತಂಡ ದಿಂದ ನಾಗಸ್ವರ ವಾದನ, ಕೂಡಾಲಿ ವಾದ್ಯ ಸಂಗಂ ಕಣ್ಣೂರು, ಕೇರಳದ 40 ಸದಸ್ಯರ ತಂಡದ ಚೆಂಡೆವಾದನ, ಮಟ್ಟನೂರು ಪಂಚವಾದ್ಯ ಸಂಗಂ, ಕೇರಳ 21 ಸದಸ್ಯರ ತಂಡದಿಂದ ಪಂಚವಾದ್ಯ, ತಮಿಳುನಾಡಿನ 11 ತಂಡದ ಸದಸ್ಯರಿಂದ ನಾಗಸ್ವರ ನಡೆಯಲಿದೆ ಎಂದು ಆಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಯುವರಾಜ್‌ ಮಸ್ಕತ್‌ ತಿಳಿಸಿದ್ದಾರೆ.

ಇಂದು ಅಷ್ಟಪವಿತ್ರ ನಾಗಮಂಡಲ
ಜ. 31ರಂದು ಬೆಳಗ್ಗೆ 9.45ರಿಂದ ಶ್ರೀ ನಾಗಸನ್ನಿಧಿಯಲ್ಲಿ ಅಷ್ಟೋತ್ತರ ಶತಕಲಶಾಭಿಷೇಕ, ಬ್ರಹ್ಮಕುಂಭಾಭಿಷೇಕ, ದರ್ಶನ ಸೇವೆ ಹಾಗೂ ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಇರಲಿದೆ. ಸಂಜೆ 4.30ಕ್ಕೆ ಹಾಲಿØಟ್ಟು ಸೇವೆ, 5.30ರಿಂದ ಮಂಟಪದಲ್ಲಿ ಗಂಗಾರತಿ, 6.30ಕ್ಕೆ ಅಷ್ಟಪವಿತ್ರ ನಾಗಮಂಡಲೋತ್ಸವ ಆರಂಭಗೊಂಡು ರಾತ್ರಿ 11.30ಕ್ಕೆ ಪ್ರಸಾದ ವಿತರಣೆಯಾಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ
ಶ್ರೀ ವಿಶ್ವೇಶತೀರ್ಥ ಮಂಟಪದಲ್ಲಿ ಬೆಳಗ್ಗೆ 10.30ರಿಂದ ವಿದುಷಿ ಪವನಾ ಬಿ. ಆಚಾರ್‌, ಮಣಿಪಾಲ ನಿರ್ದೇಶನದಲ್ಲಿ ಏಕಕಾಲದಲ್ಲಿ 108 ವೀಣೆಗಳ ವಾದನ ಮಧ್ಯಾಹ್ನ 12.30ರಿಂದ ಶ್ರೀಮತಿ ಅಕ್ಷತಾ ದೇವಾಡಿಗ ಮತ್ತು ಬಳಗ ಅಲೆವೂರು ಅವರಿಂದ ಸ್ಯಾಕೊÕàಫೋನ್‌ ವಾದನ, ಮಧ್ಯಾಹ್ನ ಗಂಟೆ 3ರಿಂದ ಶ್ರೀ ಲಕ್ಷ್ಮೀನಾರಾಯಣ ಉಪಾಧ್ಯ ಪಾಡಿಗಾರು ಮತ್ತು ಬಳಗದವರಿಂದ ಭಕ್ತಿ ರಸಾಯನ, ಬೋರ್ಡ್‌ ಹೈಸ್ಕೂಲ್‌ ಮೈದಾನದಲ್ಲಿ ಹಾಕಲಾದ ಶ್ರೀ ವಾಸುಕೀ ಮಂಟಪದಲ್ಲಿ ಬೆಳಗ್ಗೆ 10.30ರಿಂದ ಶ್ರುತಿ ಮ್ಯೂಸಿಕ್‌ ಎರ್ಮಾಳು ಬಡಾ ಅವರಿಂದ ಭಕ್ತಿ-ಭಾವ-ಜಾನಪದ ಸಂಗೀತ ವೈಭವ, ಮಧ್ಯಾಹ್ನ 1ರಿಂದ 3.30ರ ವರೆಗೆ ಜಗದೀಶ್‌ ಪುತ್ತೂರು ಬಳಗದವರಿಂದ ಭಕ್ತಿ ಗಾನಾಮೃತ ನಡೆಯಲಿದೆ.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.