Udupi: ನಾಗದೇವರ ಅನುಗ್ರಹದಿಂದ ಅಭಿವೃದ್ಧಿ: ಪಲಿಮಾರು ಶ್ರೀ
ಕಿದಿಯೂರು ಹೊಟೇಲ್ ಅಷ್ಟಪವಿತ್ರ ನಾಗಮಂಡಲೋತ್ಸವ ಧಾರ್ಮಿಕ ಸಭೆ
Team Udayavani, Jan 31, 2024, 12:08 AM IST
ಉಡುಪಿ: ವಿಶ್ವದ ಆದರ್ಶ ಪ್ರಾಯ ಸಂಸ್ಕೃತಿ ಭಾರತದ್ದು. ಅದರಲ್ಲೂ ಕರ್ನಾಟಕ, ಕರಾವಳಿ ಭಾಗವು ಪರಶು ರಾಮರ ಸೃಷ್ಟಿ. ಇಲ್ಲಿ ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ನಾಗದೇವರ ವಿಶೇಷ ಸಾನ್ನಿಧ್ಯ ಈ ಭಾಗದಲ್ಲಿದೆ. ನಾಗದೇವರ ಅನುಗ್ರಹ ಇದ್ದಾಗ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ವಿದ್ಯಾ ರಾಜೇಶ್ವರತೀರ್ಥ ಶ್ರೀಪಾದರು ತಿಳಿಸಿದರು.
ಕಿದಿಯೂರು ಹೊಟೇಲ್ಸ್‌ನ ನಾಗ ಸಾನ್ನಿಧ್ಯದಲ್ಲಿ ಜ. 31ರಂದು ನಡೆಯಲಿ ರುವ ತೃತೀಯ ಅಷ್ಟಪವಿತ್ರ ನಾಗಮಂಡ ಲೋತ್ಸವದ ಅಂಗವಾಗಿ ಮಂಗಳವಾರ ನಡೆದ ಧಾರ್ಮಿಕ ಸಭೆಯನ್ನು ನಾಗದೇವರ ಚಿತ್ರಕ್ಕೆ ಬಣ್ಣ ಕೊಡುವ ಮೂಲಕ ಶ್ರೀಪಾದರು ಉದ್ಘಾಟಿಸಿ ಮಾತನಾಡಿದರು. ಮಂಗಳೂರು ಇಸ್ಕಾನ್ ಅಧ್ಯಕ್ಷ ಗುಣಕರ ರಾಮದಾಸ ಪ್ರಭು ಮಾತನಾಡಿ, ದೇವರ ನಾಮ ಸಂಕೀರ್ತನೆ ಸದಾ ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುತ್ತದೆ ಎಂದರು.
ಆಗಮ ಪಂಡಿತ ವಿ| ಪಂಜ ಭಾಸ್ಕರ್ ಭಟ್ ಉಪನ್ಯಾಸ ನೀಡಿದರು. ನಾಗಮಂಡಲೋತ್ಸವ ಆಯೋಜನ ಸಮಿತಿ ಗೌರವಾಧ್ಯಕ್ಷ ಡಾ| ಜಿ. ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕಿದಿಯೂರುಹೋಟೆಲ್ಸ್ ನ ಎಂಡಿ, ಸೇವಾಕರ್ತ ಭುವನೇಂದ್ರ ಕಿದಿಯೂರು, ನಾಗ ಮಂಡಲದ ಸಮಗ್ರ ಮಾರ್ಗ ದರ್ಶಕ, ಜೋತಿಷಿ ವೇ|ಮೂ| ಕಬಿ ಯಾಡಿ ಜಯರಾಮ ಆಚಾರ್ಯ, ಸಮಿತಿ ಪ್ರಧಾನ ಕಾರ್ಯದರ್ಶಿ ಯುವರಾಜ್ ಸಾಲ್ಯಾನ್ ಮಸ್ಕತ್, ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಮೊಗವೀರ ಮಹಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮುಂಬಯಿ ಆವರ್ಶೇಕರ್ ಗ್ರೂಪ್‌ನ ಕಿಶೋರ್ ಕೃಷ್ಣ ಆವರ್ಶೇಕರ್, ಮುಂಬಯಿ ಉದ್ಯಮಿ ಸುರೇಂದ್ರ ಕಲ್ಯಾಣಪುರ, ದ.ಕ. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿಗಳಾದ ಆನಂದ ಸಿ. ಕುಂದರ್, ಪುರುಷೋತ್ತಮ ಶೆಟ್ಟಿ, ಮನೋಹರ್ ಶೆಟ್ಟಿ, ಮಸ್ಕತ್ ಬಂಟರ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಮಲ್ಲಾರ್, ಪತ್ರಕರ್ತ ವಾಲ್ಟರ್ ನಂದಳಿಕೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ನಗರಸಭೆ ಸದಸ್ಯ ಟಿ.ಜಿ. ಹೆಗ್ಡೆ ಉಪಸ್ಥಿತರಿದ್ದರು.ಪ್ರಕಾಶ್ ಸುವರ್ಣ ಕಟಪಾಡಿ ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ವಂದಿಸಿ, ದಾಮೋದರ ಶರ್ಮ ಬಾರಕೂರು ನಿರೂಪಿಸಿದರು.
ಪಲಿಮಾರು ಶ್ರೀಪಾದರಿಗೆ ತುಲಾಭಾರ
ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಭುವನೇಂದ್ರ ಕಿದಿಯೂರು ಹಾಗೂ ಡಾ| ಜಿ. ಶಂಕರ್ ಮುಂದಾಳತ್ವದಲ್ಲಿ ನಾಣ್ಯಗಳಿಂದ ತುಲಾಭಾರ ನಡೆಯಿತು. ಶ್ರೀಪಾದರು ಮಾತನಾಡಿ, ಈ ತುಲಾಭಾರ ಸೇವೆ ಶ್ರೀಕೃಷ್ಣ ದೇವರಿಗೆ, ಅಯೋಧ್ಯೆಯಿಂದ ಬಂದು ಉಡುಪಿ ಯಲ್ಲಿ ನೆಲೆಯಾದ ಪ್ರಾಣದೇವರಿಗೆ (ಮುಖ್ಯಪ್ರಾಣ ದೇವರು) ಹಾಗೂ ಶ್ರೀಕೃಷ್ಣ ದೇವರನ್ನು ಪ್ರತಿಷ್ಠಾಪಿಸಿದ ಶ್ರೀ ಮಧ್ವಗುರುಗಳಿಗೆ ಸಲ್ಲುತ್ತದೆ. ತುಲಾ ಭಾರದ ನಾಣ್ಯಗಳೆಲ್ಲವನ್ನು ಭುವನೇಂದ್ರರು ನಡೆಸುತ್ತಿರುವ ಇಂಟರ್ ನ್ಯಾಶ ನಲ್ ಸ್ಕೂಲ್‌ನ ಸಮಗ್ರ ಅಭಿವೃದ್ಧಿಗೆ ಬಳಕೆಯಾಗಲಿ ಎಂದು ಒಪ್ಪಿಸಿದರು.
ಕಿದಿಯೂರು ಕುಟುಂಬಕ್ಕೆ ಸಮ್ಮಾನ
ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ವತಿಯಿಂದ ಭುವನೇಂದ್ರ ಕಿದಿಯೂರು ಮತ್ತು ಹೀರಾ ಬಿ. ದಂಪತಿ, ಪುತ್ರ ಡಾ| ಬೃಜೇಶ್ ಬಿ. ಮತ್ತು ಶ್ವೇತಾ ಬೃಜೇಶ್ ದಂಪತಿ, ಪುತ್ರ ಡಾ| ಯಜ್ಞೇಶ್ ಬಿ. ಅವರ ಪರವಾಗಿ ಪತ್ನಿ ಶಿಲ್ಪಾ ಯಜ್ಞೇಶ್, ಪುತ್ರ ಜಿತೇಶ್ ಬಿ. ಮತ್ತು ಪ್ರಿಯಾಂಕ ದಂಪತಿ ಹಾಗೂ ಪುತ್ರಿ ಡಾ| ಭವ್ಯಶ್ರೀ ಅಭಿನ್ ಮತ್ತು ಡಾ| ಅಭಿನ್ ದೇವದಾಸ್ ಶ್ರಿಯಾನ್ ಅವರನ್ನು ಸಮ್ಮಾನಿಸಲಾಯಿತು. ನಾಗಮಂಡಲ ಆಯೋಜನ ಸಮಿತಿ ಪ್ರಧಾನ ಕಾರ್ಯದರ್ಶಿ ಯುವರಾಜ್ ಸಾಲ್ಯಾನ್ ಮಸ್ಕತ್ ಮತ್ತು ಮಲ್ಲಿಕಾ ದಂಪತಿಯನ್ನು ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.