Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ
ಯುವ ಗೀತೋತ್ಸವ ಸಮಾರೋಪ
Team Udayavani, Dec 22, 2024, 11:07 PM IST
ಉಡುಪಿ: ಭಕ್ತಿ ಹಾಗೂ ಕರ್ತವ್ಯದ ಪ್ರಜ್ಞೆ ಜಾಗೃತವಾಗಿದ್ದರೆ ಸಮಾಜಮುಖಿ, ಭಗವಾನ್‌ಮುಖೀಯಾಗಿ ಬದುಕಲು ಸಾಧ್ಯ ಎಂಬುದನ್ನು ಗೀತೆಯಲ್ಲಿ ಶ್ರೀಕೃಷ್ಣ ಬೋಧಿಸಿದ್ದು, ಈಗ ವಿದೇಶಗಳಲ್ಲಿ ಭಗವದ್ಗೀತೆಯನ್ನು ಉದ್ಗ†ಂಥ ಎಂದು ಒಪ್ಪಿಕೊಳ್ಳುತ್ತಿದ್ದಾರೆ. ಪ್ರತಿ ಯೊಬ್ಬ ಹಿಂದೂವಿನ ಮನೆಯಲ್ಲೂ ಭಗವ ದ್ಗೀತೆ ಪುಸ್ತಕ ಇರಬೇಕು ಮತ್ತು ಅದು ಜೀವ ನದ ಭಾಗವಾಗಬೇಕು ಎಂದು ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ಶ್ರೀ ಕೃಷ್ಣಮಠದಲ್ಲಿ ರವಿವಾರ ರಾಜಾಂಗಣದಲ್ಲಿ ಜರಗಿದ ಯುವ ಗೀತೋತ್ಸವ ಸಮಾರೋಪದಲ್ಲಿ ಶ್ರೀಪಾದರು ಆಶೀರ್ವಚನ ನೀಡಿ, ಮನುಷ್ಯ ಜೀವನವನ್ನು ಯಜ್ಞವಾಗಿ ಪರಿವರ್ತಿಸಬೇಕು. ಕರ್ತವ್ಯಕ್ಕೆ ಶ್ರೀಕೃಷ್ಣ ಹೆಚ್ಚು ಒತ್ತು ನೀಡಿದ್ದಾನೆ. ಅರ್ಜುನ ಕರ್ತವ್ಯಚ್ಯುತನಾದಾಗ ಯುದ್ಧ ಮಾಡಬೇಕು ಎಂದು ಎಚ್ಚರಿಸುತ್ತಾನೆ. ಹೀಗೆ ಮನುಷ್ಯ ಕರ್ತವ್ಯದ ವಿಷಯದಲ್ಲಿ ಜಾಗೃತನಾದರೆ ಅದೇ ಜೀವನೌಷಧ ಮತ್ತು ಕರ್ತವ್ಯಪ್ರಜ್ಞೆ ಬೆಳೆಸುವುದೇ ಶ್ರೀ ಕೃಷ್ಣನ ಉದ್ದೇಶವಾಗಿದೆ ಎಂದರು.
ಇತ್ತೀಚಿಗೆ ನಮ್ಮ ದೇವತೆಗಳ ಬಗ್ಗೆ ಹಾಸ್ಯ, ಅಪನಂಬಿಕೆ ಬರುವಂತೆ ಸಾಹಿತ್ಯಗಳನ್ನು ಮುದ್ರಿಸಿ ಮನೆ ಮನೆಗೆ ಹಂಚುವ ಕಾರ್ಯ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಗೀತೆಯು ಪ್ರತಿ ಯೊಂದು ಮನೆಯಲ್ಲಿ ಇರುವುದು ಆವಶ್ಯಕ ಎಂದರು.
ಗೀತೆಯೆಂದರೆ ಜೀವನೋತ್ಸಾಹ
ಪರ್ಯಾಯ ಪುತ್ತಿಗೆ ಮಠಾಧೀಶ ರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿ, ಜೀವನ ಉತ್ಸಾಹ ಮಾಡುವ ಗ್ರಂಥ ಭಗವದ್ಗೀತೆ. ಕೃಷ್ಣ ಎಂದೂ ಅಳಲಿಲ್ಲ. ದುಃಖ, ವಿಷಾದ ತೋರಿಸಿಕೊಂಡಿಲ್ಲ. ಗೀತೆ ಕೇಳುವವರು ಲವಲವಿಕೆಯಿಂದ ಜೀವಿಸುವಂತೆ ಶ್ರೀ ಕೃಷ್ಣ ಮಾಡುತ್ತಾನೆ. ಗೀತೆಗೆ ಯೋಗ ಶಾಸ್ತ್ರ ಎನ್ನುವ ಹೆಸರಿದೆ. ಯೋಗ ಮಾಡಿದರೆ ನಿತ್ಯವೂ ಚೈತನ್ಯ ಇರುವಂತೆ, ಗೀತೆ ಓದಿದರೆ ನಿತ್ಯ ಚೈತನ್ಯ, ಉತ್ಸಾಹ ಇರುತ್ತದೆ. ಯೋಗದಿಂದ ಭೌತಿಕ ಜೀವನ ಹಾಗೂ ಗೀತೆಯಿಂದ ಮನಸ್ಸು ಉತ್ಸಾಹದಿಂದ ಇರುತ್ತದೆ. ಹೀಗಾಗಿಯೇ ಶ್ರೀ ಕೃಷ್ಣ ಯೋಗೇಶ್ವನಾಗಿದ್ದಾನೆ ಎಂದರು.
ಭಗವದ್ಗೀತೆಯನ್ನು ಓದುವುದು ಇಂದು ಅತ್ಯಾವಶ್ಯಕವಾಗಿದೆ. ಮೊಬೈಲ್‌ನಿಂದ ಜನರ ಜೀವನದಲ್ಲಿ ಖನ್ನತೆ, ನಿರುತ್ಸಾಹ, ಮರೆಗುಳಿತನ ಕಾಣಿಸುತ್ತಿದೆ. ಇಂತಹ ಪರಿಸ್ಥಿತಿ ಎದುರಿಸಲು ಭಗದ್ಗೀತೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಮೊಬೈಲ್ ತಾತ್ಕಾಲಿಕ ಖುಷಿ ನೀಡಿದರೆ ಗೀತೆ ಶಾಶ್ವತ ಖುಷಿ ನೀಡುತ್ತದೆ ಎಂದರು.
ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿದರು. ಪತ್ರಕರ್ತರಾದ ಸುಭಾಸ್ ಶಿರಿಯಾ, ದಿನೇಶ್ ಕುಲಾಲ್, ಪ್ರಮುಖರಾದ ಜಗನ್ನಾಥ್ ಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ಡಾ| ವಿಶ್ವನಾಥ ಸುಂಕಸಾಳ, ನಚಿಕೇತ್ ಹೆಗಡೆ, ಡಾ| ನವೀನ್ ಗಂಗೋತ್ರಿ ಉಪಸ್ಥಿತರಿದ್ದರು.
ರೋಹಿತ್ ಚಕ್ರತೀರ್ಥ ಸ್ವಾಗತಿಸಿ, ಪ್ರಸ್ತಾವಿಸಿದರು. ಮಹಿತೋಷ್ ಆಚಾರ್ಯ ಮತ್ತು ಪ್ರಮೋದ್ ಸಾಗರ್ ನಿರೂಪಿಸಿ, ವಂದಿಸಿದರು.
ಸುಬ್ರಹ್ಮಣ್ಮ ಶ್ರೀಗಳನ್ನು ಉಭಯ ಶ್ರೀಪಾದರು ಸ್ವಾಗತಿಸಿ, ಶ್ರೀ ಕೃಷ್ಣ ದೇವರ ದರ್ಶನ ಮಾಡಿಸಿದರು.
ಗೀತೆ ಎಲ್ಲದಕ್ಕೂ ಸ್ಪಷ್ಟತೆ: ರೋಹಿತ್ ಚಕ್ರತೀರ್ಥ
ಭಗವದ್ಗೀತೆಯು ಪ್ರಶ್ನೆಗೆ ಉತ್ತರಗಳನ್ನು ನೀಡುತ್ತ ಮನಸ್ಸನ್ನು ಹೇಗೆ ಬಳಸಿಕೊಳ್ಳ ಬೇಕು ಎಂಬುದನ್ನು ತಿಳಿಸುತ್ತದೆ ಎಂದು ರೋಹಿತ್ ಚಕ್ರತೀರ್ಥ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.