ಉಡುಪಿ-ಮಣಿಪಾಲ: ರಸ್ತೆ ಸಂಚಾರ ಧೂಳುಮಯ
Team Udayavani, Dec 2, 2019, 8:35 PM IST
ಉಡುಪಿ: ಉಡುಪಿ- ಮಣಿ ಪಾಲ 169 ಎ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಿಧಾನಗತಿಯಿಂದಾಗಿ ಸವಾರರು ಸಹಿತ ಪಾದಚಾರಿಗಳಿಗೆ ದಿನನಿತ್ಯ ಸಮಸ್ಯೆಗಳುಂಟಾಗುತ್ತಿವೆ.
ಜನರ ನಿರಂತರ ಒತ್ತಾಯದ ಅನಂತರ ಕೆಲವೆಡೆ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಗುತ್ತಿಗೆದಾರರು ಕೈಗೊಂಡಿದ್ದರೂ ಇಂದ್ರಾಳಿಯ ಬಳಿ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿರುವು ದರಿಂದಾಗಿ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ. ಉಡುಪಿ ಯಿಂದ ಮಣಿಪಾಲಕ್ಕೆ ಹೋಗುವಾಗ ಇಂದ್ರಾಳಿಯ ರೈಲ್ವೇ ನಿಲ್ದಾಣಕ್ಕೆ ಹೋಗಬೇಕೆಂದಿದ್ದರೆ ಎತ್ತರದಿಂದ ಇಳಿಜಾರಿಗೆ ಇಳಿಯುವ ಸಂಕಷ್ಟ. ಅತ್ತ ಕಡೆ ಶ್ರೀನಿವಾಸ ನಗರಕ್ಕೆ ತೆರಳುವ ವಾಹನಗಳ ಸಾಲು. ಇಂದ್ರಾಳಿ ಬಳಿ ಸ್ವಲ್ಪ ಮುಂದಕ್ಕೆ ಹೋದರೆ ಎಡಬದಿ ಯಕ್ಷಗಾನ ಕೇಂದ್ರಕ್ಕೆ ಹೋಗುವ ರಸ್ತೆ… ಹೀಗೆ ಇವೆಲ್ಲವುಗಳಿಗೆ ತೊಡಕಾಗಿರುವುದು ರೈಲ್ವೇ ಬ್ರಿಡ್ಜ್. ಇದನ್ನು ವಿಸ್ತರಿಸಿದರೆ ಮಾತ್ರ ಈ ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.
ದಿನನಿತ್ಯ ಅಪಘಾತ
ರಸ್ತೆಗಳ ಏರಿಳಿತ ತಿಳಿಯದೆ ಸವಾರರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಇದರಿಂದಾಗಿ ಪ್ರತಿನಿತ್ಯ ಸಣ್ಣಪುಟ್ಟ ಅಪಘಾತಗಳು ಇಲ್ಲಿ ತಪ್ಪಿದ್ದಲ್ಲ. ರಸ್ತೆ ಮಧ್ಯದಲ್ಲಿ ವಾಹನಗಳು ಕೆಟ್ಟುಹೋಗುವ ಘಟನೆಗಳೂ ಹಲವಾರು ಬಾರಿ ನಡೆದಿವೆ. ಇಂದ್ರಾಳಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, ಪಾದಚಾರಿಗಳಿಗೆ ಪ್ರತಿನಿತ್ಯ ಧೂಳಿನ ಸಿಂಚನವಾಗುತ್ತಿದೆ. ಆದಷ್ಟು ಬೇಗ ಕಾಮಗಾರಿ ಮಗಿಸಿದರೆ ಮಾತ್ರ ಇಲ್ಲಿ ಸುಗಮ ಸಂಚಾರ ಉಂಟಾಗಲು ಸಾಧ್ಯವಿದೆ.
ಅನುಮತಿ ಸಿಕ್ಕರೆ ಶೀಘ್ರ ಪೂರ್ಣ
ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಇಂದ್ರಾಳಿ ರೈಲ್ವೇ ಬಳಿ ಮತ್ತೂಂದು ಸೇತುವೆ ನಿರ್ಮಿಸುವ ಪ್ರಸ್ತಾವನೆ ಹೆದ್ದಾರಿ ಇಲಾಖೆಯದ್ದು. ಇದಕ್ಕೆ ರೈಲ್ವೇ ಇಲಾಖೆಯ ಒಪ್ಪಿಗೆ ಬೇಕಾಗುತ್ತದೆ. ಒಪ್ಪಿಗೆ ಸಿಕ್ಕ ತತ್‌ಕ್ಷಣದಿಂದಲೇ ಶೀಘ್ರಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.
-ಮಂಜುನಾಥ್, ಎಂಜಿನಿಯರ್, ಹೆದ್ದಾರಿ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.