ಉಡುಪಿ-ಮಣಿಪಾಲ ರಸ್ತೆ ಹೊಂಡಗಳಿಗೆ ಮುಕ್ತಿ
Team Udayavani, Jul 30, 2018, 6:00 AM IST
ಮಣಿಪಾಲ: ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಅಪಾಯಕಾರಿಯಾಗಿ ಗುಂಡಿಗಳು ಸೃಷ್ಟಿಯಾಗಿದ್ದು, ಗಂಭೀರತೆ ಅರಿತ ಉಡುಪಿಯ “ಲೋಕಲ್ ಬಾಯ್ಸ್ ‘ ಸ್ಪೋಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ತಂಡದವರು ಶ್ರಮದಾನದ ಮೂಲಕ ರವಿವಾರ ಕೆಲ ಹೊಂಡ ಮುಚ್ಚಿದ್ದಾರೆ.
ಇಂದ್ರಾಳಿ,ಮಣಿಪಾಲ ಲಕ್ಷ್ಮೀಂದ್ರ ನಗರ, ಕಡಿಯಾಳಿ ಮೊದಲಾದ ಕಡೆಗಳಲ್ಲಿ ಎದ್ದಿರುವ ಡೇಂಜರಸ್ ಹೊಂಡಗಳಿಂದಾಗಿ ವಾಹನ ಚಾಲಕರ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಮುಖ್ಯವಾಗಿ ಹಲವಾರು ದ್ವಿಚಕ್ರ ವಾಹನಗಳು ಅಪಘಾತಕ್ಕೆ ಈಡಾಗಿ ಸವಾರರು ಆಸ್ಪತ್ರೆ ಸೇರಿದ್ದಾರೆ.
ಕಣ್ಣಾರೆ ಕಂಡು ವಿಚಲಿತರಾದರು
“ಲೋಕಲ್ ಬಾಯ್ಸ್’ ಸ್ಪೋಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್‌ನ ಸದಸ್ಯರು ಇಂದ್ರಾಳಿಯಲ್ಲಿದ್ದಾಗ ಅಲ್ಲಿನ ಹೊಂಡಕ್ಕೆ ದ್ವಿಚಕ್ರ ವಾಹನ ಸಿಲುಕಿ ಅಪಘಾತವಾಗಿ ಸವಾರರು ಗಂಭೀರವಾಗಿ ಗಾಯಗೊಂಡಿದ್ದರು. ಈ ಅವಘಡವನ್ನು ಕಣ್ಣಾರೆ ಕಂಡ ಕ್ಲಬ್‌ನ ಸದಸ್ಯರು ಅಪಾಯಕಾರಿ ಹೊಂಡಗಳನ್ನು ತಾವೇ ಮುಚ್ಚುವ ನಿರ್ಧಾರವನ್ನು ಕೈಗೊಂಡರು.
ಅದರಂತೆ “ಲೋಕಲ್ ಬಾಯ್ಸ್’ ಸ್ಪೋಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್‌ನ ಅಧ್ಯಕ್ಷ ಚಕ್ರಾಧರ್ ದೇವಾಡಿಗ, ಪದಾಧಿಕಾರಿಗಳಾದ ದೀಪಕ್ ಕುಮಾರ್, ಕೀರ್ತಿ ಮತ್ತು ಸೂರಜ್ ಇಂದ್ರಾಳಿ ಅವರ ನೇತೃತ್ವದ ಸುಮಾರು 14 ಮಂದಿಯ ತಂಡದವರು ಜು. 29ರಂದು ರಸ್ತೆ ಹೊಂಡ ಮುಚ್ಚುವ ಕಾರ್ಯ ನಡೆಸಿದ್ದಾರೆ. ಇಂದ್ರಾಳಿ ಪಶುಪತಿ ಕೃಪಾ ಬಳಿ, ಪೆಟ್ರೋಲ್ ಬಂಕ್ ಎದುರು, ಲಕ್ಷ್ಮೀಂದ್ರ ನಗರದ ಕಡೆಗಳಲ್ಲಿದ್ದ ರಸ್ತೆ ಹೊಂಡವನ್ನು ಸಿಮೆಂಟ್ ಮಿಶ್ರಣ ಮಾಡಿ ಹಾಕಿ ಮುಚ್ಚಿದ್ದಾರೆ. ಅವರ ಈ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ನಮ್ಮ ಈ ಕಾರ್ಯದೊಂದಿಗೆ ಜನ ಪ್ರತಿನಿಧಿಗಳು, ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿದರೆ ಸಮಸ್ಯೆ ಪರಿಹಾರ ವಾಗುತ್ತದೆ ಎಂದು ಈ ಕ್ಲಬ್‌ನವರು ಹೇಳಿದ್ದಾರೆ.
ಯೋಜನೆ ಮುಂದುವರಿಸುತ್ತೇವೆ
ನಮ್ಮ ಕ್ಲಬ್ ಸಾಮಾಜಿಕ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಅನಾಥ, ಬುದ್ಧಿಮಾಂದ್ಯ ಮಕ್ಕಳ ಕೇಂದ್ರಕ್ಕೂ ಸಹಾಯ ನೀಡುತ್ತಿದ್ದೇವೆ. ಸದಸ್ಯರ ನಿರ್ಣಯದಂತೆ ರಸ್ತೆ ಹೊಂಡ ಮುಚ್ಚುವ ಕಾರ್ಯಕ್ಕೆ ಇಳಿದಿದ್ದೇವೆ. ಮುಂದಿನ ವಾರ ಕಡಿಯಾಳಿ ಇನ್ನಿತರ ಕಡೆಗಳಲ್ಲಿ ಸಿಮೆಂಟ್ ಹಾಕಿ ಹೊಂಡ ಮುಚ್ಚಲಿದ್ದೇವೆ. ಸದಸ್ಯರೆಲ್ಲರೂ ಶ್ರಮದಾನ ನಡೆಸಲಿದ್ದೇವೆ. ಸಿಮೆಂಟ್ ವೆಚ್ಚವನ್ನು ನಮ್ಮ ಕ್ಲಬ್ ಭರಿಸುತ್ತದೆ.
– ಚಕ್ರಾಧರ್ ದೇವಾಡಿಗ,ಅಧ್ಯಕ್ಷರು,
“ಲೋಕಲ್ ಬಾಯ್ಸ್ ‘ ಸ್ಪೋಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.