Udupi ಎಂಜಿಎಂ: ಎಐ ಅಂತಾರಾಷ್ಟ್ರೀಯ ಸಮ್ಮೇಳನ ಸಮಾರೋಪ
Team Udayavani, Aug 23, 2024, 11:46 PM IST
ಉಡುಪಿ: ಎಂಜಿಎಂ ಕಾಲೇಜಿನಲ್ಲಿ ಎಐ ಬಗ್ಗೆ ಜರಗಿದ ಅಂತಾ ರಾಷ್ಟ್ರೀಯ ಸಮ್ಮೇಳನ ಸಮಾರೋಪ ದಿನದಂದು 30 ಸಂಶೋಧನಾ ಪ್ರಬಂಧಗಳು ಮಂಡನೆಯಾದವು.
ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಸಿಎ ವಿಭಾಗದ ಮುಖ್ಯಸ್ಥ ಡಾ| ಶಶಿಧರ ಕಿಣಿ, ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ನಿಟ್ಟೆ ಎಐ, ಎಂ.ಎಲ್ ವಿಭಾಗದ ಸಹ ಪ್ರಾಧ್ಯಾಪಿಕೆ ದಿಶಾ ಡಿ. ಎನ್. ನಿರ್ಣಾಯಕರಾಗಿದ್ದರು. ಜನರೇಟಿವ್ ಎಐ ಎಂಬ ಗೋಷ್ಠಿಯನ್ನು ಡಿಜಿ ಟಲ್ ಸೊಲ್ಯೂಷನ್ಸ್ ಮಣಿಪಾಲ್ ಟೆಕ್ನಾಲಜಿಸ್ ಲಿ. ಸಿಇಒ ಗುರುಪ್ರಸಾದ್ ಕಾಮತ್, ಕಸ್ಟ ಮರ್ ಸಕ್ಸಸ್ ಇನ್ನೋವೇಷನ್ ಮಣಿಪಾಲ್ ಡಿಜಿಟಲ್ ಬಿ.ಯು. ಎವಿಪಿ ವಿಘ್ನೇಶ್ ಕಾಮತ್ ನಡೆಸಿ ಕೊಟ್ಟರು. ಡಾ| ಎಂ.ವಿಶ್ವನಾಥ ಪೈ ಸಂಯೋಜಕರಾಗಿದ್ದರು.
ಮಧ್ಯಾಹ್ನ ಜರಗಿದ ಸಮಾರೋಪದಲ್ಲಿ ಮಾಹೆ ಇಂಟರ್‌ನ್ಯಾಶನಲ್ ರಿಲೇಶನ್ಸ್ ನಿರ್ದೇಶಕ ಡಾ| ಕರುಣಾಕರ್ ಕೋಟೆಗಾರ್ ಎ. ಅತಿಥಿಗಳಾಗಿ ಭಾಗವಹಿಸಿ, ಇಂದಿನ ಎಐ ಯುಗದಲ್ಲಿ ವಿದ್ಯಾರ್ಥಿಗಳು ವಿವೇಚನಾಶೀಲರಾಗಿ ಅದನ್ನು ಬಳಸಬೇಕು ಎಂದರು. ವಿದ್ಯಾರ್ಥಿಗಳ ವಿಭಾಗದಲ್ಲಿ ಅತ್ಯುತ್ತಮ ಸಂಶೋಧನಾ ಪ್ರಬಂಧವಾಗಿ ಎಂಜಿಎಂ ಕಾಲೇಜಿನ ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಶ್ರೀಹರಿ ಮತ್ತು ಸುದರ್ಶನ್ ಅವರ ಪ್ರಬಂಧ ಹಾಗೂ ಪ್ರಾಧ್ಯಾಪಕರ ವಿಭಾಗದಲ್ಲಿ ಮಾಹೆ ಸಂಶೋಧನ ವಿದ್ಯಾರ್ಥಿ ಗಣೇಶ್ ಹೆಗಡೆ ಅವರ ಪ್ರಬಂಧ ಅಯ್ಕೆ ಆಯಿತು.
ಆಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯದರ್ಶಿ ಸಿ.ಎ. ವರದರಾಯ ಪೈ, ಟಿ. ಮೋಹನ್‌ದಾಸ್ ಪೈ ಕೌಶಲಾಭಿವೃದ್ಧಿ ಕೇಂದ್ರದ ನಿರ್ದೇಶಕ ಟಿ.ರಂಗ ಪೈ, ಎಂಜಿಎಂ ಸಂಧ್ಯಾ ಕಾಲೇಜು ಪ್ರಾಂಶುಪಾಲ ಡಾ| ದೇವಿದಾಸ್ ನಾಯ್ಕ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.