ದಿಲ್ಲಿ ಗಣರಾಜ್ಯೋತ್ಸವದಲ್ಲಿ ಉಡುಪಿ ಮೋದಿ, ಗಾಂಧಿ!
Team Udayavani, Jan 27, 2018, 10:45 AM IST
ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಿರಿಯಡಕದ ಸದಾನಂದ ನಾಯಕ್, ಮಹಾತ್ಮಾ ಗಾಂಧಿಯವರಂತೆ ಕಾಣಿಸುವ ತೊಟ್ಟಂ ಮೂಲದ ಆಗಸ್ಟಿನ್ ಅಲ್ಮೇಡಾರಿಗೆ ಈ ಬಾರಿ ಲಭಿಸಿದ ಭಾಗ್ಯ ದಿಲ್ಲಿ ಗಣರಾಜ್ಯೋತ್ಸವ ಪರೇಡ್ ವೀಕ್ಷಣೆ. ಅಲ್ಲಿಯೂ ಅವರು ಮಿಂಚಿದ್ದಾರೆ. ಒಂದು ಹಂತದಲ್ಲಿ “ನೀವು ಸುಮ್ಮನೆ ಕುಳಿತಿರಿ, ಜನಜಂಗುಳಿಯನ್ನು ನಿಯಂತ್ರಿಸುವುದು ಕಷ್ಟವಾಗು ತ್ತದೆ’ ಎಂದು ಪೊಲೀಸರು ಎಚ್ಚರಿಕೆ ನೀಡಬೇಕಾಯಿತು. ಬಳಿಕ ಹೀಗೆ ಖಡಕ್ ಎಚ್ಚರಿಕೆ ನೀಡಿದ ಪೊಲೀಸರೇ ಇವರಿಬ್ಬರ ಜತೆ ಸೆಲ್ಫಿà ಕ್ಲಿಕ್ಕಿಸಿಕೊಂಡಿದ್ದಾರೆ.
ಸದಾನಂದ ನಾಯಕ್ ಮತ್ತು ಆಗಸ್ಟಿನ್ ಅಲ್ಮೇಡಾ ವಾರದ ಹಿಂದೆ ಹೋಗಿ ಗಣರಾಜ್ಯೋತ್ಸವದ ಪಾಸು ಪಡೆಯಲು ಯತ್ನಿಸಿದ್ದರು. ಕೊನೆಗೂ ಅದು ಲಭಿಸಿ, ಇವರಿಬ್ಬರು ಒಳಗೆ ಹೋಗುತ್ತಲೇ ನಿಜ ಮೋದಿ ಕೈ ಎತ್ತುವಂತೆ ಈ ತದ್ರೂಪಿ ಮೋದಿಯೂ ಕೈ ಎತ್ತಿದಾಗ ಜನರು ಎದ್ದು ನಿಂತರು. ಪೊಲೀಸರೂ ಗಲಿಬಿಲಿಗೊಂಡರು, ಜನರನ್ನು ನಿಯಂತ್ರಿಸುವುದು ಕಷ್ಟವೆಂದು ತಿಳಿದು ಇವರನ್ನು ಕೂಡಲೇ ಒಂದೆಡೆ ಕುಳಿತಿರಲು, ಇಲ್ಲವೇ ಹೊರಹೋಗಲು ಆದೇಶಿಸಿ ದರು. ಆದರೂ ಕೆಲವರು ಕದ್ದು ಮುಚ್ಚಿ ಸೆಲ್ಫಿà ತೆಗೆಯುತ್ತಿದ್ದರು. ಕಾರ್ಯಕ್ರಮದ ನಡುವೆ ಮತ್ತೂಮ್ಮೆ ಪೊಲೀಸರು ಎಚ್ಚರಿಸಿ ಹೊರಕಳುಹಿಸ ಬೇಕಾಯಿತು. ಹೊರಗೆ ಬಂದಾಗ ಜನರ ಸೆಲ್ಫಿà ಹುಚ್ಚಿನಿಂದ ತಪ್ಪಿಸಿಕೊಳ್ಳಲು ತದ್ರೂಪಿ ಮೋದಿಯೇ ಪೊಲೀಸರಿಗೆ ಶರಣಾಗಬೇಕಾಯಿತು. ಪೊಲೀಸರು ರಕ್ಷಣೆ ನೀಡಿದರಾದರೂ ಅವರೂ ಇವರಿಬ್ಬರ ಜತೆಗೆ ಸೆಲ್ಫಿ ತೆಗೆಸಿಕೊಳ್ಳದೆ ಬಿಡಲಿಲ್ಲ. ಪ್ರಧಾನಿ ಮೋದಿಯವರ ಖಾಸಗಿ ವೈದ್ಯ ಡಾ| ಗುಪ್ತ ಅವರು ಈ ತದ್ರೂಪಿ ಮೋದಿಯನ್ನು ಕಂಡು ಸಂತಸಗೊಂಡು ಅಪೋಲೋ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಬರಲು ಹೇಳಿದ್ದಾರೆ.
ಇತ್ತೀಚೆಗೆ ಇವರಿಬ್ಬರೂ ಉಡುಪಿಯಲ್ಲಿ ನಡೆದ ಧರ್ಮಸಂಸದ್, ಉಜಿರೆಯಲ್ಲಿ ಪ್ರಧಾನಿ ಕಾರ್ಯಕ್ರಮ, ಗುಜರಾತ್ ಚುನಾವಣೆಯ ಸಂದರ್ಭ ಗಳಲ್ಲಿ ಜನಾಕರ್ಷಣೆಯ ಕೇಂದ್ರವಾಗಿದ್ದರು. ಇದಕ್ಕೂ ಹಿಂದೆ ಸದಾನಂದ ನಾಯಕ್ ಅವರು ಬಜಪೆಯಲ್ಲಿ ಟ್ಯಾಬ್ಲೋದಲ್ಲಿ ಭಾಗವಹಿಸಿದ್ದರು.
ಸದಾನಂದ ನಾಯಕ್ ಅವರು ಹಿಂದೆ ಹೊಟೇಲ್‌ನಲ್ಲಿ ಕೆಲಸ ಮಾಡಿದ್ದರು, ಮಣಿಪಾಲ ಕೆಎಂಸಿಯಲ್ಲಿದ್ದು, ಈಗಷ್ಟೇ ನಿವೃತ್ತಿಯಾಗಿದ್ದಾರೆ. ಇವರಿಗೆ 59 ವರ್ಷ ವಯಸ್ಸು. ಆಗಸ್ಟಿನ್ ಅಲ್ಮೇಡಾ ಅವರು ಸಮುದ್ರದಡಿ ವೆಲ್ಡಿಂಗ್ ವೃತ್ತಿಯಲ್ಲಿದ್ದವರು, ಮುಂಬಯಿ ವಾಸಿ. ಹಲವು ವಿದೇಶಗಳಲ್ಲಿಯೂ ಕೆಲಸ ಮಾಡಿದ ಅನುಭವ ಇದೆ. ಇವರ ತಾಯಿ ಮನೆ ಮೂಲ್ಕಿ, ತಂದೆ ಮನೆ ತೊಟ್ಟಂ. ಪ್ರಸ್ತುತ ನೆಲೆಸಿರುವುದು ಮುಂಬಯಿಯ ಅಂಧೇರಿಯಲ್ಲಿ. ಇವರಿಗೆ 71 ವರ್ಷ ವಯಸ್ಸು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.