ಉಡುಪಿ ನಗರಸಭೆ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ
Team Udayavani, Aug 25, 2018, 11:57 AM IST
ಉಡುಪಿ: ಉಡುಪಿ ನಗರಸಭಾ ಚುನಾವಣೆ ಹಿನ್ನೆಲೆಯಲ್ಲಿಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಪಕ್ಷದ ಅಧಿಕಾರಕ್ಕೆ ಬಂದರೆ ಉದ್ಯಮ ಪರವಾನಿಗೆ ಶುಲ್ಕ ಕಡಿಮೆಗೊಳಿಸಲಾಗುವುದು, ದಾರಿದೀಪವನ್ನು ಸಮರ್ಪಕವಾಗಿ ನಿರ್ವಹಿಸಿ ಕತ್ತಲಭಾಗ್ಯದಿಂದ ಮುಕ್ತಿ ನೀಡಲಾಗುವುದು, 24 ಗಂಟೆಗಳ ಕಾಲ ನಿರಂತರ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಮೊದಲಾದ ಭರವಸೆಗಳನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದೆ. ಭ್ರಷ್ಟಾಚಾರ ರಹಿತ ಜನಸ್ನೇಹಿ ಆಡಳಿತ ನೀಡುವುದಾಗಿಯೂ ಬಿಜೆಪಿ ಮತದಾರರಿಗೆ ಭರವಸೆ ನೀಡಿದೆ.
ಆ. 24ರಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಶಾಸಕ ಕೆ.ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪಕ್ಷದ ಮುಖಂಡರಾದ ದಿನಕರ ಶೆಟ್ಟಿ ಹೆರ್ಗ, ಯಶ್‌ಪಾಲ್ ಸುವರ್ಣ, ಕುಯಿಲಾಡಿ ಸುರೇಶ್ ನಾಯಕ್, ಕುತ್ಯಾರು ನವೀನ್ ಶೆಟ್ಟಿ, ಪ್ರಭಾಕರ ಪೂಜಾರಿ, ರವಿ ಅಮೀನ್, ಮನೋಹರ ಕಲ್ಮಾಡಿ, ಮಹೇಶ್ ಠಾಕೂರ್, ಕಪ್ಪೆಟ್ಟು ಪ್ರವೀಣ್ ಶೆಟ್ಟಿ, ರಾಘವೇಂದ್ರ ಕಿಣಿ, ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಉಪಸ್ಥಿತರಿದ್ದರು. ರಘುಪತಿ ಭಟ್ ಅವರು ಪ್ರಣಾಳಿಕೆಯ ವಿವರ ನೀಡಿದರು.
ಉದ್ಯಮ ಪರವಾನಿಗೆ ಶುಲ್ಕ ಇಳಿಕೆ
ಉದ್ಯಮ ಪರವಾನಿಗೆ ಶುಲ್ಕವನ್ನು ಪ್ರಸ್ತುತ 125, 150 ಮತ್ತು 250 ರೂ.ಗಳಿಂದ ನವೀಕರಿಸಿ ಚದರ ಅಡಿ ಆಧಾರದಲ್ಲಿ ದರ ನಿಗದಿಪಡಿಸಲಾಗಿದೆ. ಒಂದು ಸಾವಿರದಿಂದ 20 ಸಾವಿರ ರೂ.ಗಳವರೆಗೂ ಏರಿಸಿ ಜನತೆಯ ಸುಲಿಗೆ ಮಾಡಲಾಗುತ್ತಿದೆ. ಇದು ಮುನ್ಸಿಪಲ್ ಕಾಯಿದೆಗೆ ವಿರುದ್ಧವಾದದ್ದು. ಬಿಜೆಪಿ ಇದನ್ನು 500 ರೂ.ಗಳಿಗೆ ಮಿತಿಗೊಳಿಸಲಿದೆ.
ದಾರಿದೀಪ ನಿರ್ವಹಣೆ
ದಾರಿದೀಪ ನಿರ್ವಹಣೆ ಸಂಪೂರ್ಣ ವಿಫಲವಾಗಿದೆ. ನಗರಸಭೆಯ ಅನೇಕ ವಾರ್ಡ್‌ಗಳು ಕತ್ತಲೆಯಲ್ಲಿ ಇವೆ. ಎಲ್ಲಾ ದಾರಿದೀಪಗಳನ್ನು ದುರಸ್ತಿಗೊಳಿಸಿ ಸಮರ್ಪಕವಾಗಿ ನಿರ್ವಹಣೆ ಮಾಡಲಾಗುವುದು.
ಒಳಚರಂಡಿ
ಈಗ ಇರುವ ಒಳಚರಂಡಿಯನ್ನು 36 ಕೋ.ರೂ.ಗಳಲ್ಲಿ ಮೇಲ್ದರ್ಜೆ ಗೇರಿಸಲಾಗುವುದು. ಸರಕಾರದಿಂದ ಹೆಚ್ಚುವರಿ ಅನುದಾನ ತಂದು ಮಣಿಪಾಲ, ಮಲ್ಪೆ ಮತ್ತು ಸಂತೆಕಟ್ಟೆವರೆಗೆ ವಿಸ್ತರಿಸಲಾಗುವುದು.
ಕುಡಿಯುವ ನೀರು
ಈಗ ಮಳೆಗಾಲದಲ್ಲಿಯೂ ಕೇವಲ 4-5 ಗಂಟೆಗಳ ಕಾಲ ಮಾತ್ರ ನೀರು ನೀಡಲಾಗುತ್ತಿದೆ. ಈ ಹಿಂದೆ ಮಾಡಿರುವ ಕುಡಿಯುವ ನೀರಿನ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸದೆ ಇರುವುದರಿಂದ ಈಗ ನೀರು ಲಭ್ಯವಿದ್ದರೂ 24 ಗಂಟೆ ನೀರು ಒದಗಿಸಲು ಅಸಾಧ್ಯವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ದಿನದ 24 ಗಂಟೆ ನಿರಂತರ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ವಾರಾಹಿ ಯೋಜನೆಯನ್ನು ಕ್ರಮಬದ್ಧವಾಗಿ ತ್ವರಿತವಾಗಿ ಅನುಷ್ಠಾನ ಗೊಳಿಸಲಾಗುವುದು.
ತ್ಯಾಜ್ಯ ನಿರ್ವಹಣೆ
ಈ ಹಿಂದೆ ಬಿಜೆಪಿ ಆಡಳಿತ ಇದ್ದಾಗ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಮೂಲಕ ಕಸವಿಲೇವಾರಿ ನಡೆಸಲಾಗುತ್ತಿತ್ತು. ಈಗ ಕಸ ವಿಲೇವಾರಿ ಅವ್ಯವಸ್ಥೆಯಾಗಿದೆ. ಹಾಗಾಗಿ ಮತ್ತೆ ಈ ಹಿಂದಿನಂತೆಯೇ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಮೂಲಕ ಮನೆ ಮನೆ ಕಸ ಸಂಗ್ರಹ ಮಾಡಲಾಗುವುದು.
ರಸ್ತೆ ಅಭಿವೃದ್ಧಿ
ನಗರಸಭೆ ವ್ಯಾಪ್ತಿಯ ಎಲ್ಲಾ ಮುಖ್ಯರಸ್ತೆಗಳನ್ನು ದ್ವಿಪಥಗೊಳಿಸ ಲಾಗುವುದು, ದ್ವಿಪಥ ರಸ್ತೆಗಳಲ್ಲಿ ಎಲ್ಲಿ ಆವಶ್ಯಕತೆ ಇದೆಯೋ ಅಲ್ಲಿ ಚತುಷ್ಪಥ ಮಾಡಲಾಗುವುದು.
ಸುಸಜ್ಜಿತ ಮಾರುಕಟ್ಟೆ
ನಗರದ ಹೃದಯಭಾಗದಲ್ಲಿರುವ ವಿಶ್ವೇಶ್ವರಯ್ಯ ದಿನವಹಿ ಮಾರುಕಟ್ಟೆ ಈಗ ಹಲವು ಸಮಸ್ಯೆಗಳ ಆಗರವಾಗಿದ್ದು ಅದನ್ನು ಅತ್ಯಾಧುನಿಕವಾಗಿ ನಿರ್ಮಿಸಿ ತಳ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗುವುದು.
ಪ್ರಣಾಳಿಕೆಯ ಇತರ ಪ್ರಮುಖಾಂಶಗಳು
* ಆದ್ಯತೆ ಮೇರೆಗೆ ಆವಶ್ಯಕತೆ ಇರುವ ವಾರ್ಡ್‌ಗಳಲ್ಲಿ ಮಹಿಳಾ ಮೀನು ಮಾರಾಟಗಾರರಿಗೆ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ.
* ಈ ಹಿಂದೆ ಬಿಜೆಪಿ ಆಡಳಿತ ಅವಧಿಯಲ್ಲಿ ಜಾರಿಗೆ ತಂದ ಪ.ಜಾತಿ ಮತ್ತು ಪ.ಪಂಗಡಗಳ ಆರೋಗ್ಯವಿಮೆಯ ಮೊತ್ತವನ್ನು 30,000ದಿಂದ 1 ಲ.ರೂ.ಗಳಿಗೆ ಏರಿಕೆ.
* ಭ್ರಷ್ಟಾಚಾರ ರಹಿತ ಜನಸ್ನೇಹಿ ಆಡಳಿತ.
* ಈ ಹಿಂದಿನಂತೆ ಸರ್ವರಿಗೂ ನಯನ ಕಾರ್ಯಕ್ರಮದಡಿ ಕಣ್ಣು ಪರೀಕ್ಷಾ ಯೋಜನೆ
* ಸಾರ್ವಜನಿಕ ಕೆರೆಗಳನ್ನು ಅಭಿವೃದ್ಧಿಗೊಳಿಸುವುದು.
* ಉಡುಪಿ-ಮಣಿಪಾಲ-ಮಲ್ಪೆ-ಸಂತೆಕಟ್ಟೆ ಭಾಗದಲ್ಲಿ ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ.
* ಉಡುಪಿ ಸಿಟಿ ಬಸ್ ನಿಲ್ದಾಣ ಮತ್ತು ನರ್ಮ್ ಬಸ್ ನಿಲ್ದಾಣ ಸಂಕೀರ್ಣ ನಿರ್ಮಾಣ.
* ಮಲ್ಪೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ, ಸ್ಥಳೀಯ ಭಜನಾ ಮಂಡಳಿಗಳ ಸಹಭಾಗಿತ್ವದಲ್ಲಿ ಬೀಚ್ ನಿರ್ವಹಣೆ.
* ಬೀಡಿನಗುಡ್ಡೆಯಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ .
* ನಿವೇಶನ ರಹಿತ ಅರ್ಹ ಬಡ ಕುಟುಂಬಗಳಿಗೆ ವಸತಿ ಸಂಕೀರ್ಣ ನಿರ್ಮಾಣ.
* ಪ್ರತಿ ವಾರ್ಡ್‌ನಲ್ಲಿ ನಗರಸಭಾ ಸದಸ್ಯರ ನೇತೃತ್ವದಲ್ಲಿ ವಾರ್ಡ್ ನಿವಾಸಿಗರ ಸಮಿತಿ ರಚನೆ .
*ನಗರಸಭಾ ವ್ಯಾಪ್ತಿಯ ಪ್ರಮುಖ ಜಂಕ್ಷನ್‌ಗಳಲ್ಲಿ ಕಲೆ, ಸಂಸ್ಕೃತಿ ಬಿಂಬಿಸುವ
* ವೃತ್ತಗಳ ನಿರ್ಮಾಣ.
ವಿಶೇಷ ಕೌಂಟರ್, ವೈ-ಫೈ
ನಗರಸಭೆಯ ಕಚೇರಿ ಕಾರ್ಯಗಳಿಗೆ ಆಗಮಿಸುವ ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಸರತಿ ಸಾಲಿನಲ್ಲಿ ನಿಲ್ಲುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ನಗರಸಭಾ ಕಚೇರಿಯಲ್ಲಿ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ವಿಶೇಷ ಕೌಂಟರ್ ತೆರೆಯುವುದು ಹಾಗೂ ಹೈಟೆಕ್ ಬಸ್ ನಿಲ್ದಾಣಗಳ 100 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಉಚಿತ ವೈ-ಫೈ ಒದಗಿಸುವ ಭರವಸೆ ಕೂಡ ಬಿಜೆಪಿ ಪ್ರಣಾಳಿಕೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.