ಕೋವಿಡ್ ಚೇತರಿಕೆ ಪಟ್ಟಿಯಲ್ಲಿ ಉಡುಪಿ ಅಗ್ರಣಿ!
ಸರಾಸರಿ ಪ್ರಕರಣ 300ರಿಂದ 50ಕ್ಕೆ ಇಳಿಕೆ; ಮರಣ ಪ್ರಮಾಣ ಶೇ. 1
Team Udayavani, Nov 9, 2020, 5:55 AM IST
ಸಾಂದರ್ಭಿಕ ಚಿತ್ರ
ಉಡುಪಿ: ಜಿಲ್ಲೆಯಲ್ಲಿ ಕೋವಿಡ್- 19ನಿಂದ ಗುಣ ಹೊಂದುತ್ತಿರುವವರ ಪ್ರಮಾಣ ಶೇ. 97.1ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ ಕೊರೊನಾದಿಂದ ಚೇತರಿಕೆ ಕಾಣುತ್ತಿರುವ ಜಿಲ್ಲಾವಾರು ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
ದೇಶ, ರಾಜ್ಯ ಮಟ್ಟದಲ್ಲಿ ಸೋಂಕು ಪ್ರಮಾಣ ಇಳಿಕೆಯಾಗುತ್ತಿದೆ. ಇದು ಉಡುಪಿ ಜಿಲ್ಲಾ ಮಟ್ಟದಲ್ಲಿಯೂ ಪ್ರತಿಫಲಿಸಿದೆ. ಸೋಂಕು ಹರಡುವಿಕೆಯೂ ಗಣನೀಯವಾಗಿ ಕಡಿಮೆ ಆಗಿದೆ. ಆದರೂ ಜನ ಮೈ ಮರೆತರೆ ಅಪಾಯ ತಪ್ಪಿದ್ದಲ್ಲ ಎಂದು ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಎಚ್ಚರಿಕೆ ನೀಡುತ್ತಲೇ ಇದೆ.
ಜಿಲ್ಲೆಯಲ್ಲಿ ಆರಂಭದಿಂದ ಇಲ್ಲಿಯವರೆಗೆ 1,94,198 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ದೃಢಪಟ್ಟು ಚಿಕಿತ್ಸೆ ಪಡೆದವರಲ್ಲಿ 21,532 ಮಂದಿ ಗುಣ ಮುಖರಾಗಿದ್ದಾರೆ.
ಸೋಂಕಿನ ಪ್ರಮಾಣ ಇಳಿಕೆ
ಜಿಲ್ಲೆಯಲ್ಲಿ ಎರಡು ತಿಂಗಳ ಹಿಂದೆ ಪತ್ತೆಯಾಗುತ್ತಿದ್ದ ಒಟ್ಟು ಸೋಂಕಿನ ಪ್ರಮಾಣ ಶೇ. 16.2 ಇದ್ದರೆ, ಈಗ ಶೇ. 11.6ಕ್ಕೆ ಇಳಿದಿದೆ. ಕಳೆದ 3 ದಿನದಲ್ಲಿ ಪರೀಕ್ಷೆಗೆ ಕಳುಹಿಸಲಾದ ಒಟ್ಟು ಮಾದರಿಗಳಲ್ಲಿ ಶೇ. 2.3ರಷ್ಟು ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಈ ಹಿಂದೆ ದಿನಕ್ಕೆ ಸುಮಾರು 300 ಪ್ರಕರಣಗಳು ಪತ್ತೆಯಾಗುತ್ತಿದ್ದರೆ ಒಂದು ವಾರದಿಂದ ಕೇವಲ 20ರಿಂದ 70ರ ಒಳಗೆ ವರದಿಯಾಗುತ್ತಿದೆ.
1.94 ಲಕ್ಷ ಜನರ ಪರೀಕ್ಷೆ
ಜಿಲ್ಲೆಯಲ್ಲಿ ಇಲ್ಲಿಯ ವರೆಗೆ 1,94,198 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಮಾರ್ಚ್, ಎಪ್ರಿಲ್‌ಗಳಲ್ಲಿ ಇಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಆಗಸ್ಟ್ ಮತ್ತು ಸೆಪ್ಟಂಬರ್‌ನಲ್ಲಿ ಜಿಲ್ಲೆಯಲ್ಲಿ ಕೊರೊನಾ ಅಬ್ಬರಿಸಿತ್ತು. ಆಗಸ್ಟ್‌ನಲ್ಲಿ ಪ್ರತೀ ದಿನ 300ರಷ್ಟು ಪ್ರಕರಣ ಗಳು ಪತ್ತೆಯಾಗಿದ್ದರೆ ಒಂದು ದಿನ ಗರಿಷ್ಠ 421 ಪ್ರಕರಣಗಳು ದಾಖಲಾಗಿದ್ದವು.
427 ಸಕ್ರಿಯ ಪ್ರಕರಣ
ಮರಣ ಪ್ರಮಾಣ ಶೇ. 1.1ರಷ್ಟಿದ್ದುದು ಕೂಡ ಕಳೆದ ಒಂದು ವಾರದಲ್ಲಿ ಶೇ. 1ಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಇದುವರೆಗೆ 186 ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ ಇಲ್ಲಿ ಕೇವಲ 427 ಪಾಸಿಟಿವ್ ಸಕ್ರಿಯ ಪ್ರಕರಣಗಳಿವೆ.
ಕೋವಿಡ್ ಚೇತರಿಕೆಯಲ್ಲಿ ರಾಜ್ಯದ ಜಿಲ್ಲಾವಾರು ಪಟ್ಟಿಯಲ್ಲಿ ಉಡುಪಿ ಅಗ್ರ ಸ್ಥಾನದಲ್ಲಿದೆ. ದಿನೇ ದಿನೇ ಕೊರೊನಾ ಪ್ರಕರಣ ಕಡಿಮೆ ಆಗುತ್ತಿವೆ. ಆದರೂ ಜನತೆ ಇನ್ನಷ್ಟು ಎಚ್ಚರಿಕೆ ವಹಿಸಬೇಕು, ನಿಯಮಗಳನ್ನು ಪಾಲಿಸಬೇಕು, ಎಚ್ಚರ ತಪ್ಪುವುದು ಸಲ್ಲದು.
– ಡಾ| ಪ್ರಶಾಂತ್ ಭಟ್, ಕೋವಿಡ್-19 ನೋಡಲ್ ಅಧಿಕಾರಿ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.