ಉಡುಪಿ ಕೃಷ್ಣ ಮಠ: ಪಲಿಮಾರು ಶ್ರೀ ಪರ್ಯಾಯ

Team Udayavani, Jan 18, 2018, 6:00 AM IST

Palimar-Sri.jpg

ಉಡುಪಿ: ಸಂಭ್ರಮ, ಸಡಗರದಲ್ಲಿ ಶ್ರೀ ಪಲಿಮಾರು ಮಠದ ಪರ್ಯಾಯೋತ್ಸವಕ್ಕೆ ಗುರುವಾರ ಮುಂಜಾವ ಚಾಲನೆ ದೊರಕುವ ಸುಸಂದರ್ಭ. 

ಉಡುಪಿ ನಗರಾದ್ಯಂತ ವಿದ್ಯುದ್ದೀ ಪಾಲಂಕಾರವಿದ್ದು ಜನಮನ ಗೆದ್ದಿದೆ. ವಿವಿಧೆಡೆಗಳಲ್ಲಿ ಸಾಂಸ್ಕೃತಿಕ ರಸದೌತಣ ನೀಡಲಾಗಿದೆ. ನಗರಪೂರ್ತಿ ಜಾಗರವಿದ್ದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರನ್ನು ಸ್ವಾಗತಿಸುವರು.

ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಶ್ರೀ ಪಲಿಮಾರು ಮಠ ಪರಂಪರೆಯಲ್ಲಿ 30ನೆಯವರು. ಪರ್ಯಾಯ ಪೀಠದಿಂದ ನಿರ್ಗಮಿಸು ತ್ತಿರುವವರು ಶ್ರೀ ಪೇಜಾವರ ಮಠ ಪರಂಪರೆಯಲ್ಲಿ 32ನೆಯವರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು. ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಈ ಹಿಂದೆ 2002-04ನೇ ಸಾಲಿನಲ್ಲಿ  ಪರ್ಯಾಯ ಪೂಜೆ ನೆರವೇರಿಸಿರುವರು.

ಪರ್ಯಾಯ ಚಕ್ರವು ಪಲಿಮಾರು ಮಠದಿಂದ ಆರಂಭಗೊಂಡು ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು ಅನಂತರ ಪೇಜಾವರ ಮಠದಲ್ಲಿ ಕೊನೆಗೊಳ್ಳುತ್ತದೆ. ಆಯಾ ಪರಂಪರೆಯ ಆದ್ಯ ಯತಿ ಗಳ ಆಶ್ರಮ ಜ್ಯೇಷ್ಠತ್ವವನ್ನು ಆಧರಿಸಿ ಇದು ಜಾರಿಗೆ ಬಂದಿದೆ. ಈ ಎಂಟು ಮಠಗಳ ಒಂದು ಚಕ್ರವೆಂದರೆ 16 ವರ್ಷ. ಇಂತಹ 31 ಚಕ್ರಗಳು ಉರುಳಿ 32ನೇ ಚಕ್ರ ಆರಂಭವಾಗುತ್ತಿದೆ.

1522ರಲ್ಲಿ ದ್ವೈವಾರ್ಷಿಕ ಪೂಜಾ ವ್ಯವಸ್ಥೆ ಯನ್ನು ವಾದಿರಾಜರು ಆರಂಭಿಸಿದರು. ವಾದಿರಾಜರು 1532-33, 1548-49, 1564-65, 1580-81ರಲ್ಲಿ ಪರ್ಯಾಯ ಪೂಜೆ ನಡೆಸಿದರು. ಪ್ರಥಮ ದ್ವೆ„ವಾರ್ಷಿಕ ಪರ್ಯಾಯ ಪೀಠವೇರುವಾಗ ಅವರಿಗೆ 52 ವರ್ಷ, ನಾಲ್ಕನೇ ಪರ್ಯಾಯದಲ್ಲಿ 100 ವರ್ಷ ಭರ್ತಿ. ಐದನೇ ಪರ್ಯಾಯದ 1596-97ರ ಅವಧಿಯಲ್ಲಿ ಶಿಷ್ಯ ಶ್ರೀ ವೇದವೇದ್ಯತೀರ್ಥರನ್ನು ಪೀಠದಲ್ಲಿ ಕುಳ್ಳಿರಿಸಿ ಸೋಂದಾ ಕ್ಷೇತ್ರದಲ್ಲಿ ತಾವು ಪರ್ಯಾಯವನ್ನು ನಡೆಸಿದರು. ಆಗ ವಾದಿರಾಜರಿಗೆ ಸುಮಾರು 116 ವರ್ಷ. 

2002ರಲ್ಲಿ ಆರಂಭಗೊಂಡ 31ನೇ ಚಕ್ರದಲ್ಲಿ ಈಗ 248ನೇ ಶ್ರೀ ಪೇಜಾವರ ಮಠದ ಪರ್ಯಾಯ ಕೊನೆಗೊಂಡು 249ನೇ ಪರ್ಯಾಯದೊಂದಿಗೆ 32ನೇ ಪರ್ಯಾಯ ಚಕ್ರ 2018ರ ಜನವರಿ 18ರಂದು ಆರಂಭಗೊಳ್ಳುತ್ತಿದೆ. ಇದರೊಂದಿಗೆ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ದಾಖಲೆಯ ಐದನೆಯ ಪರ್ಯಾಯವನ್ನು ನಡೆಸಿ ಪೀಠದಿಂದ ನಿರ್ಗಮಿಸುತ್ತಿದ್ದಾರೆ.

ಪರ್ಯಾಯ ಸಡಗರ ಹೀಗೆ…
ಗುರುವಾರ ಮುಂಜಾನೆ ಕಾಪು ಬಳಿಯ ದಂಡತೀರ್ಥಕ್ಕೆ ತೆರಳಿ ಅಲ್ಲಿ ಸ್ನಾನ, ಅಲ್ಲಿಂದ ಜೋಡುಕಟ್ಟೆಗೆ ಆಗಮನ, ಅಲ್ಲಿ ಪರ್ಯಾಯೋತ್ಸವದ ದಿನ ಮಾತ್ರ ಮಠಾಧೀಶರು ಪೇಟ ಸುತ್ತಿಕೊಳ್ಳುವ ಸಂಪ್ರದಾಯ, ಅಲ್ಲಿ ವಿವಿಧ ಬ್ಯಾಂಡ್‌ ಸೆಟ್‌, ವಾದ್ಯೋಪಕರಣಗಳು- ಟ್ಯಾಬ್ಲೋಗಳ ವೈಭವದ ಮೆರವಣಿಗೆ, ಭಾವೀ ಪರ್ಯಾಯ ಪೀಠಾಧೀಶರ ಪಟ್ಟದ ದೇವರಾದ ರಾಮಸೀತಾಲಕ್ಷ್ಮಣ ಆಂಜನೇಯನ ಪ್ರತಿಮೆಯನ್ನು ಪಲ್ಲಕಿಯಲ್ಲಿರಿಸಿ ಹಿಂದಿನಿಂದ ಪಲಿಮಾರು ಮಠಾಧೀಶರು, ಅನಂತರ ಆಶ್ರಮ ಜೇಷ್ಠತ್ವದಂತೆ ಕೃಷ್ಣಾಪುರ ಮೊದಲಾದ ಶ್ರೀಗಳು ಮೆರವಣಿಗೆಯಲ್ಲಿ ರಥಬೀದಿಗೆ ಆಗಮನವೇ ಮೊದಲಾದ ಪ್ರಕ್ರಿಯೆ ನಡೆಯುತ್ತದೆ. ರಥಬೀದಿಗೆ ಪ್ರವೇಶವಾಗುತ್ತಿದ್ದಂತೆ ವಾಹನದಿಂದ ಕೆಳಗೆ ಇಳಿದು ಹಾಸುಗಂಬಳಿಯ ಮೇಲೆ ಆಗಮಿಸುವ ಶ್ರೀಪಾದರು ಮೊದಲು ಕನಕನ ಕಿಂಡಿ ಮೂಲಕ ದೇವರ ದರ್ಶನ,
ನವಗ್ರಹದಾನ ಪ್ರದಾನ, ಚಂದ್ರೇಶ್ವರ, ಅನಂತೇಶ್ವರ ದರ್ಶನ ಮಾಡಿದಬಳಿಕ ಕೃಷ್ಣಮಠದ ಮುಂಭಾಗ ನಿರ್ಗಮನ ಪೀಠಾಧೀಶರು ಆಗಮನ ಪೀಠಾಧೀಶರನ್ನು ಸ್ವಾಗತಿಸುವರು. ಮಧ್ವಸರೋವರದಲ್ಲಿ ಪಾದಪ್ರಾಕ್ಷಾಲನ ಬಳಿಕ ದೇವರ ದರ್ಶನ, ಅಕ್ಷಯಪಾತ್ರೆಯ ಹಸ್ತಾಂತರ ನಡೆದು ಸರ್ವಜ್ಞ ಸಿಂಹಾಸನದಲ್ಲಿ ಆರೋಹಣ ನಡೆಯಲಿದೆ. ಬಳಿಕ ಬಡಗು ಮಾಳಿಗೆಯಲ್ಲಿ ಇತರ ಮಠಾಧೀಶರಿಗೆ ಗಂಧ್ಯದುಪಚಾರ ನಡೆದು ಬಳಿಕ ಪರ್ಯಾಯ ದರ್ಬಾರ್‌ ಸಭೆ ನಡೆಯುವುದು.

ಪರ್ಯಾಯ ಮೆರವಣಿಗೆ ಜೋಡುಕಟ್ಟೆ, ಕೆ.ಎಂ.ಮಾರ್ಗವಾಗಿ ರಥಬೀದಿಯನ್ನು ಪ್ರವೇಶಿಸುವುದು. ಈ ಮಾರ್ಗ ಬದಲಾವಣೆ ಎರಡನೇ ಬಾರಿ ನಡೆಯುತ್ತಿದೆ. ತೆಂಕಪೇಟೆ ಮಾರ್ಗ ಅಗಲ ಕಿರಿದಾಗಿರುವುದರಿಂದ ದೊಡ್ಡ ಮಟ್ಟದ ಮೆರವಣಿಗೆ ಹೋಗಲು ಇಕ್ಕಟ್ಟಾಗುತ್ತದೆ.

ಜನಸಾಗರ
ಉಡುಪಿ:
ಪರ್ಯಾಯ ಸಂಭ್ರಮದಲ್ಲಿ  ಮುಳುಗಿರುವ ಉಡುಪಿಯಲ್ಲಿ ಬುಧವಾರ ಸಂಜೆಯಾಗುತ್ತಲೇ ಜನಸಾಗರವೇ ಕಾಣಿಸಿತು. ಕರಾವಳಿ ಮಾತ್ರವಲ್ಲದೆ, ಹೊರ ಜಿಲ್ಲೆಗಳ, ರಾಜ್ಯಗಳ ಭಕ್ತರು ಉಡುಪಿಗೆ ದೌಡಾಯಿಸಿದ್ದಾರೆ. ಉಡುಪಿ ನಗರದ ಸುತ್ತಮುತ್ತ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿ 8 ಗಂಟೆಗೆ ಆರಂಭಗೊಂಡಿದ್ದು, ಹೆಚ್ಚಿನ ಕಡೆ ಕಾಲು ಹಾಕುವುದಕ್ಕೂ ಜಾಗವಿಲ್ಲದಷ್ಟು ಜನ ಸೇರಿದ್ದರು. ಉಡುಪಿ ನಗರದೊಳಗೆ ವಾಹನ ಸಂಚಾರವನ್ನು ಸಂಪೂರ್ಣ ಸ್ತಬ್ಧಗೊಳಿಸಲಾಗಿತ್ತು. ಬಿಗು ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಟಾಪ್ ನ್ಯೂಸ್

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.