Udupi: ನಗರಸಭೆ ಅಧ್ಯಕ್ಷರಾಗಿ ಪ್ರಭಾಕರ್ ಪೂಜಾರಿ, ಉಪಾಧ್ಯಕ್ಷರಾಗಿ ರಜನಿ ಹೆಬ್ಬಾರ್ ಆಯ್ಕೆ
Team Udayavani, Aug 23, 2024, 3:34 PM IST
![Udupi: ನಗರಸಭೆ ಅಧ್ಯಕ್ಷರಾಗಿ ಪ್ರಭಾಕರ್ ಪೂಜಾರಿ, ಉಪಾಧ್ಯಕ್ಷರಾಗಿ ರಜನಿ ಹೆಬ್ಬಾರ್ ಆಯ್ಕೆ](https://www.udayavani.com/wp-content/uploads/2024/08/udupi-10-620x342.jpg)
![Udupi: ನಗರಸಭೆ ಅಧ್ಯಕ್ಷರಾಗಿ ಪ್ರಭಾಕರ್ ಪೂಜಾರಿ, ಉಪಾಧ್ಯಕ್ಷರಾಗಿ ರಜನಿ ಹೆಬ್ಬಾರ್ ಆಯ್ಕೆ](https://www.udayavani.com/wp-content/uploads/2024/08/udupi-10-620x342.jpg)
ಉಡುಪಿ: ಉಡುಪಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಗುಂಡಿಬೈಲು ವಾರ್ಡ್ ಸದಸ್ಯ ಪ್ರಭಾಕರ್ ಪೂಜಾರಿ, ಉಪಾಧ್ಯಕ್ಷರಾಗಿ ಒಳಕಾಡು ವಾರ್ಡ್ ಸದಸ್ಯೆ ರಜನಿ ಹೆಬ್ಬಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕುಂದಾಪುರ ಉಪ ವಿಭಾಗ ಆಯುಕ್ತ ಮಹೇಶ್ಚಂದ್ರ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.
ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿ ಸುಮಿತ್ರಾ ನಾಯಕ್, ಉಪಾಧ್ಯಕ್ಷರಾಗಿ ಲಕ್ಷ್ಮೀ ಮಂಜುನಾಥ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು 2 ವರ್ಷ ಆರು ತಿಂಗಳು ಪೂರೈಸಿದ್ದರು.ಅನಂತರ ಮೀಸಲಾತಿ ಗೊಂದಲ ಸಹಿತ ಮೊದಲಾದ ಕಾರಣಗಳಿಂದ ಮೀಸಲಾತಿ ಘೋಷಣೆ ಒಂದು ವರ್ಷ ಮೂರು ತಿಂಗಳು ಈಗಾಗಲೆ ಕಳೆದಿದೆ.
ಇದೀಗ ಅಧ್ಯಕ್ಷ ಸಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಘೋಷಣೆಯಾಗಿ ಚುನಾವಣೆ ನಡೆದಿದೆ. ನಗರಸಭೆ 35 ವಾರ್ಡ್ ಹೊಂದಿದ್ದು, ಬಿಜೆಪಿ 32 ಸದಸ್ಯರ ಬಲ ಹೊಂದಿದೆ. ಪಕ್ಷದ ಕೋರ್ ಕಮಿಟಿ ನಿರ್ಧಾರದಂತೆ ಉಡುಪಿ ನಗರಸಭೆ 10 ನೇ ಅಧ್ಯಕ್ಷರಾಗಿ ಪ್ರಭಾಕರ್ ಪೂಜಾರಿ, ಉಪಾಧ್ಯಕ್ಷರಾಗಿ ರಜನಿ ಹೆಬ್ಬಾರ್ ಆಯ್ಕೆಯಾಗಿದ್ದಾರೆ.