ಉಡುಪಿ ನಂ. 1 ಆಗಲು ಸಿದ್ಧತೆ: ಪ್ರಮೋದ್
Team Udayavani, Aug 17, 2017, 7:00 AM IST
ಉಡುಪಿ: ಮುಂದಿನ ವರ್ಷ ಅ. 2ಕ್ಕೆ ಉಡುಪಿ ಜಿಲ್ಲೆಯನ್ನು ತ್ಯಾಜ್ಯಮುಕ್ತ ಜಿಲ್ಲೆಯನ್ನಾಗಿ ಘೋಷಿಸುವ ನಿಟ್ಟಿನಲ್ಲಿ 411 ದಿನಗಳ ಕಾರ್ಯಾಚರಣೆಯ ಕ್ಷಣಗಣನೆಗೆ (ಕೌಂಟ್‌ಡೌನ್) ಚಾಲನೆ ನೀಡಲಾಗಿದ್ದು, ಇನ್ನೊಂದು ವರ್ಷದಲ್ಲಿ ಉಡುಪಿಯು ದೇಶದಲ್ಲಿಯೇ ನಂ.1 ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಜಿಲ್ಲಾಧಿ ಕಾರಿ ಗಳ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಸ್ವತ್ಛ ಉಡುಪಿ ಮಿಷನ್ ಕಾರ್ಯಕ್ರಮ ರೂಪಿಸಲಾಗಿದ್ದು, ಈ ಮೂಲಕ ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸುವುದಾಗಿದೆ. ಸ್ವಸಹಾಯ ಗುಂಪುಗಳ ಸದಸ್ಯರ ಮೂಲಕ ಮನೆ/ಉದ್ಯಮಗಳಿಂದ ತ್ಯಾಜ್ಯ ಬೇರ್ಪಡಿಸಿ ವಿಲೇವಾರಿ ಮಾಡುವುದಾಗಿದೆ. ಮನೆ, ಅಂಗಡಿ, ಹೊಟೇಲ್‌ಗಳ ತ್ಯಾಜ್ಯಗಳನ್ನು ದಿನಕ್ಕೆ 2 ಬಾರಿ ಸಂಗ್ರಹಿಸಲಾಗುತ್ತದೆ. ಕೆಂಪು, ಹಸಿರು ಬಕೆಟ್ ಅನ್ನು ನೀಡಲಾಗುತ್ತದೆ. ಯಾವ ಬಕೆಟ್‌ನಲ್ಲಿ ಯಾವ ತ್ಯಾಜ್ಯ ಹಾಕಬೇಕು ಎಂದು ತಿಳಿಸಲಾಗುತ್ತದೆ. ಸಂಗ್ರಹಿತ ತ್ಯಾಜ್ಯ ವಿಂಗಡಿಸಿ ಮಾರಾಟ ಮಾಡಲಾಗುತ್ತದೆ.
ದೈನಂದಿನ, ವಾರದ, ಸಂತೆಗಳ ಮಾರು ಕಟ್ಟೆ ಯಿಂದಲೂ ತ್ಯಾಜ್ಯ ಸಂಗ್ರಹಿಸಿ ಜಾನುವಾರು ಗಳಿಗೆ ನೀಡಲು ರವಾನಿಸಲಾಗುವುದು. ಉಳಿಕೆ ಆಹಾರವನ್ನು ಸ್ವಸಹಾಯ ಗುಂಪಿನವರು ಸಿಒ4, ಸಿಒ5 ಜಾತಿಯ ಉತ್ತಮ ತಳಿಯ ಹುಲ್ಲು ಬೆಳೆಸುವುದರಿಂದ ಪಶು ಆಹಾರ ಸಿದ್ಧ ಪಡಿಸ ಲಾಗುವುದು. 2ನೇ ಹಂತದಲ್ಲಿ ಸಂಗ್ರಹಿಸ ಲಾದ ಪ್ಲಾಸ್ಟಿಕ್, ಇತರ ಪದಾರ್ಥಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಿ ಮಾರಾಟ ಮಾಡಲಾಗುವುದು. ಮಾಂಸದ ತ್ಯಾಜ್ಯವನ್ನು (ಮುಖ್ಯವಾಗಿ ಚಿಕನ್, ಮಟನ್) ಕಾಂಪೋಸ್ಟ್ ಆಗಿ ಪರಿವರ್ತಿಸಲಾಗುವುದು.
ಬಾತುಕೋಳಿ ಸಾಕಣೆ
ಕೆರೆ, ಮದಗಗಳಲ್ಲಿ ಹಾಗೂ ಕಲುಷಿತ ನೀರು ನಿಲ್ಲುವ ಪ್ರದೇಶಗಳನ್ನು ಗುರುತಿಸಿ ಬಾತು ಕೋಳಿ ಗಳನ್ನು ಬಿಡಲಾಗುವುದು. ಇದ ರಿಂದ ನೀರು ಶುದ್ಧೀಕರಣವಾಗುತ್ತದೆ. ಬಾತು ಕೋಳಿ ಗಳ ಮೊಟ್ಟೆಯಿಂದ ಆದಾಯ ಗಳಿಸ ಲಾಗುವುದು. ಮೀನಿನ ತ್ಯಾಜ್ಯವನ್ನು ಇದಕ್ಕೆ ಬಳಸಲಾಗುವುದು.
ಹಂತ-ಹಂತವಾಗಿ ಯೋಜನೆ ಅನುಷ್ಠಾನ
ಮುಂದಕ್ಕೆ ಸ್ವಸಹಾಯ ಗುಂಪಿನ ಸದಸ್ಯರು ಮನೆ ಮನೆಗೆ ಭೇಟಿ ಇತ್ತು ಘನ, ದ್ರವ ತ್ಯಾಜ್ಯ ನಿರ್ವ ಹಣೆಗೆ ಸಂಬಂಧಿಸಿದ ಮಾಹಿತಿ ಸಂಗ್ರ ಹಿಸು ತ್ತಾರೆ. ಬಳಿಕ ಯೋಜನಾ ವರದಿ ಸಿದ್ಧಪಡಿಸ ಲಾಗುತ್ತದೆ. ಇದಕ್ಕೆ ತರಬೇತಿ ನೀಡಲಾಗಿದೆ. ಸದ್ಯ ಉಡುಪಿಯ ವಾರಂಬಳ್ಳಿ, ಕುಂದಾಪುರದ ಗಂಗೊಳ್ಳಿ, ಕಾರ್ಕಳದ ನಿಟ್ಟೆ ಗ್ರಾ.ಪಂ.ಗಳಲ್ಲಿ ಕಾರ್ಯಕ್ರಮ ಚಾಲನೆಗೊಳ್ಳಲಿದೆ. 3 ತಿಂಗಳ ಬಳಿಕ ಪ್ರತಿ ತಾಲೂಕಿನ 5 ಗ್ರಾ.ಪಂ. ಆಯ್ಕೆ ಮಾಡಲಾಗುತ್ತದೆ. ಮತ್ತೆ 3 ತಿಂಗಳ ಅನಂತರ ಜಿಲ್ಲೆಯ ಉಳಿದೆಲ್ಲ ಗ್ರಾ.ಪಂ.ಗಳಿಗೆ ಯೋಜನೆ ವಿಸ್ತರಣೆಯಾಗಿ ಕಾರ್ಯರೂಪಕ್ಕೆ ಬರಲಿದೆ. 2018ರ ಆ. 15ರ ಒಳಗೆ ಯೋಜನೆ ಗುರಿ ಮುಟ್ಟು ವಂತೆ ನೋಡಿಕೊಳ್ಳಲಾಗುತ್ತದೆ. ಅ. 2ರಂದು ತ್ಯಾಜ್ಯಮುಕ್ತ ಜಿಲ್ಲೆ ಘೋಷಣೆ ಯಾಗಿ ಭಾರತದ ಮೊತ್ತಮೊದಲ ತ್ಯಾಜ್ಯ ಮುಕ್ತ ಜಿಲ್ಲೆ ಉಡುಪಿಯಾಗಲಿದೆ. ಇಂಡಿಯನ್ ಗ್ರೀನ್ ಸರ್ವೀಸಸ್‌ನ ವೆಲ್ಲೂರು ಶ್ರೀನಿವಾಸನ್ ಉಸ್ತುವಾರಿಯಲ್ಲಿ ಎಲ್ಲವೂ ನಡೆಯ ಲಿದೆ ಎಂದು ಪ್ರಮೋದ್ ವಿವರ ನೀಡಿದ್ದಾರೆ.
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.
ಬಾಳೆ ಗಿಡಗಳ ಬಳಕೆಗೆ ಉತ್ತೇಜನ
ಮನೆಯ ಬಚ್ಚಲು, ಅಡುಗೆ ಮನೆ ಯಿಂದ ಉತ್ಪತ್ತಿಯಾಗುವ ಕಲುಷಿತ ನೀರನ್ನು ಬಳಸಿ ಕೊಂಡು ಬಾಳೆ, ಕಬಾಳೆ, ಕೆಸು ಮೊದಲಾದ ಗಿಡಗಳನ್ನು ಬೆಳೆಸಲು ಉತ್ತೇಜಿಸಲಾಗುವುದು. ಅದಕ್ಕಾಗಿ ಇಲಾಖೆಯ ನರ್ಸರಿಗಳಲ್ಲಿ ಹಾಗೂ ಸ್ವಸಹಾಯ ಗುಂಪು ಗಳ ಮೂಲಕ ಆಯಾ ಗಿಡಗಳು ಲಭಿಸುವಂತೆ ಮಾಡ ಲಾಗು ವುದು. ಚರಂಡಿ ತ್ಯಾಜ್ಯ ನೀರಿ ನಲ್ಲಿ ಕಬಾಳೆ ಬೆಳೆಸಿ ಸಮಸ್ಯೆ ನಿವಾರಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.