ಉಡುಪಿ: ಮಳೆಯಬ್ಬರ; ಹಲವು ಮನೆಗಳು ಜಲಾವೃತ
Team Udayavani, Jul 24, 2019, 5:44 AM IST
ಉಡುಪಿ: ನಿರಂತರವಾಗಿ ಸುರಿದ ಮಳೆಯ ಪರಿಣಾಮ ಉಡುಪಿ ನಗರದ ರಾಜಕಾಲುವೆಯೆನಿಸಿದ ಕಲ್ಸಂಕ ತೋಡಿನ ಇಕ್ಕೆಲಗಳ ಪರಿಸರದ ಸುಮಾರು 25ಕ್ಕೂ ಅಧಿಕ ಮನೆಗಳು ಸೋಮವಾರ ತಡರಾತ್ರಿ ಮತ್ತು ಮಂಗಳವಾರ ಮಧ್ಯಾಹ್ನದವರೆಗೆ ಜಲಾವೃತವಾದವು.
ಗುಂಡಿಬೈಲು, ಮಠದಬೆಟ್ಟು, ಮೂಡನಿಡಂಬೂರು, ನಿಟ್ಟೂರು, ಬೈಲಕೆರೆ ಮೊದಲಾದೆಡೆ ಕಲ್ಸಂಕ ತೋಡು ಉಕ್ಕಿ ಹರಿದ ಪರಿಣಾಮ ಮನೆಗಳ ಹೊಸ್ತಿಲವರೆಗೂ ನೀರು ಬಂದು ಆತಂಕ ಸೃಷ್ಟಿಯಾಯಿತು. ಶ್ರೀಕೃಷ್ಣ ಮಠದ ರಾಜಾಂಗಣ ಪಾರ್ಕಿಂಗ್ ಪ್ರದೇಶದ ಹಿಂಭಾಗದಲ್ಲಿ 10ರಷ್ಟು ಮನೆಯವರು ತೊಂದರೆ ಅನುಭವಿಸಿದರು.
‘ರಾತ್ರಿ ಒಂದೇ ಸಮನೆ ಹರಿದುಬಂದ ನೀರಿನ ಮಟ್ಟ ತಗ್ಗಲೇ ಇಲ್ಲ. ಕಲ್ಸಂಕ ತೋಡಿನ ಹೂಳು ತೆಗೆಯದೇ ಇದ್ದುದು, ಗಿಡಗಂಟಿಗಳನ್ನು ತೆಗೆಯದಿರುವುದು ಮತ್ತು ಇಕ್ಕೆಲಗಳಲ್ಲಿ ತಡೆಗೋಡೆ ಕಟ್ಟದೇ ಇರುವುದರಿಂದ ಈ ಬಾರಿಯೂ ನೆರೆ ಉಂಟಾಗಿದೆ. ಮಳೆಯ ಪ್ರಮಾಣಕ್ಕಿಂತಲೂ ಕಲ್ಸಂಕ ತೋಡನ್ನು ಸ್ವಚ್ಛಗೊಳಿಸದೇ ಇರುವುದರಿಂದ ಹೆಚ್ಚು ಸಮಸ್ಯೆಯಾಯಿತು’ ಎಂದು ಸ್ಥಳೀಯ ನಿವಾಸಿಗಳು ದೂರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.