ಫೋನ್-ಇನ್ ಮುಂದುವರಿಸುವೆ: ನಿಂಬರ್ಗಿ
Team Udayavani, Jan 2, 2018, 11:14 AM IST
ಉಡುಪಿ: ಉಡುಪಿ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಲಕ್ಷ್ಮಣ ಬಿ. ನಿಂಬರ್ಗಿ ಜ. 1ರಂದು ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಬೆಂಗಳೂರು ಸಿಟಿ (ಆಡಳಿತ) ಡಿಸಿಪಿಯಾಗಿ ವರ್ಗಾವಣೆಗೊಂಡಿರುವ ಡಾ| ಸಂಜೀವ ಎಂ. ಪಾಟೀಲ್ ಸೋಮವಾರ ಅಪರಾಹ್ನ ಲಕ್ಷ್ಮಣ ನಿಂಬರ್ಗಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಹಿಂದಿನ ಎಸ್‌ಪಿ ಪ್ರಾರಂಭಿಸಿದ್ದ ಸಾರ್ವಜನಿಕರೊಂದಿಗಿನ ಫೋನ್- ಇನ್ ಕಾರ್ಯಕ್ರಮವನ್ನು ಮುಂದು ವರಿಸಲು ನಿರ್ಧರಿಸಿದ್ದೇನೆ. ಚಿತ್ರದುರ್ಗ ದಲ್ಲಿದ್ದಾಗ ಆಕಾಶವಾಣಿಯ ಫೋನ್- ಇನ್ ಕಾರ್ಯಕ್ರಮದಲ್ಲಿ ಜನರೊಂದಿಗೆ ಮಾತನಾಡಿದ್ದೆ ಎಂದು ಹೇಳಿದ ನೂತನ ಎಸ್‌ಪಿ, ಜಿಲ್ಲೆಯ ಚಿತ್ರಣಗಳನ್ನು ಪರಿಶೀಲಿಸಿ ಅಧ್ಯಯನ ನಡೆಸಿದ ಬಳಿಕ ಕಾನೂನು ಸುವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಸಂಬಂಧಪಟ್ಟ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಕ್ರಮ ದಂಧೆ-ಮಾಹಿತಿ ಸಂಗ್ರಹ
ಉಡುಪಿ ಜಿಲ್ಲೆಯಲ್ಲಿ ಮಟ್ಕಾ, ಗಾಂಜಾ ಮೊದಲಾದ ಅಕ್ರಮ ದಂಧೆ ಗಳು ನಡೆಯುತ್ತಿರುವುದು ಹಾಗೂ ಅವುಗಳ ವಿರುದ್ಧ ಕೈಗೊಂಡ ಕ್ರಮ ಗಳ ಕುರಿತು ಡಾ| ಸಂಜೀವ ಪಾಟೀಲ್ ಅವ ರಿಂದ ಮಾಹಿತಿ ಪಡೆದು ಕೊಂಡಿ ದ್ದೇನೆ. ಅಕ್ರಮಗಳ ಮೂಲ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಿದ್ದೇನೆ. ನೈತಿಕ ಪೊಲೀಸ್‌ಗಿರಿ ಇದ್ದಲ್ಲಿ ಹತ್ತಿಕ್ಕಲಾಗುವುದು ಎಂದು ಲಕ್ಷ್ಮಣ ನಿಂಬರ್ಗಿ ಹೇಳಿದರು.
ಅತಿಥಿ ಉಪನ್ಯಾಸಕರಾಗಿದ್ದ ನಿಂಬರ್ಗಿ
ವಿಜಯಪುರದ ಇಂಡಿ ತಾಲೂಕಿನ ಬೆನಕನಹಳ್ಳಿ ಮೂಲದವರಾಗಿರುವ ಲಕ್ಷ್ಮಣ ಬಿ. ನಿಂಬರ್ಗಿ, ಬೆಳ ಗಾವಿಯ ಸವದತ್ತಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರೈಸಿದ್ದು, ಹುಬ್ಬಳ್ಳಿಯ ಎಂಜಿನಿಯರಿಂಗ್ ಕಾಲೇಜಿ ನಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿ ಕೇಶನ್‌ನಲ್ಲಿ ಪದವಿ ಪಡೆ ದಿದ್ದಾರೆ. ಬಳಿಕ ಹುಬ್ಬಳ್ಳಿಯ ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ವಲ್ಪ ಕಾಲ ಅತಿಥಿ ಉಪನ್ಯಾಸಕರಾಗಿ ಹಾಗೂ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್‌ನಲ್ಲಿಯೂ ಕರ್ತವ್ಯ ನಿರ್ವಹಿಸಿದ್ದರು.
ಎಸ್‌ಪಿಯಾಗಿ ಪ್ರಥಮ ಜಿಲ್ಲೆ
2014ರ ಐಪಿಎಸ್ ಬ್ಯಾಚ್‌ನವರಾದ ನಿಂಬರ್ಗಿ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಉಪ್ಪಿನಂಗಡಿಗಳಲ್ಲಿ ಎಎಸ್‌ಪಿಯಾಗಿ 6 ತಿಂಗಳು ಕರ್ತವ್ಯ ನಿರ್ವಹಿ ಸಿದ್ದರು. ಅನಂತರ ಒಂದೂವರೆ ವರ್ಷ ಚಿತ್ರದುರ್ಗ ಜಿಲ್ಲೆಯಲ್ಲಿ ಸಹಾಯಕ ಎಸ್‌ಪಿಯಾಗಿದ್ದು, ಉಡುಪಿ ಜಿಲ್ಲೆ ಎಸ್‌ಪಿಯಾಗಿ ಭಡ್ತಿ ಪಡೆದಿದ್ದಾರೆ. ಕರ್ತವ್ಯದ ನೆಲೆಯಲ್ಲಿ ಅವರದು ಉಡುಪಿ ಜಿಲ್ಲೆಗೆ ಪ್ರಥಮ ಭೇಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pushpa 2: ಖಾಕಿಗೆ ಸವಾಲು ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.