ಉಡುಪಿ ಸಂಗೀತ ಸಭಾ : ಭಕ್ತಿಸುಧೆಯಲ್ಲಿ ತೇಲಿಸಿದ ‘ತೀರ್ಥ ವಿಟ್ಠಲ್’
Team Udayavani, Nov 19, 2018, 4:50 AM IST
ಉಡುಪಿ: ವಿಜಯನಾಥ ಶೆಣೈ ಅವರಿಂದ 1962ರಲ್ಲಿ ಸ್ಥಾಪನೆಗೊಂಡ ಉಡುಪಿ ಸಂಗೀತ ಸಭಾದ ಆಶ್ರಯದಲ್ಲಿ ಆಯೋಜನೆಗೊಂಡ ‘ತೀರ್ಥ ವಿಟ್ಠಲ್’- ಅಭಂಗಗಳು ಮತ್ತು ಭಕ್ತಿ ಸಂಗೀತ ರವಿವಾರ ಕೇಳುಗರನ್ನು ಭಕ್ತಿ ಸುಧೆಯಲ್ಲಿ ತೇಲಿಸಿತು. ಮಣಿಪಾಲದ ಸಿಂಡಿಕೇಟ್ ಬ್ಯಾಂಕಿನ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ನಡೆದ ಈ ಸಂಗೀತ ಕಾರ್ಯಕ್ರಮಕ್ಕೆ ಆಭರಣ ಜುವೆಲರ್ಸ್ ಸಹಯೋಗ ನೀಡಿತ್ತು. ಆಭರಣ ಜುವೆಲರ್ಸ್ನ ರಾಧಾ ಎಂ. ಕಾಮತ್ ಉದ್ಘಾಟಿಸಿದರು. ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್. ಪೈ, ಮಾಹೆ ಟ್ರಸ್ಟಿನ ಟ್ರಸ್ಟಿ ವಸಂತಿ ಆರ್. ಪೈ, ಸಂಗೀತ ಸಭಾದ ಟ್ರಸ್ಟಿಗಳಾದ ಶಶಿಕಲಾ ಎನ್. ಭಟ್, ಸಂಧ್ಯಾ ಸುಭಾಷ್ ಕಾಮತ್, ಸುಧಾ ಅನಂತನಾರಾಯಣ ಪೈ ಉಪಸ್ಥಿತರಿದ್ದರು. ಸಿಎ ಸುಶ್ಮಿತಾ ಪ್ರಭು, ಅದಿತಿ ಶ್ಯಾನುಭೋಗ್ ನಿರೂಪಿಸಿದರು.
ಹೆಸರಾಂತ ಸಂಗೀತಗಾರ ಆನಂದ ಭಾಟೆ, ಪುಣೆಯ ರಾಹುಲ್ ದೇಶ್‌ಪಾಂಡೆ ಹಾಗೂ ಸಾಥಿಗಳಾಗಿದ್ದ ಮೃದಂಗವಾದಕ ಪ್ರಸಾದ್ ಜೋಷಿ, ತಬಲ ವಾದಕ ನಿಖೀಲ್ ಪಾಠಕ್, ಹಾರ್ಮೋನಿಯಂ ವಾದಕ ರಾಹುಲ್ ಗೋಲೆ, ಡ್ರಮ್ಸ್ ವಾದಕ ಉದ್ಧವ್ ಕುಂಭಾರ್ ಅವರನ್ನು ಭಜನ್ ಸಂಗೀತ್ ಸಂಧ್ಯಾ ಕಾರ್ಯಕ್ರಮಕ್ಕೆ ಸಂಗೀತ ಸಭಾದ ಅಧ್ಯಕ್ಷ ಟಿ. ರಂಗ ಪೈ ಸ್ವಾಗತಿಸಿದರು. ಟ್ರಸ್ಟಿಗಳಾದ ಜಗದೀಶ್ ಪೈ, ಅಜಿತ್ ಪೈ, ಸುರೇಶ್, ಅನಂತನಾರಾಯಣ ಭಟ್ ಉಪಸ್ಥಿತರಿದ್ದರು.
ಮನಸೂರೆಗೊಂಡ ಸಂಗೀತ
ಆನಂದ ಭಾಟೆ ಮತ್ತು ರಾಹುಲ್ ದೇಶ್‌ಪಾಂಡೆ ಆರಂಭದಲ್ಲಿ ದೇವರ ನಾಮದೊಂದಿಗೆ ಜತೆಯಾಗಿ ‘ಜಯ ಜಯ ರಾಮಕೃಷ್ಣ ಹರಿ’ ಅಭಂಗವನ್ನು ವಿಶಿಷ್ಟ ಆಲಾಪನೆಗಳ ಮೂಲಕ ಹಾಡಿ ರಂಜಿಸಿದರು. ಆನಂದ ಭಾಟೆ ಮತ್ತು ರಾಹುಲ್ ದೇಶಪಾಂಡೆ ಜತೆಯಾಗಿ ಮತ್ತು ಸೊಲೊ ಆಗಿ ಸುಮಾರು 3 ತಾಸು ಕಾಲ ಮರಾಠಿ ಅಭಂಗಗಳು ಮತ್ತು ಭಕ್ತಿ ಸಂಗೀತ ಹಾಡಿದರು. ಆನಂದ ಭಾಟೆ ಅವರ ‘ದಯ ಮಾಡೋ ರಂಗ ದಯ ಮಾಡೋ ಕೃಷ್ಣ’ ಎಂಬ ಪುರಂದರದಾಸರ ಕೀರ್ತನೆ ಮೆಚ್ಚುಗೆಗೆ ಪಾತ್ರವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.