Udupi: ಮನೆಯೊಳಗೆ ಧರ್ಮಗ್ರಂಥ, ಹೊರಗೆ ಸಂವಿಧಾನ ಮುನ್ನೆಡೆಸಬೇಕು: ನ್ಯಾ| ಶ್ರೀಶಾನಂದ

Team Udayavani, Dec 25, 2024, 11:35 PM IST

u1

ಉಡುಪಿ: ಎಲ್ಲ ಧರ್ಮವನ್ನು ಸಮಾನವಾಗಿ ಕಾಣಬೇಕು ಎನ್ನುವುದು ಶ್ರೀಕೃಷ್ಣ ಗೀತೆಯಲ್ಲಿ ತಿಳಿಸಿದ್ದಾನೆ. ಧರ್ಮಗ್ರಂಥಗಳು ಮನೆಯೊಳಗೆ ಇರಬೇಕು. ಮನೆಯಿಂದ ಹೊರಗೆ ನಮ್ಮನ್ನು ಸಂವಿಧಾನ ಮುನ್ನೆಡೆಸಬೇಕು. ಸಂವಿಧಾನದ ಜತೆಗೆ ಭಗವದ್ಗೀತೆಯನ್ನು ಕೊಂಡೊಯ್ಯಲು ಯಾವುದೇ ಅಡ್ಡಿ ಆತಂಕ ಬರದು. ಸಂವಿಧಾನವನ್ನು ಪೂರ್ಣವಾಗಿ ಬಲ್ಲವರು ಇದನ್ನು ಒಪ್ಪುತ್ತಾರೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಹೇಳಿದರು.

ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ನಡೆಯುತ್ತಿರುವ ಬೃಹತ್‌ ಗೀತೋತ್ಸವದ ಅಂಗವಾಗಿ ರಾಜಾಂಗಣದಲ್ಲಿ ಬುಧವಾರ ನ್ಯಾಯಾಂಗದಲ್ಲಿ ಭಗವದ್ಗೀತೆಯ ಪ್ರಸ್ತುತತೆ ಎಂಬ ವಿಷಯದಲ್ಲಿ ಅವರು ಮಾತನಾಡಿದರು.

ಪಾಪಕೃತ್ಯ ಮಾಡಿದವರಿಗೆ ತೀರ್ಪು ನೀಡುವಾಗ ಕರುಣೆಗೆ ಜಾಗ ಕೊಡಬಾರದು. ತೀರ್ಪನ್ನು ತ್ರಿಕರ್ಣ ಶುದ್ಧಿಯಿಂದ ನೀಡಬೇಕು. ಅಂಧಾನುಕರಣೆ ಅಥವಾ ಅಂಧ ಅಂತಃಕರಣದಿಂದಲೂ ನೀಡಬಾರದು. ಎಲ್ಲ ಕ್ಲಿಷ್ಟ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಭಗವದ್ಗೀತೆಯಲ್ಲಿ ಉತ್ತರವಿದೆ. ಪಾಸಿಟಿವ್‌ ಸೈಕಾಲಾಜಿಕಲ್‌ ಟ್ರೀಟ್ಮೆಂಟ್ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ನಮಗೆ ಉಣಬಡಿಸಿದ್ದಾನೆ ಎಂದು ವಿಶ್ಲೇಷಿಸಿದರು.

ಸಿನೆಮಾ, ಧಾರಾವಾಹಿಗಳು ನಮ್ಮ ನ್ಯಾಯಾಲಯ, ಪೊಲೀಸ್‌ ವ್ಯವಸ್ಥೆಯನ್ನು ತಪ್ಪಾಗಿಸಿ ಬಿಂಬಿಸಿದೆ, ಇದಕ್ಕೂ ಹೆಚ್ಚಾಗಿ ಬಹು ಜನರ ಧರ್ಮವನ್ನು ಸರಿಪಡಿಸುತ್ತೇವೆ ಎನ್ನುತ್ತಾಲೇ ಇನ್ನಷ್ಟು ತಪ್ಪಾಗಿ ತೋರಿಸಲಾಗುತ್ತಿದೆ. ನ್ಯಾಯಾಲಯದಲ್ಲಿ ಭಗವದ್ಗೀತೆ ಮೇಲೆ ಪ್ರಮಾಣ ಮಾಡುವ ಸನ್ನಿವೇಶ ಸದಾ ಬರುವುದಿಲ್ಲ. ಅದು ಒಂದು ಭಾಗವಾಗಿ ಕಾಣಸಿಗುತ್ತದೆ. ಪಾಪ ಕರ್ಮ ಮಾಡಿದವನಿಗೂ ಭವಿಷ್ಯವಿದೆ. ಹಾಗಂತ ಅಂತಃಕರ್ಣ ಮರೆತು ತೀರ್ಪು ನೀಡುವುದಲ್ಲ ಎಂದರು.

ಭಗವದ್ಗೀತೆ ಎಲ್ಲ ರೀತಿಯ ಖಿನ್ನತೆಗೆ ಭಗವದ್ಗೀತೆಯಲ್ಲಿ ಪರಿಹಾರದ ಉತ್ತರವಿದೆ. ಗೀತೆ ಒಂದು ರೀತಿಯಲ್ಲಿ ಯುನಿವರ್ಸಲ್‌ ಚಾರ್ಜರ್‌ ಇದ್ದಂತೆ. ಎಲ್ಲದಕ್ಕೂ ಅನ್ವಯಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.

ವಕೀಲ ಚಿರಂಜೀವಿ ಭಟ್‌, ಪತ್ರಕರ್ತೆ ಶೋಭಾ ಎಂ.ಸಿ. ಮಳವಳ್ಳಿ ಸಂವಾದ ನಡೆಸಿಕೊಟ್ಟರು.

ನ್ಯಾ| ವಿ.ಶ್ರೀಶಾನಂದ ಅವರಿಗೆ ಪುತ್ತಿಗೆ ಮಠಾ ಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥರು ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಅನುಗ್ರಹಿಸಿದರು.

ಐದು ಗಂಟೆಯಲ್ಲಿ ಗೀತೆ ಬರೆದ
ಐದು ಗಂಟೆಯಲ್ಲಿ ಭಗವದ್ಗೀತೆಯ ಎಲ್ಲ ಶ್ಲೋಕಗಳನ್ನು ರಾಜಾಂಗಣದಲ್ಲೇ ಕೂತು ಬರೆದ ಸುಶಾಂತ್‌ ಬ್ರಹ್ಮಾವರ ಅವರನ್ನು ಶ್ರೀಪಾದರು ಗೌರವಿಸಿದರು.

ಮಹಿತೋಷ್‌ ಆಚಾರ್ಯ ಸ್ವಾಗತಿಸಿ ನಿರೂಪಿಸಿದರು.

ಭಗವದ್ಗೀತೆ ಜಡ್ಜ್ಮೆಂಟ್‌ ಗ್ರಂಥ: ಪುತ್ತಿಗೆ ಶ್ರೀ
ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿ, ಭಗವದ್ಗೀತೆ ಆಧಾರದಲ್ಲಿ ಏನೇ ತೀರ್ಮಾನ ತೆಗೆದುಕೊಂಡರೂ ಅದು ಶ್ರೇಷ್ಠ, ಸಮರ್ಥವಾಗಿರುವುದು. ಪ್ರತಿಯೊಬ್ಬರು ತೀರ್ಮಾನ ತೆಗೆದುಕೊಳ್ಳುವಾಗಲೇ ಎಡುವುದು. ಜೀವನ ತೀರ್ಪು, ತೀರ್ಮಾನಗಳ ಸರಮಾಲೆಯಾಗಿದೆ. ತೀರ್ಮಾನ ತೆಗೆದುಕೊಳ್ಳಲು ಇರುವ ಆಧಾರವೇ ಭಗವದ್ಗೀತೆ. ಧರ್ಮ, ಸತ್ಯ ಇತ್ಯಾದಿಗಳನ್ನು ಏನು ಎಂಬುದು ತೀರ್ಮಾನ ಮಾಡುವುದು ಕಷ್ಟ. ಎಲ್ಲದಕ್ಕೂ ಆದರ್ಶಪ್ರಾಯ ಭಗವದ್ಗೀತೆ. ಹೀಗಾಗಿಯೇ ಇದು ಜಡ್ಜಮೆಂಟ್‌ ಗ್ರಂಥ ಎಂದರು.

ಆತ್ಮ ಸಾಕ್ಷಿಯೇ ಅಂತಿಮ ಸತ್ಯ. ಆತ್ಮಸಾಕ್ಷಿ ಕೊಂದವರಿಗೆ ಸತ್ಯ ಹಾಗೂ ಧರ್ಮದ ಬಾಗಿಲು ಮುಚ್ಚಿದ್ದಂತೆ. ಆತ್ಮಸಾಕ್ಷಿಗೆ ಬೆಲೆ ಕೊಟ್ಟಾಗ ಮಾತ್ರ ಅದು ಸದಾ ಜಾಗೃತವಾಗಿರುತ್ತದೆ. ಆತ್ಮಸಾಕ್ಷಿಯಲ್ಲಿ ಭಗವಂತ ಇದ್ದಾನೆ. ಭಗವಂತ ಮತ್ತು ಆತ್ಮಸಾಕ್ಷಿಯೇ ಸತ್ಯದ ಆಧಾರ. ದೇವರು, ಧರ್ಮ, ಸಂಸ್ಕೃತಿಯ ಪರಿಜ್ಞಾನ ನ್ಯಾಯಾಧಿಧೀಶರಿಗೆ ಇರಬೇಕು. ಸಂಕೀರ್ಣ ಹಾಗೂ ಕ್ಲಿಷ್ಟವಾದ ಪ್ರಸ್ತುತ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನ್ಯಾಯಂಗ ಒಂದೇ ಭರವಸೆ. ರಾಜಕೀಯ ಸೇರಿ ಬೇರೆಲ್ಲ ಕ್ಷೇತ್ರ ಹೊಲಸು ಎದ್ದಿದ್ದೆ. ನ್ಯಾಯಾಂಗ ಸರಿಯಾಗಿದ್ದರೆ ಉಳಿದೆಲ್ಲ ಕ್ಷೇತ್ರ ಸರಿ ಮಾಡಲು ಸಾಧ್ಯ ಎಂದು ಹೇಳಿದರು.

ಬೃಹತ್‌ ಗೀತೋತ್ಸವದ ಅಂಗವಾಗಿ ಡಿ.26ರ ಸಂಜೆ 5.30ಕ್ಕೆ ರಾಜಾಂಗಣದಲ್ಲಿ ಚಿತ್ರಕಲೆ ಮತ್ತು ಭಗವದ್ಗೀತೆ ಕುರಿತು ಕಲಾವಿದ ಗಂಜೀಫ‌ ರಘುಪತಿ ಭಟ್‌ ಉಪನ್ಯಾಸ ನೀಡಲಿದ್ದಾರೆ.

ಟಾಪ್ ನ್ಯೂಸ್

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

4-soldier

Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-shirva

Shirva ಹ‌ಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi: ಸಂತೆಕಟ್ಟೆಯಲ್ಲಿ ಲಾರಿ ಪಲ್ಟಿ: ಸಂಚಾರ ದಟ್ಟಣೆ

Udupi: ಸಂತೆಕಟ್ಟೆಯಲ್ಲಿ ಲಾರಿ ಪಲ್ಟಿ: ಸಂಚಾರ ದಟ್ಟಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

3

Bengaluru: ಕ್ಯಾಬ್‌ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್‌ ಎಂಜಿನಿಯರ್‌ ಸಾವು

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Christmas: ಸಿಲಿಕಾನ್‌ ಸಿಟಿಯಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ

Christmas: ಸಿಲಿಕಾನ್‌ ಸಿಟಿಯಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.