Udayavani Campaign: ಉಡುಪಿ-ನಮ್ಮೂರಿಗೆ ನರ್ಮ್ ಕಳ್ಸಿ ಮಾರ್ರೆ!
Team Udayavani, Jun 25, 2024, 6:13 PM IST
ಉಡುಪಿ: ಅತ್ಯುತ್ತಮ ಖಾಸಗಿ ಬಸ್ ವ್ಯವಸ್ಥೆ ಇರುವ ಉಡುಪಿ ತಾಲೂಕಿನ ಹಲವೆಡೆ ಕೊರೊನಾ ಬಳಿಕ ಖಾಸಗಿ ಬಸ್ ಗಳ ಸಂಚಾರ ರದ್ದಾಗಿದೆ. ಹೀಗಾಗಿ ಮತ್ತು ಮಹಿಳೆಯರಿಗೆ ಉಚಿತ ಪ್ರಯಾಣದ ಅನುಕೂಲವೂ ಸೇರಿದಂತೆ ಹಲವು ಕಾರಣಗಳಿಗಾಗಿ ಸರಕಾರಿ ನರ್ಮ್ ಬಸ್ಸಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಕೆಲವು ರೂಟ್ ಗಳಲ್ಲಿ ರದ್ದು ಮಾಡಲಾದ ನರ್ಮ್ ಬಸ್ ಸಂಚಾರದ ಮರು ಆರಂಭಕ್ಕೂ ವ್ಯಾಪಕ ಆಗ್ರಹವಿದೆ. ಉದ ಯವಾಣಿಯ “ನಮಗೆ ಬಸ್ ಬೇಕೇ ಬೇಕು’ ಅಭಿ ಯಾನದ ವೇಳೆ ಹಲವು ಕಡೆಯಿಂದ ಈ ಬೇಡಿ ಕೆಗಳು ಬಂದಿವೆ.
ಹೆಬ್ರಿಯಿಂದ ಬ್ರಹ್ಮಾವರಕ್ಕೆ ನರ್ಮ್ ಕೊಡಿ
ಅಭಿಯಾನಕ್ಕೆ ಪತ್ರ ಬರೆದವರೊಬ್ಬರು ಹೇಳುವಂತೆ, ಕೊರೊನಾ ಪೂರ್ವದಲ್ಲಿ ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದು, ಬ್ರಹ್ಮಾವರ ಮತ್ತು ಹೆಬ್ರಿ ನಡುವೆ ಮೂರು ನರ್ಮ್ ಬಸ್ ಗಳನ್ನು ಬಿಡಲಾಗಿತ್ತು. ಆದರೆ, ಖಾಸಗಿಯವರು ಅದರ ಹಿಂದೆ ಮುಂದೆಲ್ಲ ಬಸ್ ಓಡಿಸಿ ಅದಕ್ಕೆ ಕಲೆಕ್ಷನ್ ಇಲ್ಲದಂತೆ ಮಾಡಿ ಸಂಕಷ್ಟಕ್ಕೆ ತಳ್ಳಿದರು. ಈ ನಡುವೆ ಕೊರೊನಾದ ಹಿನ್ನೆಲೆಯಲ್ಲಿ ಕೆಲವೊಂದು ಖಾಸಗಿ ಬಸ್ ಗಳ ಸಂಚಾರವೂ ನಿಂತಿದೆ. ಇದರಿಂದ ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ, ಖಾಸಗಿ-ಸರಕಾರಿ ಕೆಲಸ, ಬ್ಯಾಂಕ್, ಆಸ್ಪತ್ರೆಗೆ ಹೋಗುವವರಿಗೆ ಭಾರಿ ತೊಂದರೆಯಾಗಿದೆ. ವಿದ್ಯಾರ್ಥಿಗಳ ಪರಿಸ್ಥಿತಿ ಹೇಗಾಗಿದೆ ಎಂದರೆ, ಹೆತ್ತವರು ತಮ್ಮ ಮಕ್ಕಳು ಹೇಗಾದರೂ ಕಾಲೇಜಿಗೆ ಹೋಗಲಿ ಎಂದು ಸಾಲ ಮಾಡಿ ಬೈಕ್ ಕೊಡಿಸಬೇಕಾದ ಅನಿ
ವಾರ್ಯತೆ ಉಂಟಾಗಿದೆ. ಹೆಣ್ಮಕ್ಕಳ ಶಿಕ್ಷಣಕ್ಕೂ ಕಲ್ಲು ಬಿದ್ದಿದೆ.
ಅಕ್ಕ ಪಕ್ಕದ ಊರುಗಳಾದ ಕುಕ್ಕೆಹಳ್ಳಿ- ಪೆರ್ಡೂರು, ಕೊಕ್ಕರ್ಣೆ-ಗೋಳಿ ಅಂಗಡಿಗೆ ಸಾರ್ವಜನಿಕರ ಒತ್ತಾಯದ ಮೇರೆಗೆ ನರ್ಮ್
ಬಸ್ ಸಂಚಾರ ಮತ್ತೆ ಆರಂಭ ವಾಗಿದೆಯಂತೆ. ಹೀಗಾಗಿ ಹೆಬ್ರಿ- ಕರ್ಜೆ -ಬ್ರಹ್ಮಾವರ ನಡುವೆ ಕೂಡ ನರ್ಮ್ ಬಸ್ ಮತ್ತೆ ಆರಂಭವಾಗಲಿ ಎಂದು ಅವರು ಆಗ್ರಹಿಸಿದ್ದಾರೆ.
ನೀಲಾವರ, ಕೂರಾಡಿ ಭಾಗದವರ ಬೇಡಿಕೆ: ಬ್ರಹ್ಮಾವರ-ಮಟಪಾಡಿ- ನೀಲಾವರ, ಮಣಿಪಾಲ- ನೀಲಾವರ-ಕೂರಾಡಿ ಮಾರ್ಗವಾಗಿ ಮಂದಾರ್ತಿ, ಉಡುಪಿ-ಬಾರ್ಕೂರು-ಕುರಾಡಿ ಮಾರ್ಗವಾಗಿ ಕೊಕ್ಕರ್ಣೆಗೆ ಹೋಗುವುದಕ್ಕೆ ಖಾಸಗಿ ಬಸ್ ಗಳನ್ನೇ ಅವಲಂಬಿಸಬೇಕಾಗಿದೆ. ಈ ಮಾರ್ಗಗಳಲ್ಲಿ ನರ್ಮ್ ಬಸ್ ಗಳು ಬರಲಿ ಎನ್ನುವುದು ಸಂದೀಪ್ ಪೂಜಾರಿ ಕುರಾಡಿ ಎಂಬವರ ಆಗ್ರಹ.
ಕೆಲವು ವರ್ಷಗಳ ಹಿಂದೆ ಮಣಿಪಾಲ-ಕೂರಾಡಿ ಮಂದಾರ್ತಿ ಮಾರ್ಗದಲ್ಲಿ ಎರಡು ಸೇತುವೆಗಳ ನಿರ್ಮಾಣವಾಗಿದೆ. ಅದರ ಉದ್ಘಾಟನೆ ವೇಳೆ ಆಗ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ಅವರು ನರ್ಮ್ ಬಸ್ ಓಡಾಟದ ಭರವಸೆ ನೀಡಿದ್ದರು. ಆದರೆ, ಅದು ಪತ್ರಿಕಾ ವರದಿಗಷ್ಟೇ ಸೀಮಿತ ವಾಯಿತು. ಈ ಭಾಗದ ವಿದ್ಯಾರ್ಥಿಗಳು ಬೆಳಗ್ಗೆ ಮತ್ತು ಸಂಜೆ ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುತ್ತಾರೆ ಸಂದೀಪ್ ಪೂಜಾರಿ.
ಬೆಳ್ಳರ್ಪಡಿಗೆ 1 ಬಸ್,100 ವಿದ್ಯಾರ್ಥಿಗಳು
ಹಿರಿಯಡಕ-ಹರಿಖಂಡಿಗೆ ನಡುವಿನ ಬೆಳ್ಳರ್ಪಾಡಿ ಮತ್ತು ಇತರ ಗ್ರಾಮಗಳ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ತೀವ್ರವಾಗಿದೆ. ಇಲ್ಲಿಂದ ಮಣಿಪಾಲ, ಉಡುಪಿಯ ವಿವಿಧ ಶಾಲೆ, ಕಾಲೇಜುಗಳಿಗೆ ತೆರಳುವ ನೂರಾರು ವಿದ್ಯಾರ್ಥಿಗಳಿದ್ದಾರೆ. ಸದ್ಯಕ್ಕೆ ನಮ್ಮ ಊರಿಗೆ ಕೇವಲ ಒಂದು ಖಾಸಗಿ ಬಸ್ಸು ಮಾತ್ರ ದಿನಕ್ಕೆ ಎರಡು ಬಾರಿ ಬಂದು ಹೋಗುತ್ತದೆ. ಬೆಳಗ್ಗೆ ಮತ್ತು ಸಂಜೆ ಶಾಲೆ-ಕಾಲೇಜು ಸಮಯದಲ್ಲಿ ಈ ಬಸ್ಸಿನಲ್ಲಿ ವಿದ್ಯಾರ್ಥಿಗಳು ಹೋಗಲು ಭಾರಿ ಕಷ್ಟ ಪಡ ಬೇಕಾಗಿದೆ. ಅನೇಕ ಮಕ್ಕಳು ಮತ್ತು ವಿದ್ಯಾರ್ಥಿನಿಯರು ಅತಿ ಭಾರದ ಬ್ಯಾಗನ್ನು ಹೊತ್ತು ಆ ಬಸ್ಸನ್ನು ಹತ್ತಲಾಗದೆ ಬೇರೆಯವರ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಬೇಕಾಗಿದೆ. ಮಳೆಗಾಲದಲ್ಲಂತೂ ಯಮಯಾತನೆ. ಹೀಗಾಗಿ ನರ್ಮ್ ಬಸ್ ಹಾಕುವ ವ್ಯವಸ್ಥೆ ಮಾಡಲು
ಮನವಿ.
– ಬೆಳ್ಳರ್ಪಾಡಿ ಮತ್ತು ಪರಿಸರದ ಗ್ರಾಮಸ್ಥರು.
ಲೋಕಾಯುಕ್ತರೇ ಸೂಚಿಸಿದ್ದಾರೆ
ಉಡುಪಿಯ ದೊಡ್ಡಣಗುಡ್ಡೆ, ಪೆರಂಪಳ್ಳಿ ಭಾಗ ಕ್ಕೆ ನರ್ಮ್ ಬಸ್ ಒದಗಿಸುವಂತೆ ಲೋಕಾಯುಕ್ತರೇ ಸೂಚಿಸಿದ್ದಾರೆ. ಆವರ ಆದೇಶದ ಮೇರೆಗೆ ಜಿಲ್ಲಾಧಿಕಾರಿಗಳು ಆರ್‌ಟಿಒ ಅವರಿಗೆ ಪತ್ರ ಬರೆದಿದ್ದಾರೆ. ಆದರೆ, ಈ ಪ್ರಕ್ರಿಯೆ ಮುಗಿದು ಆರು ತಿಂಗಳಾಗುತ್ತಾ ಬಂದರೂ ಫಲವಿಲ್ಲ. ಇಲ್ಲಿ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇನ್ನಾದರೂ ಈ ರೂಟಿನಲ್ಲಿ ನರ್ಮ್ ಬಸ್ ಒದಗಿಸಿ.
-ಎನ್. ರಾಮ ಭಟ್, ಕಾರ್ಯದರ್ಶಿ,
ಕೆಎಚ್‌ಬಿ ನಿವಾಸಿಗಳ ಸಂಘ, ದೊಡ್ಡಣಗುಡ್ಡೆ
ನಮ್ಮ ಊರಿಗೆ ಸಂಜೆ ಬಸ್ ಬೇಕು
ನಾನು 10ನೇ ತರಗತಿ ವಿದ್ಯಾರ್ಥಿ. ಅಪರಾಹ್ನ 3.00ರಿಂದ ಸಂಜೆ 6ರ ವರೆಗೆ ಶಿರ್ವ- ಸೂಡ -ಪಳ್ಳಿ ಮಾರ್ಗವಾಗಿ ಯಾವುದೇ ಬಸ್ ಸಂಚಾರವಿಲ್ಲ. ಈ ಕಾರಣದಿಂದಾಗಿ ವಿದ್ಯಾರ್ಥಿಗಳು ತುಂಬಾ ಸಂಕಟವನ್ನು ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿ, ಈ ಮಾರ್ಗದಲ್ಲಿ ಸಂಜೆಯ ಹೊತ್ತಿಗೆ ಬಸ್ ಓಡಾಟಕ್ಕೆ ಅನುವು ಮಾಡಿಕೊಡಬೇಕಾಗಿ ವಿನಂತಿ.
*ಶಶಾಂಕ್, ವಿದ್ಯಾರ್ಥಿ
ನಮ್ಮ ಊರಿಗೆ ಹಗಲು ಬಸ್ ಬೇಕು
ನಮ್ಮೂರು ಸಂಪಿಗೆ ನಗರ ಮತ್ತು ಪಿತ್ರೋಡಿ ನಡು ವಿನ ಕಲಾಯಿಬೈಲ್. ಇಲ್ಲಿ ಬೆಳಗ್ಗೆ 4 ಟ್ರಿಪ್ ಬಸ್ ಓಡಾಡುತ್ತವೆ. 10 ಗಂಟೆ ಬಳಿಕ ಬಸ್ಸೇ ಇಲ್ಲ. ಮತ್ತೆ ಸಂಜೆ 6.45ಕ್ಕೆ ಒಂದು ಟ್ರಿಪ್ ಇದೆ. ಮದ್ಯದಲ್ಲಿ ಓಡಾಡಲು ಆಟೋವೇ ಗತಿ. ವಿದ್ಯಾ ರ್ಥಿಗಳಿಗೆ ಮರಳಿ ಬರಲು ಭಾರಿ ಸಮಸ್ಯೆ. ನಮ್ಮೂರಿನ ಗೋಳು ಯಾರಿಗೂ ಅರ್ಥವೇ ಆಗಲ್ಲ. ಗಂಟೆಗೊಂದು ಬಸ್ ಇದ್ದರೆ
ಎಷ್ಟು ಒಳ್ಳೆದಿತ್ತು.
– ಕಲಾಯಿ ಬೈಲ್ ನಿವಾಸಿಗಳು.
*ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.