ಉಡುಪಿ ಕೆಲ ಅಪರಾಧ ಸುದ್ದಿಗಳು (ಫೆ. 8)
Team Udayavani, Feb 9, 2018, 11:06 AM IST
ಮರದಿಂದ ಬಿದ್ದು ಸಾವು
ಉಡುಪಿ: ಕುತ್ಪಾಡಿ ಗ್ರಾಮದ ದಿ| ಲಕ್ಷ್ಮಣ ಆಚಾರ್ಯ ಅವರ ಪುತ್ರ ಸದಾಶಿವ ಆಚಾರ್ಯ (48) ಅವರು ಫೆ. 7ರಂದು ಮನೆ ಸಮೀಪದ ಕುಮಾರ್ ಶೇರಿಗಾರ್ ಅವರ ಜಾಗದಲ್ಲಿದ್ದ ಮರದಿಂದ ಹುಣಸೆಹಣ್ಣು ಕೊಯ್ಯುತ್ತಿದ್ದಾಗ ಕೊಂಬೆ ಮುರಿದು ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಬೈಕ್‌ಗಳ ಢಿಕ್ಕಿ: ಗಾಯ
ಉಡುಪಿ: ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದ ಸಮೀಪ ಫೆ. 8ರಂದು ಬೈಕುಗಳು ಢಿಕ್ಕಿ ಹೊಡೆದುಕೊಂಡ ಪರಿಣಾಮ ಒಂದು ಬೈಕಿನಲ್ಲಿದ್ದ ಉಜ್ರೆಬೈಲು ನಿರತ್ ಶೆಟ್ಟಿ ಮತ್ತು ಸುನೀಲ್ ಆಚಾರ್ಯ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.
ಗಾಂಜಾ ಸೇವನೆ: ಸೆರೆ
ಕಾರ್ಕಳ: ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರದ ಸಮೀಪ ಸಾರ್ವಜನಿಕ ಪ್ರದೇಶದಲ್ಲಿ ಗಾಂಜಾ ಸೇವೆನೆ ಮಾಡುತ್ತಿದ್ದ ರಘು (27)ವನ್ನು ಕಾರ್ಕಳ ನಗರ ಠಾಣೆ ಪೊಲೀಸರು ಫೆ. 7ರಂದು ಬಂಧಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಡ್ಡಬಂದ ಹಂದಿ : ಬೈಕ್ ಪಲ್ಟಿ
ಕುಂದಾಪುರ: ಕಾಡು ಹಂದಿ ಅಡ್ಡ ಬಂತೆಂದು ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸ್ಕಿಡ್ ಆಗಿ ಬಿದ್ದು, ಹಿಂಬದಿ ಸವಾರ ಗಾಯಗೊಂಡ ಘಟನೆ ಕುಂದಾಪುರದ ಕೊರ್ಗಿ ಕ್ರಾಸ್ ಬಳಿ ಫೆ. 7ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂಭವಿಸಿದೆ.
ಪ್ರಕಾಶ್ ಶೆಟ್ಟಿ ಬೈಕ್ ಚಲಾಯಿಸುತ್ತಿದ್ದು, ಹಿಂಬದಿ ಸವಾರ ಗೌತಮ್ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗುವಿನ ಜತೆ ಮಹಿಳೆ ನಾಪತ್ತೆ
ಕುಂದಾಪುರ: ಕರ್ಕುಂಜೆ ಗ್ರಾಮದ ಮಾವಿನಕಟ್ಟೆ ನಿವಾಸಿ ರಿಯಾಜ್ ಅಹಮ್ಮದ್ ಅವರ ಪತ್ನಿ ಸಬೀಹಾ ಕಾವಲ್ (25) ತನ್ನ ಎರಡೂವರೆ ವರ್ಷದ ಪುತ್ರ ಸಯ್ಯದ್ ರಿಜಾನ್‌ನೊಂದಿಗೆ ಫೆ. 7ರಂದು ಮಧ್ಯಾಹ್ನ 1 ಗಂಟೆ ಬಳಿಕ ನಾಪತ್ತೆಯಾಗಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಮಗುವಿನ ಜತೆ ಮಹಿಳೆ ನಾಪತ್ತೆ
ಕುಂದಾಪುರ: ಕರ್ಕುಂಜೆ ಗ್ರಾಮದ ಮಾವಿನಕಟ್ಟೆ ನಿವಾಸಿ ರಿಯಾಜ್ ಅಹಮ್ಮದ್ ಅವರ ಪತ್ನಿ ಸಬೀಹಾ ಕಾವಲ್ (25) ತನ್ನ ಎರಡೂವರೆ ವರ್ಷದ ಪುತ್ರ ಸಯ್ಯದ್ ರಿಜಾನ್‌ನೊಂದಿಗೆ ಫೆ. 7ರಂದು ಮಧ್ಯಾಹ್ನ 1 ಗಂಟೆ ಬಳಿಕ ನಾಪತ್ತೆಯಾಗಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.