ನಿಲ್ಲದ ಕುಡುಕರ ಹಾವಳಿ: ಎಸ್‌ಪಿಗೆ ದೂರು


Team Udayavani, Sep 29, 2018, 6:00 AM IST

280918astro02.jpg

ಉಡುಪಿ: ಕುಡುಕರ ಹಾವಳಿ ಹೆಚ್ಚಾಗಿದ್ದು, ತೊಂದರೆಯಾಗುತ್ತಿದೆ. ಇದರ ಬಗ್ಗೆ ಕ್ರಮವಹಿಸುವಂತೆ ಎಸ್‌ಪಿ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಹೆಚ್ಚಿನ ದೂರುಗಳು ಕೇಳಿಬಂದವು.  

ಶುಕ್ರವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕುಡುಕರ ಹಾವಳಿ ಬಗ್ಗೆ ಹಲವರು ಎಸ್‌ಪಿ ಲಕ್ಷ್ಮಣ್‌ ಬ.ನಿಂಬರಗಿ ಅವರಿಗೆ ದೂರು ನೀಡಿದ್ದಾರೆ. ಕರೆ ಮಾಡಿದ ಓರ್ವರು “ಕಲ್ಯಾಣಪುರದಲ್ಲಿ ಬೆಳಗ್ಗೆ ವಾಕಿಂಗ್‌ ಹೋಗುವ ವೇಳೆಯಲ್ಲಿಯೇ ಬಾರ್‌ ಓಪನ್‌ ಆಗಿರುತ್ತದೆ’ ಎಂದು ದೂರಿದರು. “ಮಂದಾರ್ತಿಯ ವೈನ್‌ಶಾಪ್‌ವೊಂದರ ಎದುರು ಮಟ್ಕಾ ಕೂಡ ನಡೆಯುತ್ತಿದೆ’ ಎಂದು ಇನ್ನೊಂದು ದೂರು ಕರೆ ಬಂತು. “ಮಂದಾರ್ತಿಯ ಅಶ್ವತ್ಥಕಟ್ಟೆ ಬಳಿ ಇರುವ ಬಾರ್‌ ಪಕ್ಕದಲ್ಲಿ ಅನಧಿಕೃತ ಗೂಡಂಗಡಿ ಇದೆ. ಅಲ್ಲಿ ಕುಡುಕರ ಹಾವಳಿ ವಿಪರೀತವಾಗಿದೆ. ಅಶ್ವತ್ಥಕಟ್ಟೆಗೆ ಪ್ರದಕ್ಷಿಣೆ ಬರುವ ಮಹಿಳೆಯರು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗಿದೆ’ ಎಂದು ಮತ್ತೂಬ್ಬರು ದೂರಿದರು. ಕುಂದಾಪುರದ ಬಾರ್‌ವೊಂದರ ಪಕ್ಕದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು ಇದರಿಂದ ನೆಮ್ಮದಿ ಭಂಗ ವಾಗಿದೆ, ಶಂಕರ ನಾರಾಯಣ ಬಸ್‌ ನಿಲ್ದಾಣದಲ್ಲಿ ಮಟ್ಕಾ ನಡೆ ಯುತ್ತಿದೆ ಎಂಬ ದೂರು ಕರೆಗಳೂ ಬಂದವು. 

ಕುಡುಕರು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವುದರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ಬಾರ್‌ಗಳ ಬಳಿ ಅಕ್ರಮ ನಡೆಯುತ್ತಿದ್ದರೂ ಗಮನ ಹರಿಸುತ್ತೇವೆ. ಈ ಬಗ್ಗೆ ಅಬಕಾರಿ ಇಲಾಖೆಯವರಿಗೂ ಮಾಹಿತಿ ನೀಡಲಾಗಿದೆ ಎಂದು ಎಸ್‌ಪಿ ತಿಳಿಸಿದರು. 

ಫೋಕಸ್‌ ಲೈಟ್‌ಗಳನ್ನು ನಿಯಂತ್ರಿಸಿ
“ಮಣಿಪಾಲ, ಪೆರಂಪಳ್ಳಿ, ಅಂಬಾಗಿಲು ಮೊದಲಾದೆಡೆ ಎಲ್‌ಇಡಿ ಲೈಟ್‌ ಅಳವಡಿಸಿದ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಯಾಗಿದೆ’ ಎಂದು ದೂರಿ ದಾಗ ಇದರ ಬಗ್ಗೆ ವಿಶೇಷ ಅಭಿಯಾನ ನಡೆಸಿ ಸೂಕ್ತ ಕ್ರಮ ಕೈಗೊಳ್ಳು ವಂತೆ ಅಧಿಕಾರಿಗಳಿಗೆ ಎಸ್‌ಪಿ ಸೂಚಿಸಿದರು. 

ಬಸ್‌ ನಿಲ್ಲಿಸಲು ಜಾಗವಿಲ್ಲ
ಉಡುಪಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದೊಳಗೆ ಖಾಸಗಿ ಬಸ್‌ ಗಳನ್ನು ನಿಲ್ಲಿಸುವುದರಿಂದ ಸಮಸ್ಯೆ ಯಾಗಿದೆ ಎಂದು ದೂರಿದಾಗ “ಒಂದು ವರ್ಷದೊಳಗೆ ಕೆಎಸ್‌ಆರ್‌ಟಿಸಿ ಹೊಸ ಬಸ್‌ ನಿಲ್ದಾಣ ನಿರ್ಮಾಣಗೊಳ್ಳು ವುದರಿಂದ ಸಮಸ್ಯೆ ಬಗೆಹರಿಯಲಿದೆ’ ಎಂದು ಎಸ್‌ಪಿ ತಿಳಿಸಿದರು.  “ಆಟೋ ಓಡಿಸಲು ಸಿಟಿ ಪರ್ಮಿಟ್‌ ಇದೆ. ಆದರೆ ಕೆಲವು ನಿಲ್ದಾಣಗಳಲ್ಲಿ ರಿಕ್ಷಾಚಾಲಕರು ಆಟೋ ನಿಲ್ಲಿಸಲು ಅವಕಾಶ ನೀಡುತ್ತಿಲ್ಲ’ ಎಂಬ ದೂರಿಗೆ “ಈಗಾಗಲೇ ತುಂಬಿ ಹೋಗಿರುವ ರಿಕ್ಷಾ ನಿಲ್ದಾಣಗಳಲ್ಲಿ ಮಿತಿಗಿಂತ ಹೆಚ್ಚು ರಿಕ್ಷಾಗಳ ನಿಲುಗಡೆಗೆ ಅವಕಾಶ ನೀಡುತ್ತಿಲ್ಲ. ಇದರಿಂದ ಎಲ್ಲರಿಗೂ ತೊಂದರೆ. ಈ ಬಗ್ಗೆ ಆಟೋ ಯೂನಿಯನ್‌ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುವುದು ಉತ್ತಮ’ ಎಂದು ಎಸ್‌ಪಿ ಪ್ರತಿಕ್ರಿಯಿಸಿದರು. ಇದೇ ವೇಳೆ ಉಡುಪಿಯಿಂದ ಹಂಗಾರಕಟ್ಟೆಗೆ ಬಸ್‌ ಸೌಕರ್ಯ ಒದಗಿಸುವಂತೆಯೂ ಬೇಡಿಕೆ ಕೇಳಿಬಂತು. 

ಮರ ತೆರವುಗೊಳಿಸಿ
ಯಡ್ತಾಡಿ ಸೇತುವೆ ಬಳಿ ಒಣಗಿದ ಮರಗಳಿವೆ. ಅದರಿಂದಾಗಿ ಅಪಘಾತಗಳು ನಡೆಯುತ್ತಿವೆ. ಅದನ್ನು ತೆರವುಗೊಳಿಸಲು ಸ್ಥಳೀಯ ಗ್ರಾ.ಪಂ.ಗೆ ಮನವಿ ಮಾಡಾದರೂ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆಯವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಬ್ರಹ್ಮಾವರ – ಬಾರಕೂರು ರಸ್ತೆಯಲ್ಲಿ ಮತ್ತೆ ಘನವಾಹನಗಳು ಸಂಚರಿಸಲಾರಂಭಿಸಿವೆ ಎಂದು ವ್ಯಕ್ತಿಯೋರ್ವರು ದೂರಿದರು. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡುವುದಾಗಿ ಎಸ್‌ಪಿ ಭರವಸೆ ನೀಡಿದರು. ಕೂಡಲೇ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
 
ಎಸ್‌ಪಿಗೆ ಶ್ಲಾಘನೆ, ಹಿತವಚನಕ್ಕೆ ಮನವಿ
ಸಾರ್ವಜನಿಕರೊಬ್ಬರು ಕರೆ ಮಾಡಿ “ಉತ್ತಮ ಕೆಲಸಗಳನ್ನು ಮಾಡುತ್ತಿದ್ದೀರಿ. ಜಾಗೃತಿ ಕಾರ್ಯಕ್ರಮಗಳು, ಕಾರ್ಯಾಚರಣೆಗಳು ಉತ್ತಮ ರೀತಿಯಲ್ಲಿ ನಡೆಯುತ್ತಿವೆ’ ಎಂದು ಎಸ್‌ಪಿಯವರನ್ನು ಶ್ಲಾ ಸಿದರು. ಇನ್ನೋರ್ವರು “ಮಲ್ಪೆಯ ಸರಕಾರಿ ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳು ಸರಿಯಾಗಿ ವಿದ್ಯಾಭ್ಯಾಸ ಮಾಡುತ್ತಿಲ್ಲ. ಮನೆಯವರ ಮಾತೂ ಕೇಳುತ್ತಿಲ್ಲ. ನೀವು ಕಾಲೇಜಿಗೆ ಬಂದು ಮಕ್ಕಳಿಗೆ ಹಿತವಚನ ಹೇಳಬೇಕು’ ಎಂದು ಮನವಿ ಮಾಡಿದರು.

ಮಟ್ಕಾ: 51 ಮಂದಿಯ ಬಂಧನ
ಆ. 3ರಿಂದ 49 ಮಟ್ಕಾ ಪ್ರಕರಣಗಳಲ್ಲಿ 51 ಮಂದಿಯನ್ನು ಬಂಧಿಸಲಾಗಿದೆ. ಇಸ್ಪೀಟು ಜುಗಾರಿಗೆ ಸಂಬಂಧಿಸಿ 13 ಪ್ರಕರಣ ದಾಖಲಿಸಿ 90 ಮಂದಿಯನ್ನು ಬಂಧಿಸಲಾಗಿದೆ. ಅಕ್ರಮ ಮದ್ಯಕ್ಕೆ ಸಂಬಂಧಿಸಿ 3, ಕೋಟಾ³ 99, ಮದ್ಯ ಸೇವಿಸಿ ವಾಹನ ಚಾಲನೆ ವಿರುದ್ಧ 69, ಕರ್ಕಶ ಹಾರನ್‌ ವಿರುದ್ಧ 239, ವಾಹನ ಚಲಾಯಿಸುವಾಗ ಮೊಬೈಲ್‌ ಬಳಕೆಯ ವಿರುದ್ಧ 156, ಹೆಲ್ಮೆಟ್‌ ರಹಿತ ಸವಾರಿ ವಿರುದ್ಧ 1,478, ಅತೀವೇಗದ ಚಾಲನೆ ವಿರುದ್ಧ 73 ಹಾಗೂ ಇತರ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ವಿರುದ್ಧ 4, 292 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ತಿಳಿಸಿದರು. 

ಅನಧಿಕೃತ ಪಾರ್ಕಿಂಗ್‌
ಕಲ್ಸಂಕ-ಕೃಷ್ಣಮಠ ರಸ್ತೆ, ಬ್ರಹ್ಮಗಿರಿ ಸರ್ಕಲ್‌ ಸಮೀಪದ ರಸ್ತೆಗಳ ಪಕ್ಕದಲ್ಲೇ ವಾಹನಗಳ ಪಾರ್ಕಿಂಗ್‌ ಮಾಡಲಾಗುತ್ತದೆ. ಇದರಿಂದ ತೊಂದರೆಯಾಗಿದೆ ಎಂದು ವ್ಯಕ್ತಿಯೋರ್ವರು ದೂರಿ ದರು. “ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ನಗರಸಭೆ ಯವರು ಈ ಪ್ರದೇಶಗಳನ್ನು ನೋ ಪಾರ್ಕಿಂಗ್‌ ಎಂದು ಗುರುತಿಸಿ ದರೆ ಪೊಲೀಸರು ಕಾರ್ಯಾಚರಣೆ ನಡೆಸಲು ಹೆಚ್ಚು ಅನುಕೂಲ ವಾಗುತ್ತದೆ. ಈ ಬಗ್ಗೆ ನಗರ ಸಭೆಗೆ ತಿಳಿಸಲಾಗಿದೆ’ ಎಂದು ಎಸ್‌ಪಿ ಹೇಳಿದರು. ಕೃಷ್ಣ ಮಠ ಪರಿಸರದಲ್ಲಿ ಭಿಕ್ಷುಕರ ಹಾವಳಿ ಕುರಿತಾದ ದೂರಿಗೆ ಸ್ಪಂದಿಸಿದ ಎಸ್‌ಪಿ “ಈ ಬಗ್ಗೆ ಈಗಾಗಲೇ ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಲಾಗಿದೆ’ ಎಂದು ಹೇಳಿದರು.

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

7(1

Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು

4

Karkala: ಈ ರಸ್ತೆಯಲ್ಲಿ ಬಸ್‌ ತಂಗುದಾಣಗಳೇ ಇಲ್ಲ!

3-mit

Manipal MIT: ಅಂತಾರಾಷ್ಟ್ರೀಯ ಕಾರ್ಯಾಗಾರ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.