ಉಡುಪಿ: ಸರ್ವಧರ್ಮ ದೀಪಾವಳಿ ಆಚರಣೆ
Team Udayavani, Nov 9, 2018, 11:38 AM IST
ಉಡುಪಿ: ನಮ್ಮ ಪರಂಪರೆಯೇ ಸೌಹಾರ್ದದಿಂದ ಕೂಡಿದ್ದು. ಸರ್ವಧರ್ಮದವರು ಜತೆಗೂಡಿ ಹಬ್ಬಗಳನ್ನು ಆಚರಿಸುವುದು ಹೊಸತೇನಲ್ಲ. ಆದರೆ ಈ ಕಾಲಘಟ್ಟದಲ್ಲಿ ಮತ್ತೂಮ್ಮೆ ನಮ್ಮ ಪರಂಪರೆಯನ್ನು ನೆನಪು ಮಾಡಿಕೊಂಡು ಸೌಹಾರ್ದದಿಂದ ಆಚರಿಸುವಂತಾಗ ಬೇಕು ಎಂದು ಹೆಬ್ರಿ ಸರಕಾರಿ ಜೂನಿಯರ್ ಕಾಲೇಜಿನ ಪ್ರಾಧ್ಯಾಪಕಿ ಸುಮಾ ಎಸ್. ಅಭಿಪ್ರಾಯಪಟ್ಟರು.
ಗುರುವಾರ ಉಡುಪಿಯ ಶೋಕ ಮಾತಾ ಇಗರ್ಜಿ ವಠಾರದಲ್ಲಿ ಸೌಹಾರ್ದ ಸಮಿತಿ, ಕೆಥೋಲಿಕ್ ಸಭಾ ಉಡುಪಿ ಘಟಕ, ಶೋಕಮಾತಾ ಇಗರ್ಜಿ ಉಡುಪಿ, ಲಯನ್ಸ್ ಡಿಸ್ಟ್ರಿಕ್ಟ್ 317ಸಿ ಹಾಗೂ ಲಯನ್ಸ್ ಕ್ಲಬ್ ಉಡುಪಿ ಸಂಗಮ ವತಿಯಿಂದ ಜರಗಿದ ಸರ್ವಧರ್ಮ ದೀಪಾವಳಿ ಆಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಹಣತೆಯ ದೀಪ ಬೆಂಕಿಯಲ್ಲ, ಅದು ಬೆಳಕು. ಆ ದೀಪವನ್ನು ಸುಡುವುದಕ್ಕೆ ಹಚ್ಚುವುದಲ್ಲ, ಬೆಳಗುವುದಕ್ಕಾಗಿ ಹಚ್ಚುತ್ತೇವೆ. ನಮ್ಮೊಳಗೂ ಬೆಂಕಿ ಇದೆ. ಅದನ್ನು ಹಣತೆಯ ಬೆಳಕನ್ನಾಗಿಸಿ ಭಗವದ್ಭಕ್ತಿಯೊಂದಿಗೆ ಸಮರ್ಪಿಸಿ ಸಹಬಾಳ್ವೆ ನಡೆಸಬೇಕಾಗಿದೆ ಎಂದು ಸುಮಾ ಹೇಳಿದರು.
ಎಲ್ಲರ ಒಳಿತಿಗೆ ಪ್ರಾರ್ಥನೆ
ಶುಭಾಶಂಸನೆಗೈದ ರಂಗಿನಕೆರೆ ನೂರುಲ್ ಹುದಾ ಮಸೀದಿಯ ಧರ್ಮ ಗುರು ಮೌಲಾನಾ ಮಹಮ್ಮದ್ ಶರ್ವಾಣಿ ರಜ್ವಿ ಅವರು, “ಎಲ್ಲ ಧರ್ಮಗಳು ಕೂಡ ಇತರರನ್ನು ಪ್ರೀತಿಸುವುದನ್ನು ಹೇಳುತ್ತದೆಯೇ ಹೊರತು ದ್ವೇಷಿಸಲು ಹೇಳುವುದಿಲ್ಲ. ನೈಜ ಮುಸಲ್ಮಾನ ಕೂಡ ಎಲ್ಲರ ಒಳಿತಿಗಾಗಿ ಪ್ರಾರ್ಥಿಸುತ್ತಾನೆ’ ಎಂದರು. ಮಲ್ಪೆ ಯುಬಿಎಂ ಎಬಿಜರ್ ಚರ್ಚ್ ಪಾಸ್ಟರ್ ರೆ| ಸಂತೋಷ್ ಎ., ಲಯನ್ಸ್ ಜಿಲ್ಲಾ ಗವರ್ನರ್ ಡಾ| ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು. ಶೋಕಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ವಂ| ವಲೇರಿಯನ್ ಮೆಂಡೋನ್ಸ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಅಲೊನ್ಸ್ ಡಿ’ಕೋಸ್ಟಾ ನಿರ್ವಹಿಸಿದರು. ಸೌಹಾರ್ದ ಸಮಿತಿಯ ಸಂಚಾಲಕ ಮೈಕಲ್ ಡಿ’ಸೋಜಾ ವಂದಿಸಿದರು.
ಚರ್ಚ್ ವಠಾರದಲ್ಲಿ ಎತ್ತರದ ಹಣತೆಯಲ್ಲಿ ನೂರಾರು ದೀಪಗಳನ್ನು ಹಚ್ಚುವ ಮೂಲಕ ದೀಪಾ
ವಳಿ ಆಚರಿಸಲಾಯಿತು. ಗೂಡುದೀಪ ಗಳು, ದೀಪಗಳ ಸಾಲು ಚರ್ಚ್ ಆವರಣದಲ್ಲಿ ಬೆಳಕಿನ ಹಬ್ಬದ ಸಂಭ್ರಮ ಮೂಡಿಸಿತು.
ಜ್ಞಾನದತ್ತ ಒಯ್ಯುವ ಬೆಳಕು
ಅಧ್ಯಕ್ಷತೆ ವಹಿಸಿದ್ದ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ| ಜೆರಾಲ್ಡ್ ಐಸಾಕ್ ಲೋಬೋ ಮಾತನಾಡಿ, “ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ. ಅಜ್ಞಾನದ ಕತ್ತಲೆಯಿಂದ ಜ್ಞಾನದ ದಿಕ್ಕಿಗೆ ದೀಪ ನಮ್ಮನ್ನು ಕೊಂಡೊಯ್ಯುತ್ತದೆ. ಸುಖ, ಶಾಂತಿ, ನಲಿವು, ಜ್ಞಾನ, ಸೌಹಾರ್ದದ ಸಂಕೇತವಾದ ದೀಪಾವಳಿಯನ್ನು ಎಲ್ಲರೂ ಸೇರಿಕೊಂಡು ಆಚರಿಸೋಣ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.