Udupi; ಶ್ರೀಕೃಷ್ಣ ಮಾಸೋತ್ಸವ: ಸಾಂಸ್ಕೃತಿಕ ವೈಭವ
ಶಾಸ್ತ್ರೀಯ ಸಂಗೀತ, ನೃತ್ಯ ರೂಪಕ, ಅಷ್ಟೋತ್ತರ ಶತ ಕೊಳಲು ವಾದನ, ಭಜನ್ ಸಂಧ್ಯಾ, ಭರತನಾಟ್ಯ, ಕಥಕ್ ನೃತ್ಯ
Team Udayavani, Aug 23, 2024, 8:53 PM IST
ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಆಯೋಜಿಸಲಾದ ಶ್ರೀಕೃಷ್ಣ ಜನ್ಮಾಷ್ಟಮಿ ಮಾಸೋತ್ಸವ ಪ್ರಯುಕ್ತ ರಾಜಾಂಗಣದಲ್ಲಿ ಸಂಜೆ 7ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
ಆ. 24ರಂದು ಬೆಂಗಳೂರು ರುದ್ರಪಟ್ಣಂ ಸಹೋದರರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಆ. 25ರಂದು ಮಂಗಳೂರು ನಾದ ನೃತ್ಯ ಸ್ಕೂಲ್ ಆಫ್ ಡ್ಯಾನ್ಸ್ ಕಲ್ಚರಲ್ ಟ್ರಸ್ಟ್ ವತಿಯಿಂದ ಬಣ್ಣಗಳ ಭಾವಲೋಕ “ಮೀನಾಕ್ಷಿ ಕಲ್ಯಾಣ’ ನೃತ್ಯ ರೂಪಕ, ಆ. 26ರಂದು ವಿ| ರಾಜೇಶ್ ಬಾಗ್ಲೋಡಿ ಮತ್ತು ಶಿಷ್ಯರಿಂದ ಅಷ್ಟೋತ್ತರ ಶತ ಕೊಳಲು ವಾದನ, ಆ. 29ರಂದು ಮೂಲ್ಕಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದವರಿಂದ ಭಜನ್ ಸಂಧ್ಯಾ ನಡೆಯಲಿದೆ.
ಆ. 30ರಂದು ಉಡುಪಿಯ ರಾಧಾಕೃಷ್ಣ ನೃತ್ಯನಿಕೇತನದವರಿಂದ ಭರತನಾಟ್ಯ, ಆ. 31ರಂದು ಉಡುಪಿಯ ರಾಗಧನ ಸಂಸ್ಥೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ (ಬೆಂಗಳೂರಿನ ಈಶ್ವರ್ ಐಯ್ಯರ್ ಹಾಡುಗಾರಿಕೆಗೆ ವಯೋಲಿನ್ ವಾದನದಲ್ಲಿ ಪೃಥ್ವಿ ಭಾಸ್ಕರ್ ಮೈಸೂರು, ಮೃದಂಗದಲ್ಲಿ ಪವನ ಮಾಧವ ಮಾಸೂರು ಬೆಂಗಳೂರು ಅವರು ಸಾಥ್ ನೀಡುವರು.
ಸೆ. 1ರ ಬೆಳಗ್ಗೆ 10ರಿಂದ ವಿ| ಸಾದ್ವಿನಿ ಕೊಪ್ಪ ಅವರಿಂದ ಶಾಸ್ತ್ರೀಯ ಸಂಗೀತ, ಮಧ್ಯಾಹ್ನ 2ರಿಂದ ದಿವ್ಯಾ ಭಟ್ (ಯು.ಕೆ.) ಅವರಿಂದ ಕಥಕ್ ನೃತ್ಯ, ಸಂಜೆ 7ರಿಂದ ವಿ| ದಿವ್ಯಾ ಸುರೇಶ್ (ಸ್ವೀಡನ್) ಅವರಿಂದ ಭರತನಾಟ್ಯ ನೆರವೇರಲಿದೆ ಎಂದು ಶ್ರೀ ಮಠದ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.