Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ
ಸಂಭ್ರಮದಿಂದ ನೆರವೇರಿದ ತೆಪ್ಪೋತ್ಸವ, ಎರಡು ರಥಗಳ ಉತ್ಸವ
Team Udayavani, Jan 10, 2025, 1:20 AM IST
ಉಡುಪಿ ಶ್ರೀಕೃಷ್ಣಮಠದಲ್ಲಿ ಗುರುವಾರ ವಾರ್ಷಿಕ ಸಪ್ತೋತ್ಸವ ಆರಂಭಗೊಂಡಿತು. (ಚಿತ್ರ: ಆಸ್ಟ್ರೋ ಮೋಹನ್)
ಉಡುಪಿ: ಶ್ರೀಕೃಷ್ಣಮಠದಲ್ಲಿ ಗುರುವಾರ ವಾರ್ಷಿಕ ಸಪ್ತೋತ್ಸವವು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಆರಂಭಗೊಂಡಿತು.
ಸಂಜೆಯ ಚಾಮರ ಸೇವೆ ಪೂಜೆಯ ಬಳಿಕ ಮೊದಲು ತೆಪ್ಪೋತ್ಸವ ನಡೆಯಿತು. ಈ ಬಾರಿ ತೆಪ್ಪವನ್ನು ಪಾರ್ಥಸಾರಥಿ ರೂಪದಲ್ಲಿ ಅಲಂಕರಿಸಲಾಗಿತ್ತು. ತೆಪ್ಪೋತ್ಸವದ ಅನಂತರ ಎರಡು ರಥಗಳ ಉತ್ಸವ ರಥಬೀದಿಯಲ್ಲಿ ನಡೆಯಿತು. ಒಂದು ರಥದಲ್ಲಿ ಶ್ರೀಕೃಷ್ಣ – ಮುಖ್ಯಪ್ರಾಣ, ಇನ್ನೊಂದು ರಥದಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನಗಳ ಉತ್ಸವ ಮೂರ್ತಿಯನ್ನು ಇರಿಸಿ ಪೂಜಿಸಲಾಯಿತು. ಪುತ್ತಿಗೆ ಕಿರಿಯ ಸ್ವಾಮೀಜಿ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಪಾಲ್ಗೊಂಡರು.
ಇದಕ್ಕೂ ಮುನ್ನ ಕನಕ ಗೋಪುರದ ಎದುರು ಕುಣಿತದ ಭಜನೆಯನ್ನು ಪರ್ಯಾಯ ಶ್ರೀಗಳು ಉದ್ಘಾಟಿಸಿದರು. ಉತ್ಸವ ಮುಂದು ವರಿಯುತ್ತಿದ್ದಂತೆ ಭಜನ ತಂಡಗಳು ಆಕರ್ಷಕವಾಗಿ ಕುಣಿತದ ಭಜನೆಯನ್ನು ನಡೆಸಿಕೊಟ್ಟರು. ಇಡೀ ರಥಬೀದಿ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದೆ.
ಜ. 13ರ ವರೆಗೆ ನಿತ್ಯ ಸಪ್ತೋತ್ಸವ ನಡೆಯಲಿದ್ದು ಜ. 14ರಂದು ಮಕರ ಸಂಕ್ರಾಂತಿ ಉತ್ಸವ, ಜ. 15ರಂದು ಹಗಲು ಉತ್ಸವ ಚೂರ್ಣೋತ್ಸವ ಜರಗಲಿದೆ.
ಸಂಕ್ರಾಂತಿಗೆ ವಿದೇಶಿ ಗಣ್ಯರು
ಮಕರಸಂಕ್ರಾಂತಿ ಉತ್ಸವದಲ್ಲಿ ಆಸ್ಟ್ರೇಲಿಯಾದ ಸಂಸದ ಜಾನ್ ಮುಲಾಯ್ ಮತ್ತು ಮಥುರಾದ ಗೌಡೀಯ ಮಾಧ್ವಮಠದ ಶ್ರೀಪುಂಡರೀಕ ಗೋಸ್ವಾಮಿಯವರು ಭಾಗವಹಿಸುವರು. ಅಂದು ಬ್ರಹ್ಮರಥ ಸಹಿತ ಮೂರು ತೇರುಗಳ ಉತ್ಸವ ನಡೆಯಲಿದೆ. ಮಕರಸಂಕ್ರಾಂತಿಯಂದೇ ಬ್ರಹ್ಮರಥದ ಉತ್ಸವ ಆರಂಭವಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.