ಉಡುಪಿ ಶ್ರೀಕೃಷ್ಣ ಮಠ: ಸ್ವರ್ಣಗೋಪುರ ದರ್ಶನಕ್ಕೆ ಲಿಫ್ಟ್ ವ್ಯವಸ್ಥೆ
Team Udayavani, Oct 15, 2019, 5:55 AM IST
ಉಡುಪಿ: ಸ್ವರ್ಣಗೋಪುರ ದರ್ಶನಕ್ಕೆ ಲಿಫ್ಟ್ ಅಳವಡಿಸಲು ಕಾಮಗಾರಿ ನಡೆಯುತ್ತಿದೆ.
ಉಡುಪಿ: ಶ್ರೀಕೃಷ್ಣ ಮಠದ ಗರ್ಭಗುಡಿಗೆ ನಿರ್ಮಿಸಲಾಗಿರುವ ಸ್ವರ್ಣಗೋಪುರವನ್ನು ಭಕ್ತರು ದರ್ಶನ ಮಾಡುವುದಕ್ಕಾಗಿ ಲಿಫ್ಟ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.
ದೇವರ ದರ್ಶನ ಮಾಡಿ ಹೊರಬರುವ ಸ್ಥಳದಲ್ಲಿ ಇದಕ್ಕಾಗಿ ಕಾಮಗಾರಿ ನಡೆಯುತ್ತಿದೆ. ಇದು ಭೋಜನ ಶಾಲೆಗೆ ಪಕ್ಕಕ್ಕಿರುವ ಒಳಕೊಠಾರದಲ್ಲಿ ನಿರ್ಮಾಣವಾಗುತ್ತಿದೆ. ಇದರ ಇನ್ನೊಂದು ಬದಿ ಮಧ್ವಸರೋವರದ ಎಡಭಾಗದ ಕೆಳಗಿನ ಭಾಗವಿದೆ. ಕೆಳಗೆ ಸರೋವರದಲ್ಲಿ ಸ್ನಾನ ಮಾಡುವ ಸ್ತ್ರೀಯರಿಗೆ ಬಟ್ಟೆ ಬದಲಾಯಿಸುವ ಒಂದು ಕೋಣೆಯನ್ನು ನಿರ್ಮಿಸಲಾಗುತ್ತದೆ. ಅದರ ಮೇಲಿನಿಂದ ಎರಡು ಸ್ಲಾಬ್ ನಿರ್ಮಾಣ ಆಗುತ್ತದೆ. ಲಿಫ್ಟ್ ಅಳವಡಿಸಿದ ಬಳಿಕ ಮೇಲೆ ಹೋಗಿ ಗೋಪುರವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.
ಪ್ರಸ್ತುತ ಕೃಷ್ಣ ಮಠದ ಒಳಗಿನ ಸುತ್ತಿನಲ್ಲಿ ಗೋಪುರ ಸರಿಯಾಗಿ ಕಾಣುತ್ತಿಲ್ಲ. ಒಳಗಿನ ಸುತ್ತಿನಲ್ಲಿ ಮೇಲೆ ಹೋಗಿ ನೋಡಲು ಸಾಧ್ಯವಿದೆ. ಆದರೆ ಎಲ್ಲರಿಗೂ ಇದು ಕಷ್ಟಸಾಧ್ಯ. ಹೀಗಾಗಿ ಹೊರಭಾಗದಲ್ಲಿ ಲಿಫ್ಟ್ ನಲ್ಲಿ ಹೋಗಿ ನೋಡಿ ಅಲ್ಲಿಂದ ಎರಡು ಕಡೆ ಹೊರಹೋಗಲು ಅವಕಾಶ ನೀಡಲಾಗುತ್ತದೆ. ಒಂದು ಕೃಷ್ಣ ಮಠದ ಹೊರಗೆ ರಥಬೀದಿಗೆ ಹೋಗಲು, ಇನ್ನೊಂದು ಭೋಜನಶಾಲೆಗೆ ಹೋಗಲು ಅನುಕೂಲವಾಗುವಂತೆ ನಿರ್ಮಿಸಲಾಗುತ್ತದೆ.
ಲಿಫ್ಟ್ ವೆಚ್ಚ ಹೊರತುಪಡಿಸಿ ಒಟ್ಟು 80 ಲ.ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ. ಜ. 17ರಂದು ಪಲಿಮಾರು ಮಠದ ಪರ್ಯಾಯ ಅವಧಿ ಮುಗಿಯುತ್ತಿದ್ದು, ಅಷ್ಟರೊಳಗೆ ಕಾಮಗಾರಿಗಳನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ.
ಮಧ್ವಸರೋವರದಲ್ಲಿ ಸ್ನಾನ ಮಾಡಿದ ಮಹಿಳೆಯರಿಗೆ ಬಟ್ಟೆ ಬದಲಾಯಿಸಲು ಒಂದು ಸುಸಜ್ಜಿತ ಕೋಣೆಯನ್ನು ನಿರ್ಮಿಸುವುದರ ಜತೆಗೆ ಸ್ವರ್ಣಗೋಪುರ ವೀಕ್ಷಿಸಲು ಅನುಕೂಲವಾಗುವಂತೆ ಲಿಫ್ಟ್ ಅಳವಡಿಸಲಾ ಗುವುದು. ಇದನ್ನು ಪರ್ಯಾಯದ ಅವಧಿಯೊಳಗೆ ಮುಕ್ತಾಯಗೊಳಿಸಲು ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ನಿರ್ಧರಿಸಿದ್ದಾರೆ.
– ಪ್ರಹ್ಲಾದ ರಾವ್ ಆಡಳಿತಾಧಿಕಾರಿ, ಪರ್ಯಾಯ ಶ್ರೀ ಪಲಿಮಾರು ಮಠ, ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.