ಶ್ರೀಕೃಷ್ಣ ಮಠ: ಬ್ರಹ್ಮಕಲಶೋತ್ಸವ
Team Udayavani, May 19, 2017, 2:40 PM IST
ಉಡುಪಿ: ಶ್ರೀಕೃಷ್ಣ ಮಠದ ಸುತ್ತುಪೌಳಿಯನ್ನು ನವೀಕರಿಸಿದ ಅಂಗವಾಗಿ ಗುರುವಾರ ಬೆಳಗ್ಗೆ ಸಡಗರದ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿತು.
ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಕಲಶಪೂಜೆ, ಆವಾಹನಾದಿ ಪೂಜೆಗಳನ್ನು ನಡೆಸಿ ಅಭಿಷೇಕ ಮಾಡಿದರು.
ಬೆಳಗ್ಗೆ 5 ಗಂಟೆಯೊಳಗೆ ಮಠದ ಸಿಬಂದಿಗಳು ಕಲಶಧಿಗಳಲ್ಲಿ ನೀರನ್ನು ಮಧ್ವಸರೋವರದಿಂದ ತಂದಿರಿಸಿದರೆ ಬಳಿಕ ಸುಮಾರು 8.30ರ ವರೆಗೆ ಕಲಶಪೂಜೆ, ದೇವತೆಗಳ ಆವಾಹನೆ, ಅಭಿಷೇಕ ನಡೆಸಲಾಯಿತು. ಬಣ್ಣಬಣ್ಣದ ಮಂಡಲಗಳಿಲ್ಲದೆ ಗೋಮಯ ಉದಕದಿಂದ ಮಂಡಲವನ್ನು ರಚಿಸಿರುವುದು ವಿಶೇಷವಾಗಿತ್ತು. ಪೂಜೆಯಿಂದ ಹಿಡಿದು ಅಭಿಷೇಕದವರೆಗಿನ ಎಲ್ಲ ಪ್ರಕ್ರಿಯೆಗಳನ್ನು ಸ್ವಾಮೀಜಿಯವರು ನೆರವೇರಿಸಿದರು. ಸಾವಿರ ಇತರ ಕಲಶವಾದರೆ, ಒಂದು ಪ್ರಧಾನ ಕಲಶವಿತ್ತು. ಇದಲ್ಲದೆ ಕಷಾಯ, ಪಂಚಗವ್ಯ, ಪಂಚಾಮೃತ, ಗಂಧೋದಕ ಮತ್ತು ಕೇಶವಾದಿ ದ್ವಾದಶನಾಮಗಳಿಗೆ ತಕ್ಕಂತೆ ಕುಂಕುಮ, ಹರಿದ್ರೋದಕ, ಶೀತೋದಕ ಮೊದಲಾದ ಸುಮಾರು 20 ಬಗೆಯ ಇತರ ಕಲಶಗಳಿದ್ದವು.
ಜಾಗದ ಕೊರತೆಯಿಂದ ಹೊರ ಭಾಗಗಳಲ್ಲಿ ವೇದ,ಭಾಗವತ, ಗೀತೆ ಇತ್ಯಾದಿಗಳ ಪಾರಾಯಣ ನಡೆಯಿತು ಮತ್ತು ಸಾರ್ವಜನಿಕರಿಗೆ ಇದನ್ನು ನೋಡಲು ಟಿವಿ ವ್ಯವಸ್ಥೆ ಮಾಡಲಾಗಿತ್ತು. ಕೊನೆಯ ಪ್ರಧಾನ ಕಲಶದ ಅಭಿಷೇಕವನ್ನು ಪೇಜಾವರ ಶ್ರೀಗಳು ನಡೆಸಿ ಬಳಿಕ ಮಹಾಪೂಜೆ ನಡೆಸಿದರು. ಹಿಂದಿನ ಪರ್ಯಾಯದ ಕೊನೆಯ ಅವಧಿಯಲ್ಲಿ ನಡೆಸಿದ ಬ್ರಹ್ಮಕಲಶೋತ್ಸವದಲ್ಲಿ ದೇವತೆಗಳ ವಿವರಣೆಗಳನ್ನು (ಅನುಕ್ರಮಣಿಕೆ) ರಾಜಪುರೋಹಿತ ಚೆನ್ನೈಯ ಮಾಧವಾಚಾರ್ಯರು ನೀಡಿದ್ದರೆ, ಈ ಬಾರಿ ಅವರ ಶಿಷ್ಯ ಚೆನ್ನೈಯ ವಿಷ್ಣುಮೂರ್ತಿ ಆಚಾರ್ಯ ಅವರು ನಡೆಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.