ಶ್ರೀ ಕೃಷ್ಣಮಠ: ಇಂದಿನಿಂದ ಶ್ರೀ ರಾಘವೇಂದ್ರ ಸಪ್ತಾಹ
Team Udayavani, Mar 7, 2019, 12:30 AM IST
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಮಾ. 7ರಿಂದ 13ರ ವರೆಗೆ 26ನೇ ವರ್ಷದ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಪರ್ಯಾಯ ಶ್ರೀ ಪಲಿಮಾರು ಶ್ರೀಪಾದರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿದಿನ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಮಾ. 11ಕ್ಕೆ ಶ್ರೀನಿವಾಸ ಕಲ್ಯಾಣೋತ್ಸವ, ಮಾ. 13ಕ್ಕೆ ಗುರುರಾಜರ ಜನ್ಮದಿನೋತ್ಸವ ಜರಗಲಿದೆ. ಸಮಾರೋಪ ಸಮಾರಂಭದಲ್ಲಿ ಮಂತ್ರಾಲಯದ ಅರ್ಚಕ ಪರಿಮಳಾಚಾರ್ಯ ಅವರಿಗೆ ಪಲಿಮಾರು ಮಠದ ವತಿಯಿಂದ “ಶ್ರೀ ರಾಜರಾಜೇಶ್ವರ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದು ಶ್ರೀಗಳು ತಿಳಿಸಿದರು.
ಮಂತ್ರಾಲಯ ಶ್ರೀಗಳಿಂದ ಉದ್ಘಾಟನೆ ಮಂತ್ರಾಲಯ ರಾಘವೇಂದ್ರ ಮಠದ ಅರ್ಚಕ ಪರಿಮಳಾಚಾರ್ಯ ಮಾತನಾಡಿ, ಮಾ. 7ರಂದು ಸಂಜೆ 4.30ಕ್ಕೆ ಮಂತ್ರಾಲಯ ರಾಘವೇಂದ್ರ ಮಠದ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಪಲಿಮಾರು ಶ್ರೀಪಾದರು ಅಧ್ಯಕ್ಷತೆ ವಹಿಸಲಿದ್ದಾರೆ. ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ವಿಶೇಷಾಧಿಕಾರಿ ಪಿ. ಆನಂದ ತೀರ್ಥಾಚಾರ್ಯ, ಪಲಿಮಾರು ಮಠದ ದಿವಾನ್ ಶಿಬರೂರು ವೇದ ವ್ಯಾಸ ತಂತ್ರಿ, ಆದ್ಯ ಕೇಶವಾಚಾರ್ಯ ಚಿಂತರೇವಲ ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಗಳು ತಣ್ತೀಸಂಶೋಧನ ಸಂಸತ್ ನಿರ್ದೇಶಕ ಡಾ| ವಂಶೀಕೃಷ್ಣಾಚಾರ್ಯ ಮಾತನಾಡಿ, ಮಾ.10ರಂದು ಬೆಳಗ್ಗೆ 9ಕ್ಕೆ ರಾಜಾಂಗಣದಲ್ಲಿ ಪೇಜಾವರ ಕಿರಿಯ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಯುವಗೋಷ್ಠಿ ನಡೆಯಲಿದೆ. ಧಾರ್ಮಿಕ ವಿಚಾರಗಳ ಬಗ್ಗೆ ಪ್ರಶ್ನೋತ್ತರ ಮತ್ತು ಸಂವಾದದಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಮಾ. 12ಕ್ಕೆ ಬೆಳಗ್ಗೆ 9ಕ್ಕೆ ಮಹಿಳಾಗೋಷ್ಠಿ ನಡೆಯಲಿದ್ದು, “ದೀರ್ಘ ದಾಂಪತ್ಯದಲ್ಲಿ ಮಹಿಳೆಯ ಪಾತ್ರ’ದ ಕುರಿತು ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲಿದ್ದಾರೆ. ಬಳಿಕ ಸಂವಾದ ನಡೆಯಲಿದೆ ಎಂದರು.
ಶೋಭಾಯಾತ್ರೆ
ಮಾ. 10ರಂದು ಸಂಜೆ 4ಕ್ಕೆ ಜೋಡುಕಟ್ಟೆಯಿಂದ ಕೃಷ್ಣ ಮಠದ ವರೆಗೆ ಗುರುರಾಜರ ವೃಂದಾವನದ ಶೋಭಾಯಾತ್ರೆ ನಡೆಯಲಿದೆ. ಜಿಲ್ಲೆಯ ಎಲ್ಲ ಭಜನ ಮಂಡಳಿಗಳಿಗೆ ಆಹ್ವಾನ ನೀಡಲಾಗಿದ್ದು, 500 ಮಂದಿ ಮೆರವಣಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಉಸ್ತುವಾರಿ ಮಟ್ಟು ಲಕ್ಷ್ಮೀನಾರಾಯಣ ರಾವ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.