ಜೇನುಹುಳದಂತಿರಬೇಕೋ? ನೊಣದಂತಿರಬೇಕೋ?
"ವಿಶ್ವಾರ್ಪಣಮ್' ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಡಾ| ಗುರುರಾಜ ಕರ್ಜಗಿ
Team Udayavani, Dec 23, 2021, 5:50 AM IST
ಉಡುಪಿ: ಬದುಕಿದರೆ ಜೇನು ಹುಳುವಿನಂತೆ ಬದುಕಬೇಕು, ನೊಣಗಳಂತೆ ಬದುಕಬಾರದು. ಹೇಗೆ ಬದುಕಬೇಕು ಎಂಬುದನ್ನು ನಾವೇ ನಿರ್ಧರಿಸಬೇಕಾಗಿದೆ ಎಂದು ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಹೇಳಿದರು.
ಶ್ರೀಕೃಷ್ಣ ಮಠ ಪರ್ಯಾಯ ಅದಮಾರು ಮಠದ ವತಿಯಿಂದ ಬುಧವಾರ ರಾಜಾಂಗಣದಲ್ಲಿ “ವಿಶ್ವಾರ್ಪಣಮ್’ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
2,000 ಹೂವುಗಳನ್ನು ಸಂಪರ್ಕಿಸಿ
ಒಂದು ಚಮಚ ಜೇನುತುಪ್ಪ ಉತ್ಪಾದನೆಯಾಗುತ್ತದೆ. ಜೇನುಹುಳು ಹೂವಿನ ಬಣ್ಣ, ರೂಪ, ಕೋಮಲತೆ ಯನ್ನು ಮುಟ್ಟುವುದಿಲ್ಲ, ಕೇವಲ ಒಂದು ಹನಿರಸ ವನ್ನು ಪಡೆಯುತ್ತದೆ. ಒಂದು ಪ್ರಾಣಿ ಸತ್ತು ಬಿದ್ದಿದ್ದರೆ ಜೇನು ಹುಳು ಅಲ್ಲಿಗೆ ಹೋಗುವುದಿಲ್ಲ. ನೊಣಗಳು ಮಾತ್ರ ಹೂವಿನ ಹತ್ತಿರ ಹೋಗದೆ ಸತ್ತ ಪ್ರಾಣಿಯ ಬಳಿ ಹೋಗುತ್ತವೆ. ಒಳ್ಳೆಯದನ್ನು ಪಡೆಯುವ ಗುಣ ಇರಬೇಕು. ಇದು ಮತಗಳಿಗಾಗಲೀ, ಮಾರುಕಟ್ಟೆಯ ನಾನಾ ಬಗೆಯ ತರಕಾರಿ ಗಾಗಲೀ ಅನ್ವಯ. ಒಳ್ಳೆಯ ಸ್ನೇಹಿತರು, ಗ್ರಂಥಗಳನ್ನು ಪಡೆದುಕೊಳ್ಳಿ. ನಿನ್ನ ಜೀವ ಸ್ವಂತಧ್ದೋ ಬಾಡಿಗೆ ಯಧ್ದೋ? ನಿಮ್ಮ ಮನೆ ನಿರ್ಮಿಸುವಾಗ ಮಾಡುವ ಕಾಳಜಿ ಸ್ವಂತಕ್ಕೆ ಅನ್ವಯಿಸಬೇಡವೇ ಎಂದು ತಮ್ಮ ಅಜ್ಜ ಹೇಳಿದ ಮಾತನ್ನು ಕರ್ಜಗಿ ಉಲ್ಲೇಖಿಸಿದರು.
ಶಿಲೆ ಒಂದು ಪ್ರಕೃತಿಯಾಗಿದೆ. ಶಿಲ್ಪಿಯೊಬ್ಬ ಸಿಕ್ಕಿ ಅದು ವಿಗ್ರಹವಾಗಿ ಸಂಸ್ಕೃತಿಯಾಯಿತು. ಅಕ್ಕಿ ಪ್ರಕೃತಿ ಅನ್ನ ಸಂಸ್ಕೃತಿ, ಕೈ ಪ್ರಕೃತಿ ಚಿತ್ರ ಸಂಸ್ಕೃತಿ, ಕಾಲು ಪ್ರಕೃತಿ ನೃತ್ಯ ಸಂಸ್ಕೃತಿ. ಮಗುವೊಂದು ಪ್ರಕೃತಿ, ಅದನ್ನು ಸುಸಂಸ್ಕೃತನನ್ನಾಗಿ ಮಾಡುವುದು ಶಿಕ್ಷಣ. ಇದು ಪದವಿಯಲ್ಲ. ಮನೆಯಲ್ಲಿ ಸಂಸ್ಕೃತಿ ಇಲ್ಲವಾ ದರೆ ಬೇರೆಡೆ ಸಿಗುವುದೆ? ನಾವು ನಡೆದಂತೆ ಮಕ್ಕಳು ನಡೆಯುತ್ತಾರೆ ವಿನಾ ಹೇಳಿದಂತೆ, ಬರೆದಂತೆ ನಡೆಯುವುದಿಲ್ಲ ಎಂಬ ಮಾತು ನೆನಪಿನಲ್ಲಿಟ್ಟುಕೊಳ್ಳಿ ಎಂದು ಕರ್ಜಗಿ ಕಿವಿಮಾತು ನುಡಿದರು.
ಇದನ್ನೂ ಓದಿ:ಡೀಮ್ಡ್ ಫಾರೆಸ್ಟ್ ಅವೈಜ್ಞಾನಿಕ : ಆರ್. ಅಶೋಕ್
ಅದಮಾರು ಮಠದ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿದ್ದರು. ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಮ್ಮಾನ
ಬೆಳಗಾವಿಯ ವಿದ್ವಾಂಸ ಗುರು ರಾಜ ಜೋಶಿ, ದಂತ ವೈದ್ಯ ಡಾ|ವಿಜಯೇಂದ್ರ ವಸಂತ್, ಪಿಪಿಸಿ ನಿವೃತ್ತ ಪ್ರಾಂಶುಪಾಲ, ಇತಿಹಾಸ ತಜ್ಞ ಡಾ| ಜಗದೀಶ ಶೆಟ್ಟಿ, ಉಡುಪಿ ಡಾ| ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಶಶಿಕಿರಣ್ ಉಮಾ ಕಾಂತ್ ಅವರನ್ನು ಸಮ್ಮಾನಿಸಲಾಯಿತು. ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.