Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

 ಆಸ್ಟ್ರೇಲಿಯಾದ ಸಂಸದ ಜಾನ್‌, ಮಥುರಾದ ಗೋಸ್ವಾಮಿ ಭಾಗಿ

Team Udayavani, Jan 9, 2025, 6:07 AM IST

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಜ. 9ರಿಂದ 15ರ ವರೆಗೆ ನಡೆಯಲಿರುವ ವಾರ್ಷಿಕ ಸಪ್ತೋತ್ಸವ ದಲ್ಲಿ ಆಸ್ಟ್ರೇಲಿ ಯಾದ ವಿಕ್ಟೋರಿಯಾ ರಾಜ್ಯದ ಸಂಸದ ಜಾನ್‌ ಮುಲಾಯ್‌ ಹಾಗೂ ಭಾಗವತ ಪ್ರವಚನಗಳಿಂದ ಖ್ಯಾತರಾದ ಮಥುರಾದ ಗೌಡೀಯ ಮಾಧ್ವಮಠದ ಮಹಾಸ್ವಾಮಿ ಶ್ರೀ ಪುಂಡರೀಕ ಗೋಸ್ವಾಮಿ ಅವರು ಭಾಗವಹಿಸಲಿದ್ದಾರೆ.ಇವರಿಬ್ಬರೂ ಜ. 14ರಂದು ನಡೆಯುವ ಮಕರ ಸಂಕ್ರಮಣ ಹಾಗೂ ಮೂರು ತೇರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಜ. 15ರಂದು ಚೂರ್ಣೋತ್ಸವ (ಹಗಲು ತೇರು) ಜರಗಲಿದೆ.

ಜ.9ರಿಂದ 13ರ ವರೆಗೆ ವಿಶೇಷ ಕಾರ್ಯಕ್ರಮಗಳು
ಜ. 9ರಂದು ಪ್ರಸಿದ್ಧ ಸಂಗೀತ ಕಲಾಕಾರ ಸುಧಾಮ ದಾಂಡೇಲಿ ಅವರಿಂದ ಸಂಗೀತ ಕಾರ್ಯಕ್ರಮ, ಜ. 11ರ ಬೆಳಗ್ಗೆ 10ಕ್ಕೆ ರಾಜಾಂಗಣದಲ್ಲಿ ಸಾವಯವ ಸಿರಿಧಾನ್ಯ ಹಬ್ಬ, ರಾತ್ರಿ 7 ಯಕ್ಷ ನಂದನ ಮಂಗಳೂರು ಇವರಿಂದ ಆಂಗ್ಲ ಭಾಷಾ ಯಕ್ಷಗಾನ “ಸೀತಾಪಹರಣ’ ಹಾಗೂ “ಜಟಾಯು ಮೋಕ್ಷ’ ಪ್ರದರ್ಶನಗೊಳ್ಳಲಿದೆ. ಮಧ್ವಮಂಟಪದಲ್ಲಿ ಬೆಳಗ್ಗೆ 10ಕ್ಕೆ ಚಂದ್ರಕಲಾ ಶರ್ಮ ಹಾಗೂ ಸುಜಲಾ ಎನ್‌. ಭಟ್‌ ಅವರಿಂದ ಗಮಕ ವ್ಯಾಖ್ಯಾನ, ತುಳಸಿರಾಮಾಯಣ ಚೂಡಾಮಣಿ ಪ್ರಸಂಗ, ಸಂಜೆ 4ಕ್ಕೆ ಆರ್‌.ಪಿ. ಪ್ರಶಾಂತ್‌ ಮತ್ತು ಆರ್‌.ಪಿ. ಪ್ರಮೋದ್‌ ಅವರಿಂದ ವೀಣಾ ವಾದನ ಜರಗಲಿದೆ.

ಜ. 12ರಂದು ರಥಬೀದಿಯ ಸುತ್ತ 24 ತಂಡಗಳಿಂದ ವಿಶೇಷ ಕುಣಿತ ಭಜನೆಯ “ವೈಭವೋತ್ಸವ’ ನೆರವೇರಲಿದೆ. ಅಹಲ್ಯಾಬಾೖ ಹೋಳ್ಕರ್‌ ಅವರ ಜನ್ಮತ್ರಿಶತಾಬ್ದಿ ಪ್ರಯುಕ್ತ ಬೆಳಗ್ಗೆ 10ರಿಂದ ಸಂಜೆ 4ರ ತನಕ ಚಿತ್ರಕಲೆ, ಪ್ರಬಂಧ, ವೇಷಭೂಷಣ ಸ್ಪರ್ಧೆಗಳು, ವಿವಿಧ ವಿಚಾರಗೋಷ್ಠಿಗಳು, ಅನಂತರ ಪರ್ಯಾಯ ಶ್ರೀಪಾದರು ಅನುಗ್ರಹ ಸಂದೇಶ ನೀಡುವರು.

ಪಂಚವಾದ್ಯಂ ರಜತಪೀಠಪುರಂ ಅವರ 6ನೇ ವಾರ್ಷಿಕೋತ್ಸವ ಪ್ರಯುಕ್ತ ಜ. 12ರ ಸಂಜೆ 4ರಿಂದ ರಾಜಾಂಗಣದಲ್ಲಿ ಚಿರಕ್ಕಲ್‌ ನಿಧೀಶ್‌ ಮತ್ತು ತಂಡದವರಿಂದ ತಾಯಂಬಕ, 6ರಿಂದ ಕೇರಳದ ಪ್ರಸಿದ್ಧ ವಟ್ಟಪಾಲಂ ಹರಿ ಮತ್ತು ತಂಡದವರಿಂದ ಪಂಚವಾದ್ಯಂ ನಡೆಯಲಿದೆ. ಜ. 12ರ ಬೆಳಗ್ಗೆ 10ರಿಂದ 12ರ ತನಕ ಮಧ್ವ ಮಂಟಪದಲ್ಲಿ ಭೀಮಾಶಂಕರ್‌ ಮೈಸೂರು ಅವರಿಂದ ತಬಲಾ ಮತ್ತು ಹಾರ್ಮೋನಿಯಂ ಜುಗಲ್‌ಬಂದಿ, ಸಂಜೆ 4ರಿಂದ ಗೋವರ್ಧನ ಸ್ಕೂಲ್‌ ಆಫ್ ಮ್ಯೂಸಿಕ್‌ನ 10 ಮಂದಿ ತಂಡದಿಂದ ವಿಶೇಷ ಸಂಗೀತ ಕಛೇರಿ, ರಾಜಾಂಗಣದಲ್ಲಿ ರಾಮಮೂರ್ತಿ ತಂಡದವರಿಂದ ನೃತ್ಯ ಸಂಕ್ರಮಣ ವಿಶಿಷ್ಟ ಪ್ರಯೋಗ ನೆರ ವೇರಲಿದೆ.

ಜ. 13ರಂದು ಸಿಗ್ದಕೃಷ್ಣ ಅವರಿಂದ ಭರತನಾಟ್ಯ, ಜ. 14ರಂದು ಪ್ರಸ್ತುತಿ ಗ್ರೂಪ್‌ ಸಹನಂ ಟ್ರಸ್ಟ್‌ ವತಿಯಿಂದ ಸಂಗೀತ ಮತ್ತು ಭರತನಾಟ್ಯ, ಜ. 15ರಂದು ಶಾಂಭವಿ ನೃತ್ಯ ನಿಕೇತನ ಕಾಪು ಅವರಿಂದ “ಶ್ರೀಕೃಷ್ಣಾರ್ಪಣ ಮಸ್ತು’ ಭರತನಾಟ್ಯ ನಡೆಯಲಿದೆ ಎಂದು ಪರ್ಯಾಯ ಶ್ರೀ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಶರಣಾದ ಆರು ನಕ್ಸಲರು

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

MOsale

Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್‌ ಜಾಮ್‌

8

Padubidri: ಮೈದಾನದ ಅಂಚಿನಲ್ಲಿ ಚರಂಡಿ ನಿರ್ಮಾಣ; ಕ್ರೀಡಾಪ್ರೇಮಿಗಳ ಆರೋಪ

7(1

Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ

5(1

Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

Puttur: ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

1-naxal

NIA ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಶರಣಾದ ಆರು ನಕ್ಸಲರು

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.