ಶ್ರೀಕೃಷ್ಣ ಸುವರ್ಣ ಗೋಪುರ ಸಮರ್ಪಣೋತ್ಸವ
ಮೇ 31ರಿಂದ ಜೂ. 10: ಉಡುಪಿಯಲ್ಲಿ
Team Udayavani, Apr 25, 2019, 6:00 AM IST
ಉಡುಪಿ: ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಸಂಕಲ್ಪಿಸಿರುವ ಉಡುಪಿ ಶ್ರೀಕೃಷ್ಣ ದೇವರಿಗೆ ಸುವರ್ಣ ಗೋಪುರದ ಶಿಖರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಸಮಾರಂಭವು ಮೇ 31ರಿಂದ ಜೂ. 10ರ ತನಕ ಜರಗಲಿದೆ.
ಭಕ್ತರ ಸಹಕಾರದಿಂದ 100 ಕೆಜಿಗೂ ಮಿಕ್ಕಿ ಸುವರ್ಣ, 800ರಿಂದ 900 ಕೆಜಿ ಬೆಳ್ಳಿ, 300 ಕೆಜಿ ತಾಮ್ರದ ಫಲಕಗಳಿಂದ ಗೋಪುರ ನಿರ್ಮಾಣಗೊಂಡಿದೆ.
ಅತ್ಯಪೂರ್ವ ಮಹೋತ್ಸವ
ಈ ಮಹೋತ್ಸವವು ಅನೇಕ ಅಂಶಗಳಿಂದ ಅತ್ಯಪೂರ್ವವಾಗಿದೆ. ದೇಗುಲಗಳಲ್ಲಿ 12 ವರ್ಷಗಳಿಗೊಮ್ಮೆ ಬ್ರಹ್ಮಕಲಶೋತ್ಸವ ನಡೆಯುತ್ತದೆ. ಆದರೆ ಉಡುಪಿಯ ಶ್ರೀ ಕೃಷ್ಣ ದೇವರ ಸನ್ನಿಧಿಯು ಮಠವಾಗಿರುವುದರಿಂದ ಇಲ್ಲಿಯ ಪ್ರಕ್ರಿಯೆಗಳು ವಿಭಿನ್ನ ವಾದವು. ಶ್ರೀ ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ವಿಗ್ರಹದಲ್ಲಿ ಶ್ರೀಕೃಷ್ಣ ದೇವರು ಸ್ವಯಂಸನ್ನಿಹಿತರಾಗಿದ್ದಾರೆ. ಈ ನೆಲೆಯಲ್ಲಿ ಪ್ರಸ್ತುತ ನಡೆಯಲಿರುವ ಬ್ರಹ್ಮಕಲಶೋತ್ಸವ, ಶಿಖರ ಪ್ರತಿಷ್ಠೆ ಮೊದಲಾದ ಪ್ರಕ್ರಿಯೆಗಳು ಅತ್ಯಪೂರ್ವ.
ಈ ಸುವರ್ಣ ಗೋಪುರವು ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರು ರಚಿಸಿದ ಸರ್ವಮೂಲ ಗ್ರಂಥಗಳು, 21,600 ಹಂಸ ಮಂತ್ರ ಲೇಖನದಿಂದ ಕೂಡಿದ್ದು ಅನ್ವರ್ಥ ಸು-ವರ್ಣಗೋಪುರವಾಗಿ ವಿಜೃಂಭಿಸಲಿದೆ.
ಮಹೋತ್ಸವದಲ್ಲಿ ಪ್ರಾರ್ಥನೆ, ಹೋಮ, ಪಾರಾಯಣ, ಭಜನೆ, ಸಂಕೀರ್ತನ, ನರ್ತನಾದಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಪ್ರಕಟನೆ ತಿಳಿಸಿದೆ.
ವೈಭವದ ಶೋಭಾಯಾತ್ರೆ
ಶ್ರೀಕೃಷ್ಣ ಮಠದಲ್ಲಿ ಜೂ. 6ರಂದು ಶಿಖರ ಪ್ರತಿಷ್ಠೆ, ಜೂ. 9ರಂದು ಶ್ರೀಕೃಷ್ಣ ದೇವರಿಗೆ ಬ್ರಹ್ಮಕಲಶಾಭಿಷೇಕ ಮಹೋತ್ಸವಗಳು ನಡೆಯಲಿವೆ.
ಜೂ. 1ರಂದು ಜೋಡುಕಟ್ಟೆ
ಯಿಂದ ಶ್ರೀಕೃಷ್ಣ ಮಠದ ವರೆಗೆ ಮೆರವಣಿಗೆ ನಡೆಯಲಿದ್ದು, ಶೋಭಾಯಾತ್ರೆಯಲ್ಲಿ ಶತಮಾನದ ಇತಿಹಾಸವಿರುವ ದೇವರ ಸನ್ನಿಧಿ ಯುಕ್ತವಾದ 3 ಸುವರ್ಣ ಕಲಶಗಳನ್ನು ತರಲಾಗುವುದು.
ದೇಶದ ಮೂಲೆ ಮೂಲೆಗಳಿಂದ ವಿವಿಧ ಕಲಾವಿದರ ತಂಡಗಳು, ಭಜನ ಮಂಡಳಿಗಳು, ವಾದ್ಯ ವೃಂದಗಳು, ಗಣ್ಯರು, ಭಕ್ತರು ಪಾಲ್ಗೊಳ್ಳಲಿದ್ದಾರೆ. ದೇಶದ ಪ್ರಸಿದ್ಧ ಕಲಾವಿದ ಮಹಾಭಾರತ ಧಾರಾವಾಹಿಯ ಶ್ರೀಕೃಷ್ಣ ಪಾತ್ರಧಾರಿ, ಅರ್ಜುನ ಪಾತ್ರಧಾರಿಗಳೊಂದಿಗೆ ಭಾರತಾಂಬೆಯ ವೀರಪುತ್ರ ಅಭಿನಂದನ್ ವರ್ಧಮಾನ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಪ್ರಸಾದ ರೂಪದಲ್ಲಿ ರಜತ ಕಲಶ
ಬ್ರಹ್ಮಕಲಶೋತ್ಸವಕ್ಕೆ ವಿನಿಯೋಗಿಸಲಾಗುವ ಸಾವಿರ ರಜತ ಕಲಶಗಳನ್ನು ಶೋಭಾಯಾತ್ರೆಯಲ್ಲಿ ತರಲಾಗುವುದು. ಭಕ್ತರಿಗೆ ಈ ಕಲಶಗಳನ್ನು ಪಡೆಯುವ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಶ್ರೀ ಕೃಷ್ಣ ದೇವರಿಗೆ ಅಭಿಷೇಕ ಮಾಡಿದ ರಜತ ಕಲಶವನ್ನು ಬ್ರಹ್ಮಕಲಶಾಭಿಷೇಕಕ್ಕಾಗಿ ನಿರ್ದಿಷ್ಟ ಮೊತ್ತದ ಕಾಣಿಕೆ ನೀಡಿದ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.