Udupi ತಲವಾರಿನಿಂದ ಹಲ್ಲೆ: ಸೆಲೂನ್ ಸಿಬಂದಿಯ ಕೊಲೆ ಯತ್ನ
Team Udayavani, Jun 18, 2024, 12:05 AM IST
ಉಡುಪಿ: ಸೆಲೂನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕನನ್ನು ತಲವಾರು ಮೂಲಕ ಕೊಲೆಯತ್ನ ನಡೆಸಲು ಯತ್ನಿಸಿದ ಘಟನೆ ನಡೆದಿದೆ.
ಉಡುಪಿಯ ಪುತ್ತೂರಿನ ಸೆಲೂನ್‌ವೊಂದರಲ್ಲಿ ಕೆಲಸ ನಿರ್ವಹಿಸಿಕೊಂಡಿರುವ ಚರಣ್ ಯು. (18) ಹಲ್ಲೆಗೊಳಗಾದವರು.
ಜೂ. 15ರಂದು ಸೆಲೂನ್‌ನಲ್ಲಿ ಅವರು ಕೆಲಸ ಮಾಡಿಕೊಂಡಿದ್ದ ವೇಳೆ ಅಭಿ ಕಟಪಾಡಿ ಅವರು ಕರೆ ಮಾಡಿ ಶಬರಿ ಎಂಬವನ ಬಗ್ಗೆ ಮಾತನಾಡಬೇಕಾಗಿದೆ. ತತ್‌ಕ್ಷಣ ಪುತ್ತೂರಿನ ಬಿರಿಯಾನಿ ಪಾಯಿಂಟ್ ಬಳಿ ಬರುವಂತೆ ತಿಳಿಸಿದ್ದಾನೆ. ಅದರಂತೆ ಚರಣ್ ಅವರು ಸುಜನ್ ಎಂಬಾತನ ಬೈಕ್‌ನಲ್ಲಿ ಹೋಗಿದ್ದರು. ಇವರ ಗೆಳೆಯರಾದ ನಾಗರಾಜ್, ಕಾರ್ತಿಕ್, ರಂಜು ಅವರು ಮತ್ತೂಂದು ಸ್ಕೂಟಿಯಲ್ಲಿ ಹೊರಟು ಬಿರಿಯಾನಿ ಪಾಯಿಂಟ್ ಗಿಂತ ಸ್ವಲ್ಪ ಮುಂದೆ ಗೂಡಂಗಡಿ ಬಳಿಗೆ ತೆರಳಿದ್ದರು. ಈ ವೇಳೆ ಪ್ರವೀಣ, ಅಭಿ ಕಟಪಾಡಿ, ದೇಶರಾಜ್, ಶಬರಿ ಮತ್ತು ಪರಿಚಯವಿಲ್ಲದ ಇತರ ಇಬ್ಬರು ಅಲ್ಲಿಯೇ ನಿಂತಿದ್ದ ರಿûಾಕ್ಕೆ ಒರಗಿಕೊಂಡು, ಕೈಯಲ್ಲಿ ತಲವಾರು ಹಿಡಿದುಕೊಂಡು ನಿಂತಿದ್ದರು.
ಚರಣ್ ಮತ್ತು ಆತನ ಗೆಳೆಯರನ್ನು ನೋಡಿದ ತತ್‌ಕ್ಷಣ ಕೊಲ್ಲುವ ಉದ್ದೇಶದಿಂದ ಎದುರು ಬಂದು ತಲವಾರು ಬೀಸಿದ್ದು, ಬೈಕ್ ಮತ್ತು ಸ್ಕೂಟಿಯನ್ನು ಅಲ್ಲಿಯೇ ಬಿಟ್ಟು ಅವರಿಂದ ತಪ್ಪಿಸಿಕೊಂಡು ಓಡಿ ಹೋಗುವಾಗ ಬಿಯರ್ ಬಾಟಲಿಗಳನ್ನು ಬಿಸಾಡಿದ್ದಾರೆ. ಅನಂತರ ರಾತ್ರಿ 10 ಗಂಟೆಗೆ ಚರಣ್ ಹಾಗೂ ಸ್ನೇಹಿತರು ಪುನಃ ತಾವು ಬಿಟ್ಟು ಹೋಗಿದ್ದ ಬೈಕ್ ಹಾಗೂ ಸ್ಕೂಟಿಯನ್ನು ಕೊಂಡು ಹೋಗಲು ಹೋದಾಗ ಆರೋಪಿಗಳು ಇವರ ದ್ವಿಚಕ್ರ ವಾಹನವನ್ನು ಹಾನಿಗೊಳಿಸಿ 25 ಸಾವಿರ ರೂ. ನಷ್ಟ ಉಂಟು ಮಾಡಿದ್ದಾರೆ.
ಸುಜನ್‌ನ ಸ್ಕೂಟಿಯನ್ನು ದೂಡಿ ಹಾಕಿದ್ದಾರೆ. ಶಬರಿ ಎಂಬವನಿಗೆ ಚರಣ್ ನಿಂದಿಸಿದ ಕಾರಣ ಮುಂದಿಟ್ಟುಕೊಂಡು, ಹಳೇ ದ್ವೇಷದಿಂದ ಪ್ರವೀಣ್ ಮತ್ತು ಇತರ 5 ಮಂದಿ ಸೇರಿ ಕೊಲ್ಲುವ ಉದ್ದೇಶದಿಂದ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ ಎಂದು ನಗರ ಠಾಣೆಯಲ್ಲಿ ಚರಣ್ ಅವರು ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮತಿ ಪ್ರತಿಭಾ, ಗೀತಾ ತ್ರಯೋದಶಾವಧಾನ’ ಸಂಪನ್ನ
Adani: ಅದಾನಿ ಫೌಂಡೇಶನ್ 17 ಲಕ್ಷ ರೂಪಾಯಿ ಕಾಮಗಾರಿಗೆ ಗುದ್ದಲಿ ಪೂಜೆ
Udupi: ಬಚ್ಚಿಟ್ಟ ಮದುವೆ; ಗಂಡನ ಗುಟ್ಟು-ರಟ್ಟು; ಪತಿ ಸಹಿತ 6ಮಂದಿ ವಿರುದ್ಧ ಪ್ರಕರಣ ದಾಖಲು
Padubidri:15 ಲಕ್ಷ ರೂ. ಪಡೆದು ಮರಳಿಸದೆ ಜೀವಬೆದರಿಕೆ; ಪ್ರಕರಣ ದಾಖಲು
Kudremukh: ಹೊತ್ತಿ ಉರಿದ ಟೆಂಪೋದಲ್ಲಿದ್ದದ್ದು ಕಟಪಾಡಿ ಮೂಲದ 8 ಕುಟುಂಬಗಳು
MUST WATCH
ಹೊಸ ಸೇರ್ಪಡೆ
Sagara: ಜೋಗ ಜಲಪಾತ ಪ್ರವೇಶಕ್ಕೆ ಮೂರು ತಿಂಗಳುಗಳ ಕಾಲ ನಿರ್ಬಂಧ
ಆಳ್ವಾಸ್ ವಿರಾಸತ್‌ಗೆ ತೆರೆ; ಮೂಡುಬಿದಿರೆಯಲ್ಲಿ 6 ದಿನ ಕಳೆಗಟ್ಟಿದ್ದ ಸಂಭ್ರಮ
Bigg Boss Telugu 8: ಬಿಗ್‌ಬಾಸ್ ತೆಲುಗು ಗೆದ್ದ ಮೈಸೂರಿನ ಹುಡುಗ: ಯಾರು ಈ ನಿಖಿಲ್?
Elephant: ಕಾಫಿನಾಡಿನಲ್ಲಿ ಕಾಡಾನೆ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು
Someshwar Beach: ತಂಗಿ ಗಂಡನ ಪಿಂಡ ಪ್ರದಾನಕ್ಕೆ ಬಂದಿದ್ದ ಮಹಿಳೆ ನೀರುಪಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.