ಆನೆಕಾಲು ರೋಗ ಮುಕ್ತ ಜಿಲ್ಲೆಯತ್ತ ಉಡುಪಿ ದಾಪುಗಾಲು
Team Udayavani, Oct 6, 2019, 5:17 AM IST
ಸಾಂದರ್ಭಿಕ ಚಿತ್ರ.
ಉಡುಪಿ: ರಾಜ್ಯದಲ್ಲಿಯೇ ಮೊದಲ ಬಾರಿಗೆ ಆನೆಕಾಲು ರೋಗ ಮುಕ್ತ ಜಿಲ್ಲೆಯಾಗುವತ್ತ ಉಡುಪಿ ದಾಪುಗಾಲಿಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಪ್ರಕಾರ ಜಿಲ್ಲೆಯಲ್ಲಿ 3 ಹಂತಗಳಲ್ಲಿ ಆನೆಕಾಲು ರೋಗ ಪತ್ತೆ ಸಮೀಕ್ಷೆ ಕೈಗೊಳ್ಳಲಾಗಿದ್ದು, ಸ್ಥಳೀಯವಾಗಿ ರೋಗಾಣು ಉತ್ಪಾದನೆ ಶೇ.1ಕ್ಕಿಂತ ಕಡಿಮೆ ಗೋಚರಿಸಿದೆ.
ಜಿಲ್ಲೆಯಲ್ಲಿ 2004ಕ್ಕಿಂತ ಪೂರ್ವದಲ್ಲಿ 470 ಮಂದಿ ಆನೆಕಾಲು ರೋಗಕ್ಕೆ ತುತ್ತಾಗಿದ್ದು, ವ್ಯಾಪಕ ಜಾಗೃತಿ ಕೈಗೊಳ್ಳ ಲಾಗಿತ್ತು. 2012ರವರೆಗೆ ಪ್ರತೀ ವರ್ಷ ಎಲ್ಲರಿಗೂ 3 ಡಿಇಸಿ ಮಾತ್ರೆಗಳನ್ನು ಕಡ್ಡಾಯವಾಗಿ ನೀಡಲಾಗಿದ್ದು, ನಿಯಂತ್ರಣದಲ್ಲಿ ಶೇ. 98ರಷ್ಟು ಗುರಿ ಸಾಧಿಸಲಾಗಿದೆ. ಪರಿಣಾಮ ರೋಗ ನಿಯಂತ್ರಣಕ್ಕೆ ಬಂದಿದ್ದು, ಅನಂತರ ಸೊಳ್ಳೆಗಳ ಬೆಳವಣಿಗೆ, ವೈರಾಣು ಪ್ರಸರಣದ ಬಗ್ಗೆ ಆರೋಗ್ಯ ಇಲಾಖೆ 3 ಹಂತದಲ್ಲಿ ಸರ್ವೇ ನಡೆಸಿದೆ.
2014ರಲ್ಲಿ ಮೊದಲ ಸರ್ವೆ ಕಾರ್ಯ ನಡೆದಿದ್ದು, ಜಿಲ್ಲೆಯಲ್ಲಿ 92 ಶಾಲೆಗಳಲ್ಲಿ 5ರಿಂದ 6 ವರ್ಷದ 1 ಮತ್ತು 2ನೇ ತರಗತಿಯ 1,579 ಮಕ್ಕಳಿಗೆ ಐಸಿಟಿ ಟೆಸ್ಟ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ 5 ಮಂದಿಯಲ್ಲಿ ರೋಗಾಣು ಪತ್ತೆಯಾಗಿತ್ತು. 2016 ರಲ್ಲಿ ನಡೆದ 2ನೇ ಸರ್ವೆಯಲ್ಲಿ 64ಶಾಲೆಗಳ 1,671 ಮಕ್ಕಳನ್ನು ಪರೀಕ್ಷಿಸಿದ್ದು, 10 ಮಕ್ಕಳಲ್ಲಿ ರೋಗ ಲಕ್ಷಣ ಕಂಡುಬಂದಿದೆ. 2019ರಲ್ಲಿ 54 ಶಾಲೆಗಳಿಂದ 1,632 ಮಕ್ಕಳನ್ನು ಪರೀಕ್ಷೆ ಒಳಪಡಿಸಲಾಗಿದ್ದು, 9 ಮಕ್ಕಳಲ್ಲಿ ರೋಗಾಣು ಕಂಡುಬಂದಿದೆ. ಅನಂತರ ಡಬ್ಲೂéಎಚ್‌ಒ ಗುರುತಿಸಿದ 19 ಪ್ರದೇಶಗಳಲ್ಲಿ ವಿವಿಧ ಪರೀಕ್ಷೆ ನಡೆಸಿದಾಗ ಶೇ. 1ಕ್ಕಿಂತಲೂ ಕಡಿಮೆ ರೋಗಾಣು ಪತ್ತೆಯಾಗಿರುವುದರಿಂದ ಈ ಟಾಸ್ಕ್ ನಲ್ಲಿ ಜಿಲ್ಲೆ ಉತ್ತೀರ್ಣವಾಗಿದೆ. ಡಬ್ಲೂéಎಚ್‌ಒ ಮುಂದಿನ 2 ವರ್ಷ ಜಿಲ್ಲೆಯಲ್ಲಿ ಆನೆಕಾಲು ರೋಗ ಪ್ರಕರಣ ಬಗ್ಗೆ ನಿಗಾ ವಹಿಸಲಿದ್ದು, ಬಳಿಕ ಪ್ರಮಾಣ ಪತ್ರ ನೀಡಲಿದೆ.
ಹೊರ ಜಿಲ್ಲೆ ಮತ್ತು ರಾಜ್ಯದಿಂದ ಆಗಮಿಸುವ ಕಾರ್ಮಿಕರಲ್ಲಿ ಆನೆಕಾಲು ರೋಗ ಲಕ್ಷಣ ಕಂಡುಬಂದಿದ್ದು, ಅವರನ್ನು ಗುರುತಿಸಿ ಔಷಧ ನೀಡಲಾಗುತ್ತಿದೆ. ಡಬ್ಲೂéಎಚ್‌ಒ ನೀಡಿದ 3 ಟಾಸ್ಕ್ ಪೂರ್ಣಗೊಂಡಿದೆ. ಇದರಲ್ಲಿ ಜಿಲ್ಲೆ ಉತ್ತೀರ್ಣವಾಗಿದೆ. ಮುಂದಿನ ಹಂತದಲ್ಲಿ ಸೊಳ್ಳೆ ಮಾದರಿ ಪರೀಕ್ಷೆ ಹಾಗೂ ಸಮಗ್ರ ಸರ್ವೇ ನಡೆಸಿದಾಗ ನೆಗೆಟಿವ್ ವರದಿ ಬಂದರೆ ಪ್ರಮಾಣ ಪತ್ರ ಲಭಿಸಲಿದೆ.
-ಡಾ| ಪ್ರಶಾಂತ್ ಭಟ್
ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.