Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

ಗುತ್ತಿಗೆ ಆಧಾರಿತ ಸಿಬಂದಿಗೆ ಕನಿಷ್ಠ ಸೌಲಭ್ಯವೂ ಇಲ್ಲ

Team Udayavani, Dec 19, 2024, 5:43 AM IST

Kallabete

ಉಡುಪಿ: ಕಾಡು-ಮೇಡು ಅಲೆಯುತ್ತಾ ಕಾಡು ಹಾಗೂ ವನ್ಯಜೀವಿ ಗಳನ್ನು ರಕ್ಷಿಸುವ ಕೆಲಸ ಮಾಡುತ್ತಿರುವ ಕಳ್ಳ ಬೇಟೆ ನಿಗ್ರಹ ತಂಡದಲ್ಲಿರುವ ಗುತ್ತಿಗೆ ಸಿಬಂದಿಯ ಜೀವ ಹಾಗೂ ಉದ್ಯೋಗಕ್ಕೆ ಭದ್ರತೆಯೇ ಇಲ್ಲ. ಕರ್ತವ್ಯದ ವೇಳೆ ಇವರ ಜತೆಯಲ್ಲಿ ಜೀವ ರಕ್ಷಣೆಗೆ ಇರುವುದು ಕತ್ತಿ ಮತ್ತು ಮರದ ಕೋಲು ಮಾತ್ರ!

ಪಶ್ಚಿಮಘಟ್ಟ ತಪ್ಪಲಿನ ಮಲೆನಾಡು ಭಾಗದ ಅರಣ್ಯಗಳಲ್ಲಿ ನಕ್ಸಲ್‌ ಚಟುವಟಿಕೆ ಕೆಲವು ವರ್ಷಗಳಿಂದ ಇತ್ತಾದರೂ 5-6 ತಿಂಗಳಿನಿಂದ ಅದು ಹೆಚ್ಚಾಗಿತ್ತು.
ಪೀತಬೈಲಿನಲ್ಲಿ ಎಎನ್‌ಎಫ್ ಗುಂಡಿಗೆ ನಕ್ಸಲ್‌ ಮುಖಂಡ ವಿಕ್ರಂ ಗೌಡ ಸಾವಿಗೀಡಾದ ವೇಳೆ ಆತನ ಜತೆಗಿದ್ದವರು ಪರಾರಿಯಾ ಗಿದ್ದು, ಕಾಡಂಚಿನ ಗ್ರಾಮಸ್ಥರು ಆತಂಕ ದಲ್ಲಿದ್ದಾರೆ. ಜತೆಗೆ ಕಳ್ಳಬೇಟೆಗಾರ ನಿಗ್ರಹ ಶಿಬಿರದ ಸಿಬಂದಿಗೆ ಪ್ರಾಣ ಭಯ ಕಾಡುತ್ತಿದೆ.

ಭದ್ರ ವನ್ಯಜೀವಿ ವಿಭಾಗ, ಕಾವೇರಿ ವನ್ಯಜೀವಿ ವಿಭಾಗ, ಬಂಡೀ ಪುರ ರಾಷ್ಟ್ರೀಯ ಉದ್ಯಾನವನ, ಬನ್ನೇರು ಘಟ್ಟ ರಾಷ್ಟ್ರೀಯ ಉದ್ಯಾನವನ, ದಾಂಡೇಲಿ ಅಭಯಾರಣ್ಯ, ಕುದುರೆ ಮುಖ ಉದ್ಯಾನವನ ವ್ಯಾಪ್ತಿ ಸಹಿತ ರಾಜ್ಯದ 500ಕ್ಕೂ ಹೆಚ್ಚಿನ ಕಳ್ಳಬೇಟೆ ತಡೆ (ಆ್ಯಂಟಿ ಪೋಚಿಂಗ್‌ ಕ್ಯಾಂಪ್‌) ಶಿಬಿರದಲ್ಲಿ 1,500ಕ್ಕೂ ಹೆಚ್ಚಿನ ಸಿಬಂದಿ ಇದ್ದಾರೆ.

ಪ್ರತಿಯೊಂದು ಶಿಬಿರಗಳಲ್ಲಿ ತಲಾ ನಾಲ್ವರು ಹೊರಗುತ್ತಿಗೆಯಲ್ಲಿ ನಿಯೋಜನೆಗೊಂಡವರು ಇದ್ದಾರೆ. ಕೆಲವು ಶಿಬಿರಗಳಲ್ಲಿ ಈ ಸಂಖ್ಯೆ ಕಡಿಮೆಯಿದ್ದು, ಇವರಿಗೆಲ್ಲ ಕನಿಷ್ಠ ಸೌಲಭ್ಯವೂ ಇಲ್ಲ ಎಂಬಂತಾಗಿದೆ.

ರಕ್ಷಣೆ, ಭದ್ರತೆಗಳಿಲ್ಲದೆ ಕೆಲಸ
ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ 8 ಕಳ್ಳ ಬೇಟೆ ನಿಗ್ರಹ ಶಿಬಿರಗಳಿದ್ದು, 32 ಸಿಬಂದಿಯಿದ್ದಾರೆ. ಇತರೆಡೆಗಳ ಶಿಬಿರ ಗಳು ಸೇರಿ ಸುಮಾರು 110ಕ್ಕೂ ಅಧಿಕ ಮಂದಿ ಹೊರಗುತ್ತಿಗೆ ಸಿಬಂದಿ ಮಲೆನಾಡಿನ ದಟ್ಟಾರಣ್ಯದೊಳಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅರಣ್ಯ ಇಲಾಖೆ ಖಾಯಂ ಸಿಬಂದಿಗೆ ಆಯು ಧ ನೀಡುತ್ತದೆ. ಸರಕಾರದ ಭದ್ರತೆಗಳಿವೆ. ಆದರೆ ಕಳ್ಳಬೇಟೆ ನಿಗ್ರಹ ಶಿಬಿರದಲ್ಲಿ ತಾತ್ಕಾಲಿಕ ನೆಲೆಯಲ್ಲಿಕೆಲಸ ಮಾಡುವ ಹೊರಗುತ್ತಿಗೆ ಸಿಬಂದಿಗೆ ಯಾವುದೇ ರಕ್ಷಣೆ, ಸೇವಾ ಭದ್ರತೆಗಳಿಲ್ಲದಿರುವುದು ಇವರನ್ನು ಸಂಕಷ್ಟಕ್ಕೆ ನೂಕಿದೆ.

ಜೀವದ ಹಂಗು ತೊರೆದು ಕೆಲಸ
ಅಭಯಾರಣ್ಯದೊಳಗೆ ಇರುವ ಕಳ್ಳಬೇಟೆ ನಿಯಂತ್ರಣ ಶಿಬಿರದಲ್ಲಿದ್ದು, ಇವರಿಗೆ ಒಂದು ಕಡೆ ಕಾಡುಕಳ್ಳರ ಹಾವಳಿ ಮತ್ತೂಂದೆಡೆ ಕಾಡು ಪ್ರಾಣಿಗಳ ದಾಳಿ ಭೀತಿ. ಇದರ ನಡುವೆ ನಕ್ಸಲರ ಭೀತಿ. ಇವೆಲ್ಲದರ ಮಧ್ಯೆ ತಮ್ಮ ಕುಟುಂಬದ ನಿರ್ವಹಣೆಗೆ ಜೀವದ ಹಂಗು ತೊರೆದು ದಟ್ಟ ಕಾಡಿನಲ್ಲಿ ಗಸ್ತು ಸಂಚರಿಸುವಾಗ ಜತೆಗಿರುವುದು ಕತ್ತಿ ಹಾಗೂ ಕೋಲು ಮಾತ್ರ!

ಖಾಯಂ ಸವಲತ್ತು ಇವರಿಗಿಲ್ಲ
ಸರಕಾರಿ ನೌಕರರಿಗೆ ಸಮಾನನಾಗಿ ಕೆಲಸ ಮಾಡುವ ಇವರಿಗೆ ಎಲ್ಲ ಸವಲತ್ತುಗಳು ಸಿಗಬೇಕು. ಗುತ್ತಿಗೆದಾರ ವೇತನ ಕಡಿತಗೊಳಿಸಿ ನೀಡುತ್ತಿದ್ದು, ಭವಿಷ್ಯನಿಧಿ, ಇಎಸ್‌ಐ ಸೌಕರ್ಯಗಳು ಮಾತ್ರ ಇವೆ. ಕೆಲಸ ಅವಧಿ 8 ತಾಸು ಆಗಿದ್ದರೂ ದಿನದ 24 ಗಂಟೆ ದುಡಿಸುವುದೂ ಇದೆ. ಹೀಗೆ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ಸಂಬಳ ಸಿಗುತ್ತಿಲ್ಲ ಎಂಬುದು ಅವರ ದೂರು.

ರಕ್ಷಣೆಗೆ ಆದ್ಯತೆ ನೀಡುತ್ತೇವೆ
ಎನ್‌ಕೌಂಟರ್‌ಬಳಿಕ ನಮ್ಮ ಎಲ್ಲ ವಿಭಾಗದ ಸಿಬಂದಿಗೆ ಎಚ್ಚರದಿಂದಿರಲು ತಿಳಿಸಲಾಗಿದೆ. ಶಿಬಿರಗಳಲ್ಲಿ ಕರ್ತವ್ಯ ನಿರ್ವಹಿಸುವವರು ಮುನ್ನೆಚ್ಚರಿಕೆ ವಹಿಸುವ ಬಗ್ಗೆ ವಿಶೇಷ ಗಮನಹರಿಸಲು ಹೇಳಲಾಗಿದೆ. ಸಿಬಂದಿ ಕೊರತೆಯೂ ನಮ್ಮಲ್ಲಿದೆ. ಡಾ| ಕರಿಕಲನ್‌ ವಿ., ಉಪ ಅರಣ್ಯ ಸಂರಕ್ಷಣಾಧಿಕಾರಿ
ಮಂಗಳೂರು ವಿಭಾಗ

ಟಾಪ್ ನ್ಯೂಸ್

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

8

Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ

5-thekkatte

Thekkatte: ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.