ಉಡುಪಿ: ಸರಕಾರಿ ದಾದಿಯರಿಂದ ನೇತ್ರದಾನದ ಸಂಕಲ್ಪ
Team Udayavani, Jul 15, 2017, 3:50 AM IST
ಉಡುಪಿ: ರಾಜ್ಯದ ಎಲ್ಲ ಕಡೆಗಳಲ್ಲಿ ಈಗ ಸರಕಾರಿ ಆಸ್ಪತ್ರೆ, ವೈದ್ಯರು, ದಾದಿಯರ ಬಗ್ಗೆ ಕೆಟ್ಟ ಸುದ್ದಿಗಳೇ ಹೆಚ್ಚಾಗಿ ಪ್ರತಿಧ್ವನಿಸುತ್ತಿದೆ. ಆದರೆ ಉಡುಪಿಯ ಸರಕಾರಿ ದಾದಿಯರು ಸಮಾಜಮುಖೀ ಕಾರ್ಯಕ್ಕೆ ಮುನ್ನುಡಿ ಬರೆಯುವ ಮೂಲಕ ಸುದ್ದಿಯಲ್ಲಿದ್ದಾರೆ. ದಾದಿಯರೆಂದರೆ ಆಸ್ಪತ್ರೆಗಳ ಹೃದಯವಿದ್ದಂತೆ ಎನ್ನುವ ಮಾತು ಅಕ್ಷರಶಃ ನಿಜ ಮಾಡುವತ್ತ ಈ ನರ್ಸ್‌ಗಳು ಹೆಜ್ಜೆಯಿಟ್ಟಿದ್ದಾರೆ. ಉಡುಪಿ ಜಿಲ್ಲೆಯ 25 ಸರಕಾರಿ ನರ್ಸ್‌ಗಳು ಸ್ವಯಂ ಇಚ್ಛೆಯಿಂದ ನೇತ್ರದಾನ ಮಾಡಲು ಮುಂದಾಗಿದ್ದಾರೆ.
ಸರಕಾರಿ ಆಸ್ಪತ್ರೆಯ ದಾದಿಯರೆಂದರೆ ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿ ಮೂಡುವುದು ಕಣ್ಣಿನಲ್ಲಿ ಕರುಣೆಯೇ ಇಲ್ಲದ, ಬಡ ರೋಗಿಗಳ ಜೀವ ಹಿಂಡುವವರು ಎಂದು. ಆದರೆ ಅವರಿಗೂ ಒಂದು ಒಳ್ಳೆಯ ಮನಸ್ಸಿದೆ. ಉತ್ತಮ ಆಶಯಗಳನ್ನು ಹಾಕಿಕೊಳ್ಳುವ ಮೂಲಕ ಅದನ್ನು ಸಾಕಾರಗೊಳಿಸಿಕೊಳ್ಳಬೇಕು ಎನ್ನುವ ಮಹತ್ವಾಕಾಂಕ್ಷೆ ಇದೆ ಎನ್ನುವುದು ಈ ಕಾರ್ಯದ ಮೂಲಕ ಸಾಬೀತಾಗಿದೆ.
ಅಂಧರ ಬಾಳಿಗೆ “ಬೆಳಕು’
ಉಡುಪಿ ಜಿಲ್ಲೆಯ ಜಿಲ್ಲಾಸ್ಪತ್ರೆ, ಪ್ರಾಥಮಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸರಕಾರಿ ಶುಶ್ರೂಷಕಿಯರು ಸೇರಿ ಬೆಳಕು ಎನ್ನುವ ಒಂದು ವಾಟ್ಸ್‌ಆ್ಯಪ್ ಗುಂಪೊಂದನ್ನು ರಚಿಸಿ ಆ ಮೂಲಕ ನೇತ್ರದಾನ, ಅಂಗದಾನ ಜಾಗೃತಿ, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರಥಮ ಹೆಜ್ಜೆಯಾಗಿ ಅಂತಾರಾಷ್ಟ್ರೀಯ ನರ್ಸ್‌ಗಳ ದಿನ ಜಿಲ್ಲೆಯ 25 ಮಂದಿ ದಾದಿಯರು ನೇತ್ರದಾನ ಮಾಡುವ ಸಂಕಲ್ಪದೊಂದಿಗೆ ಅಂಧರ ಬಾಳಿಗೆ ಬೆಳಕಾಗಿದ್ದಾರೆ.
ಅದಲ್ಲದೆ ಆಸ್ಪತ್ರೆಯ ಕರ್ತವ್ಯ ಮುಗಿದ ಬಳಿಕವೂ ರೋಗಿಗಳ ಶುಶ್ರೂಷೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಡ್ರಗ್ಸ್, ಎಚ್‌ಐವಿ, ಏಡ್ಸ್‌ನಂತಹ ಕಾಯಿಲೆಗಳ ಕುರಿತು ಅರಿವು ಮೂಡಿಸುವ ಸಲುವಾಗಿ ಬೀದಿ ನಾಟಕಗಳನ್ನು ದಾದಿಯರೇ ನಿರ್ದೇಶಿಸಿ, ನಟಿಸಿ ಅಲ್ಲಲ್ಲಿ ಪ್ರದರ್ಶನ ನೀಡುವ ಯೋಜನೆಯಿದೆ.
ಸರಕಾರಿ ಆಸ್ಪತ್ರೆಗಳಲ್ಲಿ ಏನೇ ಅನಾಹುತ, ಅಚಾತುರ್ಯ ನಡೆದರೂ ಮೊದಲು ನರ್ಸ್‌ಗಳನ್ನೇ ಹೊಣೆಗಾರರನ್ನಾಗಿ ಮಾಡುತ್ತಾರೆ. ವಾಸ್ತವದಲ್ಲಿ ಅವರ ತಪ್ಪಿಲ್ಲದಿದ್ದರೂ ಹೆಚ್ಚಿನ ಸಂದರ್ಭ ಅವರು ಬಲಿಪಶುಗಳಷ್ಟೇ. ಆರೋಪಗಳು ಏನೇ ಇದ್ದರೂ ಉಡುಪಿಯ ಸರಕಾರಿ ದಾದಿಯರು ಕೈಗೊಂಡ ಕಾರ್ಯ ಮೆಚ್ಚಲೇಬೇಕಾದುದು.
ಎಲ್ಲರೂ ಸಂಕಲ್ಪ ಮಾಡಬಹುದು
121 ಕೋಟಿಗೂ ಅಧಿಕ ಜನಸಂಖ್ಯೆ ಇರುವ ದೇಶದಲ್ಲಿ ಪ್ರತಿ ದಿನ ಸುಮಾರು 86,853 ಮಂದಿ ಹುಟ್ಟಿದರೆ, ದಿನ 62, 389 ಮಂದಿ ಸಾವವನ್ನಪ್ಪುತ್ತಾರೆ. ಭಾರತದಲ್ಲಿ ಕಣ್ಣಿಲ್ಲದವರ ಸಂಖ್ಯೆ 6,82,460 ಎಂದು ತಿಳಿದು ಬಂದಿದೆ. ದೇಶದಲ್ಲಿ ವರ್ಷಕ್ಕೆ 1 ಲಕ್ಷಕ್ಕೂ ಮಿಕ್ಕಿ ಕಣ್ಣು ದಾನ ಮಾಡುವವರ ಅಗತ್ಯವಿದ್ದು, ಆದರೆ ವರ್ಷದಲ್ಲಿ ಕೇವಲ 30 ಸಾವಿರದಷ್ಟು ಮಂದಿ ಮಾತ್ರ ನೇತ್ರದಾನಕ್ಕೆ ಮುಂದಾಗುತ್ತಿದ್ದಾರೆ. ಸಾಯುವವರೆಲ್ಲರೂ ತಮ್ಮ ಕಣ್ಣನ್ನು ದಾನ ಮಾಡುವ ನಿರ್ಧಾರ ಕೈಗೊಂಡರೆ ಬಹುಃ ಒಂದೇ ವರ್ಷದಲ್ಲಿ ಭಾರತದಲ್ಲಿ ಅಂಧರೇ ಇಲ್ಲವಾಗಬಹುದು. ಕಣ್ಣು ದಾನ ಮಾಡಲು ಇಚ್ಛೆಯುಳ್ಳವರು ನೋಂದಾಯಿತ ಕಣ್ಣು ದಾನ ಕೇಂದ್ರಗಳಲ್ಲಿ ಅರ್ಜಿ ಭರ್ತಿ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು.
ಸಮಾಜದ ಋಣ ಸಂದಾಯ
ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಉಡುಪಿಯ ಸಮಾನ ಮನಸ್ಕ ಶುಶ್ರೂಷಕಿಯರು “ಬೆಳಕು’ ಹೆಸರಿನ ವಾಟ್ಸ್‌ಆ್ಯಪ್ ಗುಂಪಿನ ಮೂಲಕ ತಮ್ಮ ಕಣ್ಣುಗಳನ್ನು ದಾನ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇವೆ. ನಮ್ಮ ಕುಟುಂಬ ವರ್ಗವೂ ಸೇರಿದೆ. ನಮ್ಮಿಂದ ಪ್ರೇರಿತರಾದ ಹಲವರು ನಮ್ಮ ಗುಂಪಿಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಅಂಧತ್ವದಿಂದ ಬಳಲುತ್ತಿರುವವರು ಅನೇಕರಿದ್ದಾರೆ. ಸತ್ತ ಅನಂತರ ಮಣ್ಣಾಗುವ ಕಣ್ಣುಗಳನ್ನು ದಾನ ಮಾಡುವ ನಿರ್ಧಾರ ತೆಗೆದುಕೊಂಡರೆ ಎಷ್ಟೋ ಅಂಧರ ಬಾಳಲ್ಲಿ ಬೆಳಕು ಕಾಣಬಹುದು. ಇದು ಪ್ರಚಾರಕ್ಕಾಗಿ ಮಾಡುತ್ತಿರುವುದಲ್ಲ. ಒಳ್ಳೆಯ ಆಶಯ ಈಡೇರಿಸುತ್ತಿದ್ದೇವೆ.
– ಸಜನಿ ಸುಬ್ರಹ್ಮಣ್ಯ, ಮಹಿಳಾ ಆರೋಗ್ಯ ಸಹಾಯಕಿಯರ ಕೇಂದ್ರ ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.