ಉಡುಪಿ: ಇಂದು 91 ಅಭ್ಯರ್ಥಿಗಳ “ಭವಿಷ್ಯ’ನಿರ್ಧಾರ
Team Udayavani, Aug 31, 2018, 6:00 AM IST
ಉಡುಪಿ: ಈ ಬಾರಿ ತೀವ್ರ ಕುತೂಹಲ ಮೂಡಿಸಿರುವ ಉಡುಪಿ ನಗರ ಸಭೆಯ ಚುನಾವಣೆ ಶುಕ್ರವಾರ ನಡೆಯಲಿದ್ದು 91 ಮಂದಿ ಅಭ್ಯರ್ಥಿಗಳ “ಸ್ಥಳೀಯ ರಾಜಕೀಯ ಭವಿಷ್ಯ’ ನಿರ್ಧಾರವಾಗಲಿದೆ.
ಒಟ್ಟು ಎಲ್ಲಾ 35 ಸ್ಥಾನ (ವಾರ್ಡ್)ಗಳಿಗೆ ಚುನಾವಣೆ ನಡೆಯುತ್ತಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲಾ ಸ್ಥಾನ
ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 10 ವಾರ್ಡ್‌ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
9 ಮಂದಿ ಪಕ್ಷೇತರರು, ಓರ್ವ ಶಿವಸೇನೆ ಮತ್ತು ಓರ್ವ ಬಿಎಸ್‌ಪಿ ಅಭ್ಯರ್ಥಿ ಕಣದಲ್ಲಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಶಿವಸೇನೆ ಮತ್ತು ಬಿಎಸ್‌ಪಿ ಅಭ್ಯರ್ಥಿಗಳು ಆಯಾ ಪಕ್ಷಗಳ ಚಿಹ್ನೆ ಯಡಿ ಸ್ಪರ್ಧಿಸುತ್ತಿದ್ದಾರೆ. ಪಕ್ಷೇತರರು ತಮಗೆ ಚುನಾವಣಾ ಆಯೋಗ ನೀಡಿದ ಚಿಹ್ನೆಯಡಿ ಸ್ಪರ್ಧೆ ಎದುರಿಸುತ್ತಿದ್ದಾರೆ.
ಕಾಂಗ್ರೆಸ್ ಕೈಯಲ್ಲಿರುವ ಆಡಳಿತ ವನ್ನು ಮತ್ತೆ ತನ್ನ ತೆಕ್ಕೆಗೆ ಪಡೆಯುವ ಹುಮ್ಮಸ್ಸಿನಲ್ಲಿ ಬಿಜೆಪಿ ಇದ್ದರೆ ಅಧಿಕಾರ ಉಳಿಸಿಕೊಳ್ಳುವ ಯತ್ನ ಕಾಂಗ್ರೆಸ್‌ನದ್ದು. ಹಾಗಾಗಿ ನಗರದಲ್ಲಿ ಈ ಬಾರಿಯ ಚುನಾವಣೆ ಹಿಂದಿಗಿಂತ ಹೆಚ್ಚು ಕುತೂಹಲಕಾರಿಯಾಗಿದೆ. ಮನೆ ಮನೆ ಪ್ರಚಾರ ಕೂಡ ಜೋರಾಗಿಯೇ ನಡೆದಿತ್ತು.
ಬಿಗಿ ಬಂದೋಬಸ್ತ್
ಮೂವರು ಡಿವೈಎಸ್‌ಪಿ ಹಾಗೂ 6 ಮಂದಿ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಪೊಲೀಸ್‌ಪಡೆ ಸಿದ್ಧವಾಗಿದೆ. 4 ಕೆಎಸ್‌ಆರ್‌ಪಿ, 6 ಡಿಆರ್ ತುಕಡಿಗಳನ್ನು ಬಳಸಿಕೊಳ್ಳಲಾಗುತ್ತಿದೆ. 36 ಮಂದಿ ಪಿಎಸ್‌ಐ/ಎಎಸ್‌ಐಗಳು, 350 ಮಂದಿ ಕಾನ್‌ಸ್ಟೆàಬಲ್‌ಗಳು, 106 ಮಂದಿ ಗೃಹರಕ್ಷಕ ದಳ ಸಿಬಂದಿ ಭದ್ರತಾ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ.
ಮೊದಲ ಬಾರಿಗೆ ವೋಟರ್
ಸ್ಲಿಪ್ ವಿತರಣೆ
ಕಳೆದ ವಿಧಾನಸಭಾ ಚುನಾವಣೆಯಂತೆ ನಗರಸಭಾ ಚುನಾವಣೆ ಯಲ್ಲಿಯೂ ಅಧಿಕಾರಿಗಳು ಮನೆ ಮನೆಗಳಿಗೆ ಭಾವಚಿತ್ರ ಸಹಿತವಾದ ವೋಟರ್ ಸ್ಲಿಪ್‌ನ್ನು ವಿತರಿಸಿದ್ದಾರೆ. ರಾಜಕೀಯ ಪಕ್ಷಗಳು ಕೂಡ ವೋಟರ್ ಸ್ಲಿಪ್ ನೀಡಿವೆ. ಅಧಿಕಾರಿಗಳು ನೀಡಿರುವ ವೋಟರ್ ಸ್ಲಿಪ್‌ನ್ನು ತೆಗೆದುಕೊಂಡು ಹೋದರೆ ಮತದಾನ ಮಾಡಲು ಬೇರೆ ದಾಖಲೆಗಳ ಆವಶ್ಯಕತೆ ಇಲ್ಲ. ರಾಜಕೀಯ ಪಕ್ಷಗಳು ನೀಡಿರುವ ವೋಟರ್ ಸ್ಲಿಪ್ ತೆಗೆದುಕೊಂಡು ಹೋದರೆ ಮತದಾನ ಮಾಡಲು ಬೇರೆ ದಾಖಲೆ ಕೂಡ ಬೇಕಾಗುತ್ತದೆ. ಮತದಾರರ ಗುರುತಿನ ಚೀಟಿ ಇಲ್ಲದಿದ್ದಲ್ಲಿ ಇತರ 21 ದಾಖಲೆಗಳ ಪೈಕಿ ಯಾವುದನ್ನಾದರೂ ತೋರಿಸಿ ಮತ ಚಲಾಯಿಸಬಹುದು. ಈ ಚುನಾವಣೆ ಯಲ್ಲಿ ಎಡಗೈಯ ಉಂಗುರ ಬೆರಳಿಗೆ ಶಾಯಿ ಹಾಕಲಾಗುತ್ತದೆ. ಏರಿದೆ ಕಾವು ನಗರಸಭೆಯ ಗದ್ದುಗೆ ಹಿಡಿಯಲು ಕಾಂಗ್ರೆಸ್, ಬಿಜೆಪಿ ಪಕ್ಷಗಳು ಇನ್ನಿಲ್ಲದ ರೀತಿಯಲ್ಲಿ ಪ್ರಯತ್ನ ಮುಂದುವರಿಸಿದ್ದು ಗುರುವಾರ ಕೂಡ ನಾನಾ ರೀತಿಯ ಕಸರತ್ತುಗಳು ನಡೆದವು. ವೈಯಕ್ತಿಕ ಕರೆಗಳು, ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮೊದಲಾದವುಗಳ ಮೂಲಕ ಮತ ಸೆಳೆಯುವ ಪ್ರಯತ್ನ ಮುಂದುವರಿದವು. ಪಕ್ಷೇತರ ಅಭ್ಯರ್ಥಿಗಳನ್ನು ಹೊರತು ಪಡಿಸಿದರೆ ಇತರ ಎಲ್ಲಾ ಅಭ್ಯರ್ಥಿಗಳ ಪರವಾಗಿಯೂ ಪಕ್ಷದ ಮುಖಂಡರು ಪ್ರಚಾರ ನಡೆಸಿದ್ದಾರೆ.
ಉಡುಪಿ ಬೋರ್ಡ್ ಹೈಸ್ಕೂಲ್‌ನಲ್ಲಿ ಮತದಾನಕ್ಕೆ ತಯಾರಿ ನಡೆಸುತ್ತಿರುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.