ಸುಂಕ ವಿನಾಯಿತಿ: ಪಡುಬಿದ್ರಿಗೂ ಇಲ್ಲ, ಸಾಸ್ತಾನಕ್ಕೂ ಇಲ್ಲ !
Team Udayavani, Feb 1, 2019, 1:00 AM IST
ಪಡುಬಿದ್ರಿ: ಹೆಜಮಾಡಿ ಟೋಲ್‌ನಲ್ಲಿ ಪಡುಬಿದ್ರಿ ಜಿ.ಪಂ. ವ್ಯಾಪ್ತಿಗೆ ಸುಂಕ ವಿನಾಯಿತಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಗುತ್ತಿಗೆದಾರ ಕಂಪೆನಿ ಪ್ರತಿಕೂಲ ನಿರ್ಧಾರವಾಗಿ ಸಾಸ್ತಾನದಲ್ಲೂ ಸುಂಕ ವಿನಾಯಿತಿ ರದ್ದತಿಗೆ ಉದ್ದೇಶಿಸಿದೆ.
ಸಾಸ್ತಾನದಲ್ಲಿ ನೀಡುವಂತೆ ವಿನಾಯಿತಿಯನ್ನು ಇಲ್ಲೂ ನೀಡಬೇಕೆಂದು ಪ್ರತಿಭಟನೆ ಆರಂಭವಾಗಿದ್ದು, 24 ದಿನ ಕಳೆದಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಜ. 31ರಂದು ಭೇಟಿ ಯಿತ್ತರು. ಈ ವೇಳೆ ಕಂಪೆನಿ ಅಧಿಕಾರಿ ಪ್ರತಿಕೂಲ ನಿರ್ಧಾರ ಪ್ರಕಟಿಸಿದ್ದಾರೆ.
ಸಾಸ್ತಾನ ಸುಂಕ ವಿನಾಯಿತಿ ರದ್ದು ತೀರ್ಮಾನ
ಮುಷ್ಕರ ನಿರತರ ಮನವಿಗೆ ಸ್ಪಂದಿ ಸಲು ಧನಾತ್ಮಕ ನಿರ್ಧಾರದೊಂದಿಗೆ ಬರುವಂತೆ ನವಯುಗ ಅಧಿಕಾರಿ ಶಂಕರ್ ರಾವ್ ಅವರನ್ನು ಜಿಲ್ಲಾಧಿ ಕಾರಿ ಕರೆಸಿದ್ದರು. ಅಧಿಕಾರಿಯೊಂದಿಗೆ ಅಭಿಪ್ರಾಯ ಸೂಚಿಸು ವಂತೆ ತಿಳಿಸಿದಾಗ ಮೇಲಧಿಕಾರಿ ಗೌರಿನಾಥ್‌ರೊಂದಿಗೆ ಮೊಬೈಲ್ ಸಂಭಾಷಣೆ ನಡೆಸಿ ಉತ್ತರಿಸಿ, ಸುಂಕ ವಿನಾಯಿತಿ ನೀಡಲಾಗದು. ಸಾಸ್ತಾನದಲ್ಲೂ ನೀಡಿರುವ ಸುಂಕ ವಿನಾಯಿತಿ ರದ್ದುಪಡಿಸುವ ಇರಾದೆಯಲ್ಲಿದ್ದೇವೆ. 20 ಕಿ.ಮೀ. ಸುತ್ತಳತೆ ಯಲ್ಲಿನ ಸ್ಥಳೀಯರು 255 ರೂ. ಗಳ ಪಾಸ್ ಪಡೆದುಕೊಳ್ಳುವಂತೆ ಅಧಿಕಾರಿ ತಿಳಿಸಿರುವುದಾಗಿ ಹೇಳಿದ್ದಾರೆ.
ಕಾನೂನಿನಲ್ಲಿ ಅವಕಾಶಗಳಿಲ್ಲ
ಈ ವೇಳೆ ನವಯುಗ ಕಂಪೆನಿಗೆ ಧಿಕ್ಕಾರ ಕೂಗಿದ ಪ್ರತಿಭಟನಕಾರರು ಹೆಜಮಾಡಿ ಒಳರಸ್ತೆಯ ಟೋಲ್‌ಗೇಟನ್ನು ತೆಗೆಯುವಂತೆ ಒತ್ತಾಯ ಹೇರಿದರು. ಈ ವೇಳೆ ಜಿಲ್ಲಾಡಳಿತ ಟೋಲ್ ವಿಚಾರದಲ್ಲಿ ಆದೇಶಿಸಲು ಕಾನೂನಿನಲ್ಲಿ ಅವಕಾಶ ಗಳಿಲ್ಲ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ, ರಾಜ್ಯ ಸರಕಾರಗಳ ನಡುವಿನ ವಿಚಾರ ಇದು. ರಾಜ್ಯ ಸರಕಾರ ನವಯುಗ ಕಂಪೆನಿಗೆ ಪೊಲೀಸ್ ರಕ್ಷಣೆ ನೀಡಲು ಹೇಳಿದಾಗ ಅದನ್ನು ನೀಡಲು ಆದೇಶಿಸಿದ್ದೆವು ಎಂದು ಜಿಲ್ಲಾಧಿಕಾರಿ ಮುಷ್ಕರ ನಿರತರಿಗೆ ಮನವರಿಕೆ ಮಾಡಿದರು.
ಉತ್ತರದಿಂದ ಅಸಮಾಧಾನಗೊಂಡ ಮುಷ್ಕರ ನಿರತರು ಸಾಸ್ತಾನದ ವಿನಾಯಿತಿ ಹಿಂತೆಗೆದುಕೊಂಡರೆ ಜಿಲ್ಲೆಯ ಜನತೆ ರೊಚ್ಚಿಗೇಳಲಿದ್ದಾರೆ. ನಾವು ನಿರ್ಧಾರಕ್ಕೆ ಬದ್ಧರಾಗಿ ಪ್ರತಿಭಟನೆ ಮುಂದುವರಿಸುವುದಾಗಿ ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ.
ಪಡುಬಿದ್ರಿ: ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆ ಟೋಲ್ ವಸೂಲಾತಿ ನಡೆಸುತ್ತಿದೆ ಎನ್ನುವ ಟೋಲ್ ವಿರೋಧಿ ಹೋರಾಟಗಾರರ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆಗೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೆದ್ದಾರಿ ಸರ್ವಿಸ್ ರಸ್ತೆ ಸುತ್ತಮುತ್ತಲಿನ ಅವ್ಯವಸ್ಥೆ ವೀಕ್ಷಿಸಿ ನವಯುಗ ಯೋಜನಾಧಿಕಾರಿ ಶಂಕರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಅವ್ಯವಸ್ಥೆ ಕಣ್ಣಾರೆ ದರ್ಶನ
ಪಡುಬಿದ್ರಿ ಕಾರ್ಕಳ ಜಂಕ್ಷನ್‌ಗಳಲ್ಲಿ ವಿದ್ಯುದ್ದೀಪ ಹತ್ತದಿರುವುದು, ಸಿಗ್ನಲ್ ದೀಪ ಅಳವಡಿಸದಿರುವುದು, ಉಡುಪಿ ಬಸ್ ನಿಲ್ದಾಣವನ್ನು ಇನ್ನೂ ನಿರ್ಮಿಸದೇ ವಿಳಂಬ ನೀತಿ ಅನುಸರಿಸುತ್ತಿರುವುದು, ಸರ್ವಿಸ್ ರಸ್ತೆಯಲ್ಲೇಳುತ್ತಿರುವ ಧೂಳಿನ ರಾಶಿ, ಹೆದ್ದಾರಿ ಬದಿಯಲ್ಲೇ ರಾಶಿ ಬಿದ್ದಿರುವ ದೊಡ್ಡ ಮರಗಳ ಬುಡಗಳು ಇತ್ಯಾದಿಗಳನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು.
’15ದಿನದಲ್ಲಿ ಸರ್ವಿಸ್ ರಸ್ತೆ ಮುಗಿಸಿ’
ನವಯುಗ ಅಧಿಕಾರಿ ಶಂಕರ್ ರಾವ್ ಅವರನ್ನು ಸ್ಥಳಕ್ಕೆ ಕರೆಸಿದ ಜಿಲ್ಲಾಧಿಕಾರಿ ನಿತ್ಯ ಮೂರು ಬಾರಿ ಧೂಳುಮಯ ರಸ್ತೆಗೆ ನೀರುಣಿಸುವಂತೆ ಮತ್ತು ನಾಳೆಯೊಳಗಾಗಿ ಮರಗಳ ಬುಡ ಸ್ಥಳಾಂತರಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ
Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ
Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್ ಶೆಟ್ಟಿ
Ajekar Case: ನ್ಯಾಯಾಂಗ ಬಂಧನ ವಿಸ್ತರಣೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
MUST WATCH
ಹೊಸ ಸೇರ್ಪಡೆ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.