ಎಸೆಸೆಲ್ಸಿ ಫಲಿತಾಂಶ: ಉಡುಪಿ 5ನೇ ಸ್ಥಾನಕ್ಕೆ ; ದ.ಕ. ಏಳನೇ ಸ್ಥಾನಕ್ಕೆ ಕುಸಿತ
Team Udayavani, May 1, 2019, 6:10 AM IST
ಉಡುಪಿ: ಎಸೆಸೆಲ್ಸಿ ಫಲಿತಾಂಶದಲ್ಲಿ ಎರಡು ವರ್ಷಗಳಿಂದ ಸತತ ಪ್ರಥಮ ಸ್ಥಾನಿಯಾಗಿದ್ದ ಉಡುಪಿ ಜಿಲ್ಲೆ ಈ ಬಾರಿ 5ನೇ ಸ್ಥಾನಕ್ಕೆ ಕುಸಿದಿದೆ. ನಾಲ್ಕು ಸ್ಥಾನ ಇಳಿಕೆಯಾದರೂ ಶೇಕಡಾವಾರು ಪ್ರಮಾಣದಲ್ಲಿ ತೀರಾ ಕಡಿಮೆಯಾಗಿಲ್ಲ.
ಕಳೆದ ವರ್ಷ ಶೇ.88.18 ಫಲಿತಾಂಶ ಸಿಕ್ಕಿದ್ದರೆ ಈ ಬಾರಿ ಶೇ.88.11 ದಾಖಲಿಸಿದೆ.
ಅನುತ್ತೀರ್ಣರಾಗಿರುವವರ ಪೈಕಿ ಸಮಾಜ ವಿಜ್ಞಾನ ಮತ್ತು ವಿಜ್ಞಾನಗಳಲ್ಲಿ ಎಡವಿದ ವಿದ್ಯಾರ್ಥಿಗಳು ಹೆಚ್ಚು ಎಂದು ಇಲಾಖೆಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ವಿಜ್ಞಾನ ಪಠ್ಯ ಹೊಸದಾಗಿದ್ದು, ಅಧ್ಯಾಪಕರಿಗೂ ಸವಾಲಾಗಿತ್ತು.
ಕೆಲವರು ಗಣಿತದಲ್ಲಿಯೂ ಅನುತ್ತೀರ್ಣರಾಗಿದ್ದಾರೆ. ಗಣಿತ ಪರೀಕ್ಷೆಗೆ ಮೂರು ದಿನಗಳ ಬಿಡುವು ಸಿಕ್ಕಿತ್ತು. ಈ ಅವಧಿಯಲ್ಲಿ ಕೆಲವೆಡೆ ಅಧ್ಯಾಪಕರು ವಿಶೇಷ ತರಗತಿ ನಡೆಸಿದ ಪರಿಣಾಮ ಅನುತ್ತೀರ್ಣರಾಗಬಹುದಿದ್ದ ವಿದ್ಯಾರ್ಥಿಗಳು ಕೂಡ ತೇರ್ಗಡೆಯಾಗಿದ್ದಾರೆ. ಆದರೆ ಇಂಥ ಶಿಬಿರಗಳಿಗೆ ಹಾಜರಾಗದ ಕೆಲವು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ಮೇಲ್ನೋಟಕ್ಕೆ ಗಮನಕ್ಕೆ ಬಂದಿದೆ.
ಆದಾಗ್ಯೂ ಉಡುಪಿ ಜಿಲ್ಲೆ ಸಾಧನೆಯಲ್ಲಿ ಇದ್ದಲ್ಲಿಯೇ ಇದೆ, ತುಂಬಾ ವ್ಯತ್ಯಾಸವಾಗಿಲ್ಲ. ಮುಂದಿರುವ ಇತರ 4 ಜಿಲ್ಲೆಗಳು ನಮ್ಮನ್ನು ದಾಟಿ ಮುಂದೆ ಹೋಗಿವೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಪರೀಕ್ಷೆ ಬರೆದ ಒಟ್ಟು 6,527 ಮಂದಿ ಗಂಡುಮಕ್ಕಳಲ್ಲಿ 5,555 ಮಂದಿ ಹಾಗೂ 6,476 ಹೆಣ್ಮಕ್ಕಳಲ್ಲಿ 5,902 ಮಂದಿ ತೇರ್ಗಡೆಯಾಗಿದ್ದಾರೆ. ಪ್ರಥಮ ಭಾಷೆಯಲ್ಲಿ ಶೇ.98.66, ದ್ವಿತೀಯ ಭಾಷೆಯಲ್ಲಿ ಶೇ.97.06, ತೃತೀಯ ಭಾಷೆಯಲ್ಲಿ 96.83, ಗಣಿತ ಶೇ.91.18, ವಿಜ್ಞಾನ ಶೇ.94.38 ಹಾಗೂ ಸಮಾಜವಿಜ್ಞಾನದಲ್ಲಿ ಶೇ.94.10 ಫಲಿತಾಂಶ ದಾಖಲಾಗಿದೆ.
ಕನ್ನಡ ಮಾಧ್ಯಮದ 6,784 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 5,527 (ಶೇ.81.47) ಮತ್ತು ಆಂಗ್ಲಮಾಧ್ಯಮದ 6,219 ಮಂದಿ ವಿದ್ಯಾರ್ಥಿಗಳ ಪೈಕಿ 5,930 (ಶೇ.95.35) ತೇರ್ಗಡೆಯಾಗಿದ್ದಾರೆ.
ಮಂಗಳೂರು: ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಜಿಲ್ಲಾವಾರು ರ್‍ಯಾಂಕ್ ಪಟ್ಟಿಯಲ್ಲಿ ಕಳೆದ ಬಾರಿ ನಾಲ್ಕನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಈ ಬಾರಿ ಶೇ.86.85 ಫಲಿತಾಂಶದೊಂದಿಗೆ ಏಳನೇ ಸ್ಥಾನಕ್ಕೆ ಕುಸಿದಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ
ವಾರು ಆಧಾರದಲ್ಲಿ ಶೇ.1.24ರಷ್ಟು ಏರಿಕೆಯಾಗಿದೆ.
ಈ ಬಾರಿ ಎರಡು ರೀತಿಯಲ್ಲಿ ಜಿಲ್ಲಾವಾರು ಫಲಿತಾಂಶ ಪ್ರಕಟ ಮಾಡಿದ್ದು, ಫಲಿತಾಂಶದ ಶೇಕಡಾವಾರು ಆಧಾರ ಮತ್ತು ಗುಣಮಟ್ಟ ಫಲಿತಾಂಶ ಎಂಬ ಎರಡು ವಿಭಾಗಗಳನ್ನು ಮಾಡಿ ಜಿಲ್ಲೆಗೆ ಶ್ರೇಯಾಂಕ ನೀಡಲಾಗಿದೆ. ಜಿಲ್ಲೆಗಳ ಶೇಕಡಾವಾರು ಆಧಾರದಲ್ಲಿ ದ.ಕ. ಜಿಲ್ಲೆಯು ಏಳನೇ ಸ್ಥಾನದಲ್ಲಿದ್ದರೆ, ಗುಣಮಟ್ಟದ ಫಲಿತಾಂಶ ಆಧಾರದಲ್ಲಿ ಐದನೇ ಸ್ಥಾನ ಪಡೆದಿದೆ.
ಜಿಲ್ಲೆಯ 17 ಸರಕಾರಿ ಶಾಲೆಗಳು ಶೇ.100 ಫಲಿತಾಂಶ ಪಡೆದರೆ, 5 ಅನುದಾನ ಮತ್ತು 62 ಅನುದಾನ ರಹಿತ ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಶಾಲೆಗಳಿಗೆ ಶೇ.100 ಫಲಿತಾಂಶ ಬಂದಿದೆ. ಒಟ್ಟಾರೆ 84 ಶಾಲೆಗಳಿಗೆ ಶೇ.100ರಷ್ಟು ಫಲಿತಾಂಶ ಬಂದಿದ್ದು, ಕಳೆದ ಬಾರಿ 66 ಶಾಲೆಗಳಿಗೆ ಬಂದಿತ್ತು.
ಈ ಬಾರಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸಿಂಚನಾ ಲಕ್ಷ್ಮೀ, ಸುಬ್ರಹ್ಮಣ್ಯ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಕೃಪಾ ಕೆ.ಆರ್., ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಅನುಪಮಾ ಕಾಮತ್ ಮತ್ತು ವಿಟ್ಲದ ವಿಜಯ ಪ್ರೌಢ ಶಾಲೆಯ ಚಿನ್ಮಯಿ 624 ಅಂಕ ಗಳಿಸಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ.
ಟಾಪ್ ಟೆನ್ ಶಾಲೆಗಳು
620 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿರುವ 12 ವಿದ್ಯಾರ್ಥಿಗಳು ಜಿಲ್ಲೆಯಲ್ಲಿದ್ದಾರೆ. ಕೋಟ ವಿವೇಕ ಆಂಗ್ಲಮಾಧ್ಯಮ ಶಾಲೆಯ ಅನಘಾ ಉಡುಪ 623, ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಪೃಥ್ವಿ ವಿ. ಶೆಟ್ಟಿ, ಉಡುಪಿ ಸೈಂಟ್ ಸಿಸಿಲೀಸ್ ಪ್ರೌಢಶಾಲೆಯ ಧನ್ಯಾ ಎಸ್., ಮುದರಂಗಡಿ ಸೈಂಟ್ ಫ್ರಾನ್ಸಿಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಚಂದನಾ ಶೆಣೈ, ಕುಂಜಿಬೆಟ್ಟು ಟಿ.ಎ. ಪೈ ಆಂಗ್ಲಮಾಧ್ಯಮ ಶಾಲೆಯ ಸುಪ್ರೀತಾ ನಾಯಕ್ ಮತ್ತು ಸುಮಂತ್ ಎಸ್. ಕಾರಂತ್ 622 ಅಂಕಗಳನ್ನು ಗಳಿಸಿದ್ದಾರೆ. ಕಾರ್ಕಳ ಎಸ್.ಬಿ. ಹೈಸ್ಕೂಲ್‌ನ ಬಿ. ವಿಭಾ ಶೆಣೈ, ಅಲೆವೂರು ಶಾಂತಿನಿಕೇತನ ಆಂಗ್ಲಮಾಧ್ಯಮ ಪ್ರೌಢಶಾಲೆಯ ಅಂಕಿತಾ ಪಿ. ಆಚಾರ್ಯ ಮತ್ತು ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಶೃತಾ 621, ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಎಂ. ಮನ್ವಿತ್ ಪ್ರಭು, ಕುಂದಾಪುರ ಶ್ರೀ ವೆಂಕಟರಮಣ ಶಾಲೆಯ ಸಂಜನಾ ಜೆ. ಮತ್ತು ಕುಂದಾಪುರ ವಿಕೆಆರ್ ಆಚಾರ್ಯ ಮೆಮೋರಿಯಲ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸೂರಜ್ ಎನ್.ಎಸ್. 620 ಅಂಕಗಳನ್ನು ಗಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.