ಕಂದಾಯ ಇಲಾಖೆಯ ಸೇವೆಯಲ್ಲಿ ಉಡುಪಿಗೆ ಅಗ್ರಸ್ಥಾನ


Team Udayavani, Feb 13, 2020, 5:44 AM IST

Revenu

ಉಡುಪಿ: ಕಂದಾಯ ಇಲಾಖೆಯಲ್ಲಿ ಬರುವ ಸೇವೆಯನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಉತ್ತಮ ಸಾಧನೆ ಮಾಡಿರುವ ಉಡುಪಿ ಜಿಲ್ಲಾಡಳಿತ ರಾಜ್ಯಕ್ಕೆ ಆಗ್ರ ಸ್ಥಾನ ಪಡೆದಿದೆ.

ಜನವರಿಯಲ್ಲಿ ರಾಜ್ಯ ಸರಕಾರ ಬಿಡುಗಡೆಗೊಳಿಸಿದ ಕಂದಾಯ ಇಲಾಖೆ ಸೇವೆಗಳ ಅನುಷ್ಠಾನದ ಜಿಲ್ಲೆಗಳ ಸಾಧನೆ ಪಟ್ಟಿಯಲ್ಲಿ ಉಡುಪಿ 100ಕ್ಕೆ 69 ಅಂಕ ಪಡೆದು ಪ್ರಥಮ ಸ್ಥಾನದಲ್ಲಿದೆ. 56.5 ಅಂಕ ಪಡೆದಿರುವ ಚಿತ್ರದುರ್ಗ ದ್ವಿತೀಯ 50.9 ಅಂಕ ಪಡೆದಿರುವ ಉತ್ತರ ಕನ್ನಡ ತೃತೀಯ ಸ್ಥಾನದಲ್ಲಿದೆ. ಬಳ್ಳಾರಿ ಕೊನೆಯ ಸ್ಥಾನದಲ್ಲಿದೆ.

ರೈತರಿಗೆ ಭೂಮಿ ಮ್ಯುಟೇಷನ್‌, 30 ದಿನದೊಳಗೆ ಭೂಮಿ ಮ್ಯುಟೇಷನ್‌, ವಸತಿ – ವಾಣಿಜ್ಯ ಉದ್ದೇಶಗಳಿಗಾಗಿ ಭೂ ಪರಿವರ್ತನೆ, ಎಸಿ ಕೋರ್ಟ್‌ನಲ್ಲಿರುವ ಪ್ರಕರಣ ವಿಲೇವಾರಿ, ಪೈಕಿ ಆರ್‌ಟಿಸಿ, ಸರ್ವೇ, ಪೋಡಿ ಸೇವೆಗಳಲ್ಲಿ ನೂರು ಅಂಕ ಗಳಿಸಿದೆ. ಉಳಿದಂತೆ ವ್ಯಾಜ್ಯಗಳನ್ನು ಪರಿಹರಿಸಿ ಭೂಮಿ ಮ್ಯುಟೇಷನ್‌ 89 ಅಂಕ, ಡಿಸಿ ಕೋರ್ಟ್‌ನಲ್ಲಿರುವ ಪ್ರಕರಣಗಳ ವಿಲೇವಾರಿ 30 ಅಂಕ., 79 ಎ ಬಿ ಪ್ರಕರಣಗಳ ವಿಲೇವಾರಿ 4 ಅಂಕ ಪಡೆದುಕೊಂಡಿದೆ.

ತಾಲೂಕುವಾರು ಟಾಪ್‌
15ರಲ್ಲಿ ಜಿಲ್ಲೆಯ 7 ತಾಲೂಕು 238 ತಾಲೂಕುಗಳ ಪೈಕಿ ಟಾಪ್‌ 15ರ ಪಟ್ಟಿಯಲ್ಲಿ ಜಿಲ್ಲೆಯ 7 ತಾಲೂಕುಗಳು, ಟಾಪ್‌ 10ರಲ್ಲಿ 5 ತಾಲೂಕುಗಳು ಕಂದಾಯ ಸೇವೆಯಲ್ಲಿ ಉತ್ತಮ ನಿರ್ವಹಣೆ ತೊರಿವೆ. ಮೊದಲ ಸ್ಥಾನ ಉಡುಪಿ, ಎರಡನೇ ಸ್ಥಾನ ಕಾಪು ಮತ್ತು ಮೂರನೇ ಸ್ಥಾನ ಬ್ರಹ್ಮಾವರ ಪಡೆದುಕೊಂಡಿದೆ.

ಮಾನದಂಡ
ರೈತರಿಗೆ ಭೂಮಿ ಮ್ಯುಟೇಷನ್‌, 30 ದಿನದೊಳಗೆ ಭೂಮಿ ಮ್ಯುಟೇಷನ್‌, ವಸತಿ ವಾಣಿಜ್ಯ ಉದ್ದೇಶಗಳಿಗಾಗಿ ಭೂ ಪರಿವರ್ತನೆ, ಎಸಿ ಕೋರ್ಟ್‌ನಲ್ಲಿರುವ ಪ್ರಕರಣ ವಿಲೇವಾರಿ, ಪೈಕಿ ಆರ್‌ಟಿಸಿ, ಸರ್ವೆ, ಪೋಡಿ ಸೇವೆ ಸೇರಿದಂತೆ 10 ವಿವಿಧ ಸೇವೆಗಳನ್ನು ನಿಗದಿತ ಕಾಲಮಿತಿಯೊಳಗೆ ಜನರಿಗೆ ತಲುಪಿಸಿದರೆ ರ್‍ಯಾಂಕ್‌ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಬಹುದು. ಜಿಲ್ಲೆಯ ಇಲಾಖೆಯ ಈ ಸಾಧನೆಯಿಂದ ಸದ್ಯ ರಾಜ್ಯದ ಗಮನ ಸೆಳೆದಿದೆ. ಮನೆಬಾಗಿಲಿಗೆ ಪಿಂಚಣಿಯನ್ನು ತಲುಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲೇ ಮೊದಲ ಪ್ರಯತ್ನ ಕೈಗೊಂಡ ಹಿರಿಮೆಯನ್ನು ಜಿಲ್ಲಾಡಳಿತ ಪಡೆದುಕೊಂಡಿದ್ದು ಬಡವರಿಗೆ ಕಂದಾಯ ಸೇವೆಯನ್ನು ಪ್ರಾಮಾಣಿಕವಾಗಿ ಮುಟ್ಟಿಸುವ ಕೆಲಸದ ಕಡೆಗೂ ಕೂಡ ಜಿಲ್ಲಾಡಳಿತ ಶ್ರಮಿಸುತ್ತಿದೆ.

ಸ್ಥಾನ ಉಳಿಸಿಕೊಂಡು ಉತ್ತಮ ಸೇವೆ ನೀಡುವತ್ತ ಗಮನ
ಜಿಲ್ಲಾಡಳಿತದ ಮಾತೃ ಇಲಾಖೆಯಾಗಿರುವ ಕಂದಾಯ ಇಲಾಖೆಗೆ ಹೆಚ್ಚು ಗಮನ ಕೊಡವಲ್ಲಿ ಮುತುವರ್ಜಿ ವಹಿಸಲಾಗಿದೆ. ಆರಂಭದಿಂದಲೂ ಕಂದಾಯ ಇಲಾಖೆಯ ಲೋಪಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳಿದ್ದವು. ಆರ್‌ಟಿಸಿ ಸಹಿತ ಹೀಗೆ ಯಾವುದೇ ಕೆಲಸಕ್ಕೆ ಅಲೆಯಬೇಕಾದ ಪರಿಸ್ಥಿತಿ. ಇದನ್ನು ಅರಿತು ದೃಢ ನಿರ್ಧಾರ ಹಾಗೂ ಸ್ವಂತ ಆಸಕ್ತಿಯಿಂದ ಕೆಲಸ ಕೈಗೊಳ್ಳಲಾಯಿತು. ಪ್ರತಿದಿನ ಜಿಲ್ಲಾಡಳಿತದಲ್ಲಿ ಆಗುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಖುದ್ದಾಗಿ ಪ್ರಗತಿ ಪರಿಶೀಲಿಸಿ ಹಿಂದೆ ಬಿದ್ದಿರುವ ಕೆಲಸಗಳನ್ನು ಸಂಬಂಧ ಪಟ್ಟವರಿಗೆ ಕರೆ ಮಾಡಿ ಕೆಲಸದ ವೇಗ ಹೆಚ್ಚಿಸುವ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ತಿಂಗಳಲ್ಲಿ ಪ್ರತಿ 15 ದಿನಕ್ಕೆ ತಹಶೀಲ್ದಾರ್‌ ಪ್ರಗತಿ ಪರಿಶಿಲನ ಸಭೆ ಮಾಡಲಾಗುವುದು, ಪ್ರತಿ ತಿಂಗಳು ಕಂದಾಯ ಇಲಾಖೆಯ ಸಭೆ ಸೇರಿಸಿ ಚರ್ಚಿ ಕೈಗೊಳ್ಳಾಗುತ್ತದೆ. ಮುಂದಿನ ದಿನಗಳಲ್ಲೂ ನಂಬರ್‌ ವನ್‌ ಸ್ಥಾನವನ್ನು ಕಾಯ್ದುಕೊಳ್ಳುವ ಗುರಿ ಹೊಂದಿದ್ದೇವೆ. ಎಡಿಸಿ, ಎಸಿ, ತಹಶೀಲ್ದಾರ್‌, ಪಿಡಿಒ ಎಲ್ಲರ ಸಹಕಾರ ಉತ್ತಮವಾಗಿದೆ.
ಜಿ. ಜಗದೀಶ್‌, ಉಡುಪಿ ಜಿಲ್ಲಾಧಿಕಾರಿ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

8

Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ

5-thekkatte

Thekkatte: ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.